ಪುರಸಭೆ ನಿರ್ಲಕ್ಷ್ಯ; ನಾರುತ್ತಿರುವ ಚರಂಡಿಗಳು
ಶಿಡ್ಲಘಟ್ಟ: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಚರಂಡಿಗಳಲ್ಲಿ ತುಂಬಿರುವ ಕಸದಿಂದ ಓಡಾಡುವುದು ದುಸ್ತರವಾಗಿದೆ ಎಂದು ಪಟ್ಟಣದ ಆಟೋ ಚಾಲಕರು ಆರೋಪಿಸಿದ್ದಾರೆ. ಪುರಸಭೆ ಅಧಿಕಾರಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ತಿಂಗಳುಗಳೆ ಕಳೆದಿದೆ, ಮಳೆ ಬಂದರೆ ಚರಂಡಿಗಳಲ್ಲಿನ ಕೊಳಚೆ ಹೊರಹೋಗುತ್ತದೆ, ಇಲ್ಲವಾದರೆ ಚರಂಡಿಗಳಲ್ಲೆ ಕೊಳೆತು ನಾರುತ್ತದೆ. ಇದರಿಂದ ನಾಗರಿಕರು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಆಟೋ ಚಾಲಕರಾದ ರವಿ, ಶ್ರೀನಿವಾಸ್, ರಮೇಶ್, ಮೌಲ, ಬಾಬು, ಗಿರೀಶ್, ಅಶೋಕ್, ಸೀನಪ್ಪ, ಚಂದ್ರಪ್ಪ ಇದ್ದರು.
ಲಕ್ಷ್ಮೀ ವಿಲಾಸ ಬ್ಯಾಂಕ್ ಲೋಕಾರ್ಪಣೆ
ಕ.ಪ್ರ.ವಾರ್ತೆ ಬಂಗಾರಪೇಟೆ ಅ. 21
ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಖಾಸಗಿ ಬ್ಯಾಂಕುಗಳು ರಾಜ್ಯದಲ್ಲಿ ಉತ್ತಮ ಸೇವೆ ನೀಡುತ್ತಿರುವುದನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಶ್ಲಾಘಿಸಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಲಕ್ಷ್ಮೀ ವಿಲಾಸ ಬ್ಯಾಂಕ್ ಲೋಕಾರ್ಪಣೆ ಮಾಡಿ ಮಾತನಾಡಿ, ಲಕ್ಷ್ಮೀವಿಲಾಸ ಬ್ಯಾಂಕು ಕಳೆದ 87 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಗ್ರಾಹಕರಿಂದ ಮೆಚ್ಚುಗೆ ಪಡೆದು ಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಕಿನ ಎಂ.ಡಿ. ಆಂಜನೇಯಲು ಮಾತನಾಡಿ, 1920ರಲ್ಲಿ ಕರೂರ್ನಲ್ಲಿ ಜನ್ಮ ತಾಳಿದ ಲಕ್ಷ್ಮೀವಿಲಾಸ್ ಬ್ಯಾಂಕ್ ಈವರೆಗೂ 308 ಶಾಖೆಗಳನ್ನು ಹೊಂದಿದೆ. ಮುಂದೆ ಸಾವಿರ ಶಾಖೆಗಳನ್ನು ಮಾಡುವ ಗುರಿ ಇದೆ ಎಂದು ಹೇಳಿದರು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು. ಬ್ಯಾಂಕಿನ ನಿರ್ದೇಶಕ ಡಾ. ಶಂಕರ್, ಕುಸುಮಾ ಮುನಿರಾಜು, ಗಂಗಾಧರ್, ವ್ಯವಸ್ಥಾಪಕ ರಾಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪಾರ್ಥಸಾರಥಿ, ನಂಜಪ್ಪ, ಶಂಷುದ್ದಿನ್ ಬಾಬು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

