ಕೋಲಾರ

'ಅನುದಾನ ಸಮರ್ಪಕ ಬಳಕೆಯಾಗಲಿ'

Published On :

ಶಿಡ್ಲಘಟ್ಟ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ನೀಡುತ್ತಿರುವ ಅನುದಾನಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ತಾಲೂಕಿನ ಮಳ್ಳೂರು ಗ್ರಾಪಂ ವ್ಯಾಪ್ತಿಯ ಮುತ್ತೂರು ಗ್ರಾಮದಲ್ಲಿ ಸುಮಾರು ರು. 37 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಸುವರ್ಣ ಗ್ರಾಮ, ರು. 3.60 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅಡುಗೆ ಕೋಣೆ ನಿರ್ಮಾಣ  ಹಾಗೂ ಗ್ರಾಮಕ್ಕೆ ಕುಡಿಯುವ ನೀರಿನ ನೂತನ ಕೊಳವೆ ಬಾವಿಯನ್ನು ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳಿಗಾಗಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ನಾಗರಿಕರು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಜಯ್ ದಾಸ್ ಗುಪ್ತಾ ಟ್ರಸ್ಟಿನ ಉಷಾಶೆಟ್ಟಿ, ಮುರಳಿ, ಡಿ.ನಾರಾಯಣಸ್ವಾಮಿ, ಎಂ.ಕೆ. ರೆಡ್ಡಿ, ಎಂ.ವಿ. ಗೋವಿಂದಪ್ಪ, ಎಂ.ಪಿ. ರವಿ, ದೇವರಾಜು, ಅಶ್ವತ್ಥನಾರಾಯಣ, ಸೂರ್ಯನಾರಾಯಣಗೌಡ, ಬಂಕ್ ಮುನಿಯಪ್ಪ, ಪಿ.ವಿ. ನಾಗರಾಜ್, ಹುಜುಗೂರು ರಾಮಣ್ಣ, ಮೇಲೂರು ಕೆ. ಮಂಜುನಾಥ್, ಆರ್.ಎ. ಉಮೇಶ್, ಗಂಗನಹಳ್ಳಿ ರಾಮಾಂಜಿನಪ್ಪ ಹಾಜರಿದ್ದರು.

ಭಾವಪೂರ್ಣ ಶ್ರದ್ಧಾಂಜಲಿ
ಗೌರಿಬಿದನೂರು: ಹೋಬಳಿಯ ಮುಖಂಡರು ಹಾಗೂ ಬೆಂಗಳೂರು ನಗರ ಕೆಜೆಪಿ ಪಕ್ಷದ ಅಧ್ಯಕ್ಷರೂ ಆಗಿದ್ದ ಮಂಚೆನಹಳ್ಳಿಯ ದಿವಂಗತ ಎಸ್.ಎನ್. ಈಶ್ವರ್ ಅವರಿಗೆ ಹೋಬಳಿಯ ಅಭಿಮಾನಿಗಳು ಗ್ರಾಮದ ತಲ್ಲಂ ಕಲ್ಯಾಣ ಮಂಟಪದಲ್ಲಿ ಭಾವಪೂರ್ಣ ನಮನ ಸಲ್ಲಿದರು.
ಸಭೆಯಲ್ಲಿ ಆನಂದತೀರ್ಥರಾವ್, ಚನ್ನಪ್ಪ ಮಾತನಾಡಿದರು. ತಾಪಂ ಸದಸ್ಯ ಬಿ.ಎನ್. ಪ್ರಕಾಶ್ ರೆಡ್ಡಿ, ಪಿ.ಎನ್. ಜಗನ್ನಾಥ್, ಹಳೇಹಳ್ಳಿ ಶಿವಕುಮಾರ್, ಚಂದ್ರಾಯಚಾರ್, ರಾಮಸ್ವಾಮಿ, ದಿನೇಶ್, ಗಣೇಶ್ ಪ್ರಸನ್ನ, ರಾಮನಾಥ್,  ಹೋಸೆಳಪ್ಪ, ಸುಬ್ಬಣ್ಣ, ಟಿ.ಪಿ. ವೆಂಕಟೇಶ್ ಮೂರ್ತಿ, ಸನ್ಮತಿ ಕುಮಾರ್, ರಮೇಶ್, ರಾಜಶೇಖರ್, ಮಂಜುನಾಥ್ ರಾವ್, ಮುರುಳಿ ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಚಿರತೆ ಸೆರೆ; ಜನರ ದುಗುಡ ದೂರ
ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ, ಹುಲಿಕೆರೆ, ಬಸ್ತೀಪುರ ಮತ್ತಿತರ ಗ್ರಾಮಗಳಲ್ಲಿ ಕಳೆದ ಹದಿನೈದು ದಿನಗಳಿಂದ ಆಡು, ಮೇಕೆಗಳು ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತಿರುವ ಬೆನ್ನಹಿಂದೆಯೇ ಭಾನುವಾರ ಬೆಳಗೊಳ ಪೇಪರ್ ಮಿಲ್ ಕಾರ್ಖಾನೆ ಆವರಣದಲ್ಲಿ ದನಗಾಹಿ ಹುಡುಗರಿಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮತ್ತು ಕೆಆರ್‌ಎಸ್ ಪೊಲೀಸರು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದರು. ರಾತ್ರಿ ಸುಮಾರು 9.30ರ ಮಸಯದಲ್ಲಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. ಹುಲಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹದಿನೈದು ದಿನಗಳಿಂದಲೂ ಆಡು, ಕುರಿಗಳು ನಿಗೂಡವಾಗಿ ಕಾಣೆಯಾಗುತ್ತಿದ್ದವು. ಇದರಿಂದ ಸಹಜವಾಗಿಯೇ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಭಾನುವಾರ ಬೆಳಗ್ಗೆ ತಾಲೂಕಿನ ಬೆಳಗೊಳ ಪೇಪರ್ ಮಿಲ್ ಹಳೆ ಕಾರ್ಖಾನೆಯ ಪಾಳುಬಿದ್ದ ಪ್ರದೇಶದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಮೇಯಿಸುತ್ತಿದ್ದ ಹುಡುಗರಿಗೆ ಚಿರತೆ ಕಾಣಿಸಿಕೊಂಡಿದೆ. ಹೀಗೆ ಪ್ರತ್ಯಕ್ಷಗೊಂಡ ಚಿರತೆ ಕುರಿಯೊಂದನ್ನು ಹಿಡಿದು ಕಾರ್ಖಾನೆಯ ಆವರಣದಲ್ಲಿದ್ದ ಹಳೆಯ 50 ಮೀ. ಉದ್ದದ  ಕಬ್ಬಿಣದ ಪೈಪ್‌ನೊಳಗೆ ಎಳೆದೊಯ್ಯಿತು ಎಂದು ಪ್ರತ್ಯಕ್ಷದರ್ಶಿ ಹುಲಿಕೆರೆ ವಿಶ್ವನಾಥ್ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ವಿಷಯ ತಿಳಿದ 50ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಈ ಪೇಪರ್ ಮಿಲ್ ಆವರಣದ ಖಾಲಿ ಜಾಗದ ಅಲ್ಲಲ್ಲಿ ಕುರಿ, ಮೇಕೆ,ನಾಯಿಯ ಅಸ್ಥಿಪಂಜರಗಳು ಸಿಕ್ಕಿವೆ. ಜೊತೆಗೆ ಹತ್ತಿರದಲ್ಲೇ ಇದ್ದ ಕಬ್ಬಿಣದ ಪೈಪಿನಿಂದ ಚಿರತೆಯ ಘರ್ಜನೆ ಕೇಳಿದ ಗ್ರಾಮಸ್ಥರು, ಚಿರತೆ ಇರುವುದನ್ನು ಖಚಿತಪಡಿಸಿಕೊಂಡು ಪೈಪಿನ ಎರಡು ಭಾಗವನ್ನು ಕಲ್ಲುಗಳಿಂದ ಮುಚ್ಚಿ ಅರಣ್ಯಾಧಿಕಾರಿಗಳು ಮತ್ತು ಕೆಆರ್‌ಎಸ್ ಪೊಲೀಸರಿಗೆ ಸುದ್ದಿ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ತಾಲೂಕಿನ ಅರಣ್ಯಾಧಿಕಾರಿ ಮಹಮದ್ ಜಾಫರ್ ಮತ್ತು ಸಿಬ್ಬಂದಿ ಸ್ಥಳೀಯ ಕೆಆರ್‌ಎಸ್ ಪೊಲೀಸರ ನೆರವಿನೊಂದಿಗೆ ಚಿರತೆಯ ಸೆರೆಗಾಗಿ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಚಿರತೆಯನ್ನು ಬೋನಿಗೆ ಕೆಡುವುವಲ್ಲಿ ಯಶಸ್ವಿಯಾದರು.

'ಸಹಕಾರ ಅವಶ್ಯ'
ಪಾಂಡವಪುರ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಯಶಸ್ವಿಯಾಗಲು ಗ್ರಾಮಸ್ಥರ ಸಹಕಾರ ಅವಶ್ಯಕವಾಗಿದೆ ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಹೇಳಿದರು. ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ 7 ದಿನಗಳ ಕಾಲ ಪಾಂಡವಪುರ ಸರ್ಕಾರಿ ಪದವಿ ವೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಸಮರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿ ಎಂದರು. ಪಿಎಸಿಎಸ್ ಅಧ್ಯಕ್ಷ ಸಿ. ಸ್ವಾಮೀಗೌಡ ಮಾತನಾಡಿ, ಗ್ರಾಮವನ್ನು ಸ್ಚಚ್ಛತೆಯಿಂದ ಇಟ್ಟಿಕೊಳ್ಳುವುದು ಜವಾಬ್ದಾರಿಯಾಗಿದೆ. ಆದ್ದರಿಂದ ಗ್ರಾಮದ ಜನತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.