ಕೋದಂಡರಾಮಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಕ್ರಮ: ಎಸ್ಸೆನ್ನೆನ್
ಕ.ಪ್ರ.ವಾರ್ತೆ ಬಂಗಾರಪೇಟೆ ಅ. 22
ಪಟ್ಟಣದ ಪುರಾತನದ ಕೋದಂಡರಾಮಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬರೂ ಪಕ್ಷಬೇಧ ಮರೆತು ಸಹಕರಿಸಿದರೆ ಜಿಲ್ಲೆಯಲ್ಲೆ ಮಾದರಿ ದೇವಾಲಯ ಮಾಡುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸದರಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಸಭೆ ಕರೆದಿದ್ದು ಪುರಾತನ ದೇವಾಲಯವಾಗಿದ್ದರೂ ಸಹ ಇದುವರೆಗೂ ದೇವಾಲಯ ಜೀರ್ಣೋದ್ದಾರಕ್ಕೆ ಯಾವೊಬ್ಬರು ಗಮನಹರಿಸದೆ ಇದ್ದರಿಂದ ಇಂದು ದೇವಾಲಯ ಆವರಣದ ಸುತ್ತಲೂ ಕಿಡಿಕೇಡಿಗಳು ಕಲುಷಿತಗೊಳಿಸಿರುವುದರಿಂದ ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.
ಭಕ್ತಾದಿಗಳ ದೂರಿನ ಮೇರೆಗೆ ದೇವಾಲಯವನ್ನು ಅಭಿವೃದ್ಧಿಪಡಿಸಲು ಸಮಿತಿ ಸಭೆ ಕರೆದಿದ್ದು, ಯಾವ ರೀತಿಯಲ್ಲಿ ದೇವಾಲಯ ಮತ್ತು ದೇವಾಲಯದ ಖಾಲಿಯಿರುವ ಜಾಗದಲ್ಲಿ ಯಾವ ಕಟ್ಟಡ ನಿರ್ಮಾಣ ಮಾಡಿದರೆ ದೇವಾಲಯಕ್ಕೆ ಶಾಶ್ವತ ವರಮಾನ ಬರುವುದು ಎಂಬ ಬಗ್ಗೆ ಪ್ರಶ್ನೆಗೆ ಖಾಲಿ ನಿವೇಶನದಲ್ಲಿ ಹಾಗೂ ಈಗಿರುವ ಮಳಿಗೆಗಳನ್ನು ಕೆಡವಿ ಕಲ್ಯಾಣ ಮಂಟಪ, ವಾಣಿಜ್ಯ ಸಂಕಿರಣ, ಬ್ಯಾಂಕಿಗೆ ಕಟ್ಟಡ, ವಾಹನಗಳ ನಿಲ್ದಾಣ ಮಾಡಿದರೆ ಉತ್ತಮ ಎಂದು ಸಮಿತಿ ಸದಸ್ಯರು ಸಲಹೆ ನೀಡಿದರು.
ಸಮಿತಿ ಸದಸ್ಯ ಬಿ.ಸಿ. ಶ್ರೀನಿವಾಸಮೂರ್ತಿ ಮಾತನಾಡಿ, ಎರಡು ತಿಂಗಳ ಹಿಂದೆ ದೇವಾಲಯ ಜೀರ್ಣೋದ್ಧಾರಕ್ಕೆ ತಾತ್ಕಾಲಿಕ ಸಮಿತಿಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿತ್ತು. ಈ ಪಟ್ಟಿಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದಾರೆಂದು ಸಭೆ ಗಮನಕ್ಕೆ ತಂದಾಗ ಕೆ. ಚಂದ್ರಾರೆಡ್ಡಿ ತಾತ್ಕಾಲಿಕ ಪಟ್ಟಿಯನ್ನು ಶಾಸಕರ ಗಮನಕ್ಕೆ ತರದೆ ಜಿಲ್ಲಾಧಿಕಾರಿ ಕಚೇರಿಗೆ ಯಾಕೆ ಕಳುಹಿಸಿದ್ದು ಎಂದು ದೇವಾಲಯ ಇಒ ಮರಿರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಶಾಸಕರಿಗೆ ತಿಳಿಸದೆ ಯಾವುದೇ ಕೆಲಸ ಮಾಡಬಾರದು ಎಂದು ಹೇಳಿದ ಮಾತಿಗೆ ಕೆಲ ಸದಸ್ಯರಿಗೆ ಇರಿಸು ಮುರುಸಾಯಿತು. ನಂತರ ಶಾಸಕ ನಾರಾಯಣಸ್ವಾಮಿ ಅಸಮಾಧಾನಕ್ಕೆ ತೆರೆ ಎಳೆದರು.
ನಂತರ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ದೇವಾಲಯ ಅಭಿವೃದ್ಧಿಗೆ ಮೊದಲು ಇಒ ಅವರಿಗೆ ಇಚ್ಛಾಶಕ್ತಿ ಇರಬೇಕು. ಆದರೆ ಸೋಮಾರಿತನದಿಂದ ದೇವಾಲಯದ ಕೋಟ್ಯಂತರ ಆಸ್ತಿ ಇದ್ದರೂ ಉಪಯೋಗಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿರುವುದರಿಂದ ಅಭಿವೃದ್ಧಿ ಕಂಡಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿ, ದೇವಾಲಯಕ್ಕೆ ಹೊಸ ರೂಪ ಕೊಟ್ಟು ವಾರ್ಷಿಕವಾಗಿ ಲಕ್ಷಾಂತರ ಆದಾಯ ಬರುವಂತೆ ಅಭಿವೃದ್ಧಿಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬರುವುದಾಗಿ ಹೇಳಿದರು. ಈ ಕಾರ್ಯಕ್ಕೆ ಶಾಸಕರೊಬ್ಬರು ಶ್ರಮಿಸಿದರೆ ಸಾಲದು. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋರಿದಾಗ ಶಾಸಕರ ನಿರ್ಧಾರಕ್ಕೆ ಸಮಿತಿ ಸದಸ್ಯರು ಒಪ್ಪಿಗೆ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಪಲ್ಲವಿಮಣಿ, ಅರುಣಾಚಲಂಮಣಿ, ಕೆ. ಚಂದ್ರಾರೆಡ್ಡಿ,ನಾಗಪ್ರಕಾಶ್, ಪಾರ್ಥಸಾರಥಿ, ಸುಗೇಂದ್ರನ್, ವೈ.ವಿ. ರಮೇಶ್, ಮಂಜುನಾಥ್, ಎಚ್.ಎಲ್. ನಾಗರಾಜ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

