ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬುಗೆ ಸನ್ಮಾನ
ಕೋಲಾರ: ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬು, ಹಿರಿಯವಾಹನ ಚಾಲಕ ಕಮಲಾಕರ್, ಕಿರಿಯ ಆರೋಗ್ಯ ಸಹಾಯಕಿ ಗೌರಮ್ಮ ಅವರನ್ನು ನೌಕರರ ಸಂಘದ ಉಪಾಧ್ಯಕ್ಷ ಮುನಿರಾಜು ಸನ್ಮಾನಿಸಿದರು.
ಡಾ. ರಮೇಶ್ ಬಾಬು ಅವರು ತಮ್ಮ ಸೇವಾವಧಿಯಲ್ಲಿ ಸುಮಾರು 1.80 ಲಕ್ಷಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಉದರದರ್ಶಕ ಚಿಕಿತ್ಸೆ ನಡೆಸಿ ಸಾಧನೆ ಮಾಡಿದ್ದಾರಲ್ಲದೆ, ಜನಾನುರಾಗಿಯಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಕಮಲಾಕರ್ ಅವರು ವಾಹನ ಚಾಲಕರಾಗಿ ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದು, ಗೌರಮ್ಮ ಅವರ ಸೇವೆಯನ್ನು ಸ್ಮರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ಪಿ.ಎಸ್. ಕೃಷ್ಣಮೂರ್ತಿ, ಡಾ. ಸಿದ್ದಲಿಂಗಯ್ಯ, ಡಿಹೆಚ್ಓ ಪೈಯಾಜ್ ಖಾನ್, ಆರೋಗ್ಯ ಸಹಾಯಕಿಯರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ನೌಕರರ ಸಂಘದ ಯಾರಂಘಟ್ಟ ನಾರಾಯಣಸ್ವಾಮಿ, ವೆಂಕಟೇಶ ಬಾಬು, ಆಸ್ಪತ್ರೆಯ ಸಿಬ್ಬಂದಿ ಚಂದ್ರಶೇಖರ್, ನಾಗರಾಜ್, ರಘು, ಪುಷ್ಪಾವತಿ, ಬೀರಪ್ಪ ಮತ್ತಿತರರು ಇದ್ದರು.
ಹೋರಾಟಕ್ಕೆ ಕರೆ
ಮಾಲೂರು: ತ್ಯಾಜ್ಯ ನಿರ್ವಹಣಾ ಘಟಕ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೋವವಾರ ನಡೆದ ಪರಿಸರ ಸಾರ್ವಜನಿಕ ಸಭೆಯ ವೈಖರಿ ಗಮನಿಸಿದರೆ ತಾಲೂಕಿನ ಜನತೆಗೆ ನ್ಯಾಯ ಸಿಗುವುದು ಅನುಮಾನ ಎನಿಸುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿವೃತ್ತ ಅಧಿಕಾರಿ ರಾಮಯ್ಯ ಅಂತಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಅಧ್ಯಕ್ಷತೆಯಲ್ಲಿ ತಾಲೂಕಿನ ಪಿಚ್ಚುಗುಂಟ್ರಹಳ್ಳಿಯಲ್ಲಿ ನೆಡೆದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯ ನಂತರ ಕನ್ನಡ ಪ್ರಭದೊಂದಿಗೆ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

