ಕೋಲಾರ

ಮನೆ ಬೀಗ ಹೊಡೆದು ಲಕ್ಷಾಂತರ ಬೆಲೆ ಬಾಳುವ ನಗ, ನಾಣ್ಯ ಲೂಟಿ

Published On :

ಚಿಂತಾಮಣಿ: ತೀರ್ಥ ಯಾತ್ರೆಗೆ ಹೋಗಿದ್ದ ಮನೆಯ ಬೀಗ ಹೊಡೆದು ಲಕ್ಷಾಂತರ ರು. ಬೆಲೆ ಬಾಳುವ ನಗ, ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಎನ್.ಆರ್. ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಡಾವಣೆಯ ಆರೋಗ್ಯ ಇಲಾಖೆ ಗೋಪಾಲಕೃಷ್ಣ ಎಂಬುವರು ಕುಟುಂಬ ಸಮೇತವಾಗಿ ತಿರುಪತಿ ಯಾತ್ರಾ ಸ್ಥಳಕ್ಕೆ ಹೋಗಿದ್ದಾಗ ಕಳ್ಳರ ಗುಂಪೊಂದು ಮನೆ ಬೀಗ ಹೊಡೆದು ಒಳನುಗ್ಗಿ ಬೀರುನಲ್ಲಿದ್ದ ಸುಮಾರು 1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಸೇರಿದಂತೆ 20 ಸಾವಿರ ನಗದನ್ನು ದೋಚಿ ಪರಾರಿಯಾಗಿರುವುದಾಗಿ ಮನೆ ಮಾಲೀಕ ಗೋಪಾಲಕೃಷ್ಣ ದೂರು ನೀಡಿದ್ದು ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳ ಪರಿಶೀಲಿಸಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಕರೆಸಲಾಗಿ ಸುಮಾರು 1 ಕಿ.ಮೀ ಸುತ್ತು ವೀಕ್ಷಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬಾಯ್ಲರ್ ಶಾಕ್‌ನಿಂದ ಬಾಲಕ ಸಾವು
ಬಂಗಾರಪೇಟೆ: ನೀರು ಕಾದಿದೆಯೋ ಇಲ್ಲವೋ ನೋಡಲು ವಿದ್ಯಾರ್ಥಿಯೊಬ್ಬ ಬಾಯ್ಲರ್ ಒಳಗೆ ಕೈಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ತಾಲೂಕಿನ ಲೆಕ್ಕೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಬಾಲಕೃಷ್ಣ ಎಂಬವರ ಏಕೈಕ ಪುತ್ರ ಆದರ್ಶ 14 ಸೋಮವಾರ ಬೆಳಗ್ಗೆ ತಮ್ಮ ಮನೆಯಲ್ಲಿ ವಿದ್ಯುತ್ ಬಾಯ್ಲರ್‌ಗೆ ಕೈ ಹಾಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆ: ಟೇಕಲ್‌ಸಮೀಪದ  ಹಳೇಪಾಳ್ಯ ಗ್ರಾಮದ ಸಮೀಪದಲ್ಲಿ ಶಂಕರಪ್ಪ (32)ಅವರು ಅನುಮಾನಾಸ್ಪದವಾಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರಪ್ಪ ಚಿಂತಾಮಣಿ ತಾಲೂಕಿನ ಗಂಜೂರು ಗ್ರಾಮದ ನಿವಾಸಿಯಾಗಿದ್ದು ಇದೇ ಗ್ರಾಮದ ಸರಸ್ವತಮ್ಮನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.