ಕೋಲಾರ

ಭಾರತದ ಸರ್ವತೋಮುಖ ಅಭಿವೃದ್ಧಿಗೆ ಮೋದಿ ಮದ್ದು

Published On :

ಕ.ಪ್ರ.ವಾರ್ತೆ ಮಾಲೂರು ಅ. 20
ವಿವೇಕಾನಂದರಂತೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ದೇಶದ ಎಕೈಕ ಆಶಾ ಕಿರಣ ನರೇಂದ್ರ ಮೋದಿ ಆಗಿದ್ದಾರೆ ಎಂದು ಕೋಲಾರ ಲೋಕಸಭೆ ಉಸ್ತುವಾರಿ ಶಿವಕುಮಾರ್ ಹೇಳಿದರು.
ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸ್ಥಳೀಯ ಬಿಜೆಪಿ ಘಟಕ ಬೆಂಗಳೂರಿನಲ್ಲಿ ನ.16 ರಂದು ನಡೆಯಲಿರುವ ನಮೋ ರಾಜ್ಯ ಪ್ರವಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನ್ಯಾಯಲಯ ರಾಮ ಹುಟ್ಟಿದ ಜಾಗವಾದ ಅಯೋಧ್ಯೆಯಲ್ಲೇ ರಾಮಂದಿರ ನಿರ್ಮಿಸಬೇಕು ಎಂದು ಆದೇಶಿಸಿದರೂ ಮತ ಬ್ಯಾಂಕಿಗಾಗಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದೆ. ಈ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ನರೇಂದ್ರ ಮೋದಿ ದೇಶದ ಪ್ರದಾನಿಯಾಗಬೇಕಾಗಿದೆ. ಎಲ್ಲ ರಾಜಕೀಯ ಮುಖಂಡರ ಸಭೆಗೆ ಹಣ ಕೊಟ್ಟು ಜನರನ್ನು ಕರೆಸಲಾಗುತ್ತದೆ. ಆದರೆ ಮೋದಿ ಭಾಷಣ ಕೇಳಲು ಜನರೇ ಹಣ ಕೊಟ್ಟು ಬರುತ್ತಿದ್ದಾರೆ. ಇಂತಹ ಧೀಮಂತ ವ್ಯಕ್ತಿ ದೇಶದ ಪ್ರಧಾನಿಯಾಗಬೇಕಾದರೆ ಕೋಲಾರ ಕ್ಷೇತ್ರ ಈ ಬಾರಿ ಬಿಜೆಪಿಯ ಪಾಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗೆ ತೆರಳಿ ಮೋದಿ ಬಗ್ಗೆ ಪ್ರಚಾರ ಮಾಡಬೇಕಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮೋದಿ ಭಾಷಣಕ್ಕೆ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಹೋಗಬೇಕಾಗಿದೆ ಎಂದರು.
ಬಿಜೆಪಿ ಮುಖಂಡ ರಂಗಪ್ಪ ಮಾತನಾಡಿ, ಕಾಂಗ್ರೆಸ್ಸಿಗರು ಮೋದಿರವರನ್ನು ಗುಮ್ಮನ ರೀತಿಯಲ್ಲಿ ಮುಸ್ಲಿಂರಿಗೆ ತೋರಿಸಿ ಮತ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದರು. ಮಾಜಿ ಶಾಸಕ ಬಂಗಾರಪೇಟೆಯ ಎಂ.ನಾರಾಯಣಸ್ವಾಮಿ, ಕೆಜಿಎಫ್‌ನ ಸಂಪಂಗಿ, ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಮೋಹನ್‌ರೆಡ್ಡಿ, ವಿ. ಹನುಮಪ್ಪ ಮಾತನಾಡಿದರು. ಬಿ.ಎಂ. ಕೃಷ್ಣಪ್ಪ, ಕೆ.ಆರ್. ಬೀರಪ್ಪ,ನಾರಾಯಣಗೌಡ, ನರಸಿಂಹ ಮೂರ್ತಿ, ಜಯಂತಿಲಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಮೀಳಾ ಮಲ್ಲಿಕಾರ್ಜುನ್, ತಾಲೂಕು ಅಧ್ಯಕ್ಷೆ ಕನಕ ಶ್ರೀನಾಥ್, ತಾಪಂ ಸದಸ್ಯರಾದ ಗೋಪಾಲ್ ಗೌಡ, ಆನಂದ್,ಪುರಸಭೆ ಸದಸ್ಯ ರಾಮಮೂರ್ತಿ, ಶೇಷಗಿರಿ, ರಾಜರಾಂ,ದೇವರಾಜರೆಡ್ಡಿ, ತಬಲ ನಾರಾಯಣಪ್ಪ, ಅಪ್ಪಿ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್ ಗೌಡ, ರಾಮಕೃಷ್ಣ, ಮಂಜುಳ ವೆಂಕಟೇಶ್, ಪದ್ಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.