ನೀಲಗಿರಿ ತೋಪಿನಲ್ಲಿ ನಿಧಿ ನಿಕ್ಷೇಪ ಶೋಧ
-ಟೇಕಲ್ ಲಕ್ಷ್ಮೀಶ್
ಟೇಕಲ್: ನೀಲಗಿರಿ ತೋಪಿನಲ್ಲಿ ನಿಧಿ ನಿಕ್ಷೇಪಗಳು ಗೋಚರಗೊಂಡಿದ್ದು, ಬಹಳ ವಿಸ್ಮಯಕಾರಿ ವಿಚಾರಗಳು ನಡೆದಿರುವುದು ಮಾಲೂರು ತಾಲೂಕಿನ ಟೇಕಲ್ ಸಮೀಪದ ನಿದರಮಂಗಲ ಗ್ರಾಮದ ಬೈರಪ್ಪನವರ 8 ಎಕರೆ ನೀಲಗಿರಿ ತೋಪಿನಲ್ಲಿ ಅಚ್ಚರಿ ಮೂಡಿಸುವುದು ಹಾಗೂ ನಿಧಿ ಶೋಧ ನಡೆಸಿ ಚೋರರು ನಿಧಿಯನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿದೆ.
ಏನಿದು ನಿಧಿ?: ನಿದರಮಂಗಲ ಗ್ರಾಮದ ಕೆರೆಯ ಅಂಚಿನಲ್ಲಿರುವ ಎಂಟು ಎಕರೆ ನೀಲಗಿರಿ ತೋಪಿನ ಮಧ್ಯೆದೊಳಗೆ ಸುಮಾರು 15ರಿಂದ 18 ಅಡಿ ಉದ್ದದ ಬಂಡೆಗಳನ್ನು ನಿಧಿ ಚೋರರು ತಮ್ಮ ಕೈಚಳಕ ತೋರಿಸಿ ಸುಮಾರು 15ರಿಂದ 16 ಅಡಿ ಉದ್ದದ ಹಾಗೂ 10 ಅಡಿ ಅಗಲದ ಕಲ್ಲು ಬಂಡೆ ಕೆಳಗೆ ಅಗೆದು ಅದರೊಳಗೆ ಸುರಂಗ ಕಾಣಿಸಿದ್ದು, ಸುತ್ತಲೂ ಕಲ್ಲು ಕಟ್ಟಡ ಹಾಗೂ ಆಗಿನ ಕಾಲದ ಚಪ್ಪಡಿಯು ಚೌಕಾಕಾರದಲ್ಲಿ ಇಟ್ಟಿದ್ದು ಇನ್ನೂ ಕೆಳಗಿಳಿದು ಒಳ ಹೊಕ್ಕರೆ ಸುಮಾರು ಮಡಿಕೆಗಳು ಇದ್ದವೆಂದು ಮಡಿಕೆಗಳಲ್ಲಿ ಏನಿತ್ತು ಎಂಬುದು ನಿಗೂಢವಾಗಿದೆ. ಪ್ರಸಿದ್ಧ ಮಾಂತ್ರಿಕರು ಮಾತ್ರ ಈ ಕೆಲಸ ಮಾಡಲು ಸಾಧ್ಯವಾಗಿದ್ದು, ಅದರಲ್ಲಿ ನಿಧಿ ಇತ್ತೆಂದು ನಿಧಿ ಚೋರರು ಅದನ್ನು ಒಂದು ತಿಂಗಳ ಹಿಂದೆ ಹಾಗೂ ಸುಮಾರು ದಿನಗಳಿಂದಲೂ ತೆಗೆದುಕೊಂಡು ಹೋಗಿದ್ದಾರೆಂದು ಸ್ಥಳೀಯರು ದೃಢಪಡಿಸಿದ್ದಾರೆ.
ವಿಸ್ಮಯಕಾರಿ ವಿಷಯಗಳು: ಈ 8 ಎಕರೆ ಪ್ರದೇಶ ಬೈರಪ್ಪನವರಿಗೆ ಸೇರಿದ್ದು ಇವರ ತಂದೆ ಚಿಕ್ಕಣ್ಣನವರು ಅಂದಿನ ಕಾಲದಲ್ಲಿ ಊರಿನಿಂದ ದೂರವಿರುವ ಈ ನೀಲಗಿರಿ ತೋಪಿನಲ್ಲಿ ಪಾಳು ಮನೆಯಂತಿರುವ ಈ ಸ್ಥಳದಲ್ಲಿ ವಾಸಿಸುತ್ತಿದ್ದರು. ತದನಂತರ ಅದು ಶಿಥಿಲಗೊಂಡಿದೆ ಮನೆ. ಅದೇ ತೋಪಿನಲ್ಲಿ ಪುರಾತನ ಕಾಲದ ನಾಗರ ಕಲ್ಲುಗಳೂ ಇವೆ ಹಾಗೂ ವಿಶೇಷವಾಗಿ ಕೆಲವು ಬಂಡೆಗಳ ಮೇಲೆ ವಿವಿಧ ರೀತಿಯಾದ ನಕ್ಷೆಗಳು ಇದ್ದು ಕೆಲವು ಬಂಡೆಗಳ ಮೇಲೆ ದಿಕ್ಕನ್ನು ಸೂಚಿಸಲಾಗಿದೆ. ಈ ರೀತಿ ಆ ಪ್ರದೇಶದಲ್ಲಿ ಸುಮಾರು 8ರಿಂದ 10 ಕಡೆ ಬಂಡೆ ಕಲ್ಲುಗಳು ಇದ್ದು, ಅದರ ಕೆಳಗಡೆ ನಿಧಿ ಇರಬಹುದೆಂಬುದು ಬೈರಪ್ಪನವರ ಮಗ ವಕೀಲ ಸರ್ವೇಶ್ ಅಭಿಪ್ರಾಯ.
ಮೊನ್ನೆಯಷ್ಟೆ ನಮ್ಮ ತಂದೆಯವರು ನೀಲಗಿರಿ ತೋಪಿಗೆ ಬದುಗಳನ್ನು ನಿರ್ಮಿಸಲು ಜೆಸಿಬಿಯನ್ನು ಕರೆಯಿಸಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕೆಳ ಹಂತದ ಮಣ್ಣು ತೆಗೆಯುತ್ತಿದ್ದಾಗ ಚಿಕ್ಕ ಬುಡಿಗಿಯೊಂದರಲ್ಲಿ ಲೋಹಾಕಾರದ ವಸ್ತು ಸಿಕ್ಕಿತ್ತು. ಅದನ್ನು ಮಿತ್ರರೊಬ್ಬರು ತೆಗೆದುಕೊಂಡು ತಮಿಳುನಾಡಿನ ಹೊಸೂರಿನ ಲ್ಯಾಬ್ ಒಂದರಲ್ಲಿ ಪರೀಕ್ಷಿಸಿದಾಗ ಅಲ್ಲಿ ನಿಧಿಯ ನಿಕ್ಷೇಪವಿದೆ ಎಂಬುದು ತಿಳಿದು ಬಂದಿದೆ ಎಂದು, ಸುಮಾರು ವರ್ಷಗಳಿಂದ ನಮಗೆ ತಿಳಿಯದೆ ಕೆಲವು ನಿಧಿ ಚೋರರು ಶೋಧಕಾರ್ಯ ನಡೆಸುತ್ತಿದ್ದರು. ಇತ್ತಿಚೇಗೆ ಕೆಲವು ವೈದಿಕ ವೃತ್ತಿ ನಡೆಸುವವರು ವಿಚಾರಿಸಿದಾಗ, ಇಲ್ಲಿ ನಿಧಿ ಇದೆ ಎಂದು ದೃಢಪಡಿಸಿದ್ದಾರೆ ಎಂದು ವಕೀಲ ಸರ್ವೇಶ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನದಂದು ನೀಲಗಿರಿ ತೋಪಿಗೆ ನಾವೇ ಕಾವಲು ಇರುತ್ತೇವೆ ಎಂದರು.
ದಂತ ಕಥೆ: ಹಿಂದಿನ ಕಾಲದಲ್ಲಿ ರಾಮಢ ಗುಡಿಗಳು ಇತ್ತೆಂದು ಪಾಳೆಗಾರಿಕೆಯಲ್ಲಿ ತಮ್ಮಲ್ಲಿದ್ದ ಚಿನ್ನ ಬೆಳ್ಳಿ ವಸ್ತುಗಳನ್ನು ಜನರು ನಿರ್ಜನ ಪ್ರದೇಶದಲ್ಲಿ ಭೂಮಿ ಆಳವನ್ನು ಅಗೆದು ಮಣ್ಣಿನ ಕುಡಿಕೆಗಳಲ್ಲಿ ಅದನ್ನು ತುಂಬಿ ಸುತ್ತಲೂ ಕಲ್ಲು ಕಟ್ಟಡ ಹಾಗೂ ಬಂಡೆಗಳನ್ನು ಇಟ್ಟು ಅದರ ಮೇಲೆ ಬಂಡೆಕಲ್ಲನ್ನು ಇಡುತ್ತಿದ್ದರಂತೆ. ಅದರಂತೆ ಅದನ್ನು ಕಾವಲು ಕಾಯಲು ಇಂತಹ ಹಳೆಯ ಕಾಲದ ಮನೆಗಳನ್ನು ನಿರ್ಮಿಸಿ ಕಾವಲುಗಾರನನ್ನು ನೇಮಿಸುತ್ತಿದ್ದರೆಂದು ತಿಳಿದುಬಂದಿದೆ.
ನಿಧಿ ಸಾರ್ವಜನಿಕ ವಿನಿಯೋಗವಾಗಲಿ: ಇಲ್ಲಿ ನಡೆಯುತ್ತಿರುವ ನಿಧಿ ನಿಕ್ಷೇಪಗಳ ಬಗ್ಗೆ ಬೈರಪ್ಪನವರ ಕುಟುಂಬ ವರ್ಗ ಹೇಳುವ ಪ್ರಕಾರ, ಈ ನಿಧಿ ಕಳ್ಳರ ಪಾಲಾಗಬಾರದು. ಸಾರ್ವಜನಿಕವಾಗಿ ಸರ್ಕಾರವೆ ಮುಂದೆ ನಿಂತು ಶೋಧ ನಡೆಸಿದರೆ ನಮ್ಮ ಸಂಪೂರ್ಣ ಬೆಂಬಲವಿದೆ ಎನ್ನುತ್ತಾರೆ. ಈ ಬಗ್ಗೆ ತಾಲೂಕು ಆಡಳಿತ ಗಮನಹರಿಸಿ ಪುರಾತತ್ವ ಇಲಾಖೆಯಿಂದ ಸಂಶೋಧನೆ ನಡೆಸಿದರೆ ಸತ್ಯಾಸತ್ಯತೆ ತಿಳಿದುಬರುತ್ತದೆ ಎಂದು ಜನತೆಯ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

