ಕೋಲಾರ

ಕೆರೆ ಒತ್ತುವರಿ ತೆರವುಗೊಳಿಸದ ತಾಲೂಕು ಆಡಳಿತ

Published On :

ಶಿಡ್ಲಘಟ್ಟ: ತಾಲೂಕು ಕಚೇರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲಾಟ, ಸಾವಿರ ರು. ನೀಡಿದರೆ ರೇಷನ್ ಕಾರ್ಡ್, ಕೆರೆ ಒತ್ತುವರಿಯಾಗಿದ್ದರೂ ಮೌನ... ಇವು ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ದೂರುಗಳು.
ಪಡಿತರಚೀಟಿ ಅವ್ಯವಸ್ಥೆ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಅವರಿಗೆ ಲೋಕಾಯುಕ್ತ ನಿರೀಕ್ಷಕ ಮಂಜೇಗೌಡ ಸಲಹೆ ನೀಡಿದರು. ನಂತರ ಮಾತನಾಡಿದ ಅವರು, ಆಹಾರ ಇಲಾಖೆಯ ಶಿರಸ್ತೆದಾರರ ವಿರುದ್ಧ ಪ್ರತಿ ಸಭೆಯಲ್ಲಿಯೂ ದೂರುಗಳು ಹೆಚ್ಚಾಗಿ ಕೇಳಿಬರುತ್ತಿವೆ, ಎಂದು ಹೇಳುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಆಹಾರ ಇಲಾಖೆಯಲ್ಲಿ ಕೆಲವು ಏಜೆಂಟರನ್ನು ಇಟ್ಟುಕೊಂಡು ಭ್ರಷ್ಟಚಾರ ನಡೆಸುತ್ತಿದ್ದು ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.  ತಾಲೂಕು ಕಚೇರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಫೋನ್ ಮಾಡಿದರೆ ಅಧಿಕಾರಿಗಳು ಕೆಲಸ ಮಾಡಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳ ಕೈಬಿಸಿ ಮಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದ ಲೋಕಾಯುಕ್ತ ನಿರೀಕ್ಷಕರು ಜೇಷ್ಟತೆ ಆಧಾರದ ಮೇಲೆ ಕಡತಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರು.
ಲೋಕಾಯುಕ್ತ ನಿರೀಕ್ಷಕ ಅಶೋಕ್‌ಕುಮಾರ್, ಲೋಕೊಪಯೋಗಿ ಇಲಾಖೆ ಎಇಇ ಜಮೀರ್ ಅಹ್ಮದ್, ಪುರಸಭಾ ಮುಖ್ಯಾಧಿಕಾರಿ ಚನ್ನರಾಯಪ್ಪ, ಚಂದ್ರಪ್ಪ, ರಾಘವೇಂದ್ರ,  ಎನ್. ರಮೇಶ್ ಇದ್ದರು.

ಯೋಜನೆಗಳ ಫಲ ಅರ್ಹರಿಗೆ ಲಭಿಸುತ್ತಿದೆ
ಮಾಲೂರು:
ಸರ್ಕಾರಿ ಯೋಜನೆಗಳನ್ನು ಅನ್‌ಲೈನ್ ಮೂಲಕ ನಿರ್ವಹಿಸುತ್ತಿರುವುದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಫಲ ನೇರವಾಗಿ ದೊರೆಯುವಂತಾಗಿದೆ ಎಂದು ಎಚ್. ಹೂಸಕೋಟೆ ಪಂಚಾಯ್ತಿ ಅಧ್ಯಕ್ಷ ಆರ್.ನಾಗರಾಜ್ ಹೇಳಿದರು.
ತಾಲೂಕಿನ ಎಚ್. ಹೊಸಕೋಟೆ ಪಂಚಾಯ್ತಿ ವ್ಯಾಪ್ತಿಯ 2013-14 ನೇ ಸಾಲಿನ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್‌ಲೈನ್ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಕಳುಹಿಸುತ್ತಿರುವುದರಿಂದ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಕ್ಕುತ್ತಿದ್ದು, ಯೋಜನೆಗಳು ಸಾರ್ಥಕ ವಾಗುತ್ತಿದೆ ಎಂದರು. ಗ್ರಾಪಂ ಪಿಡಿಒ ವಿ. ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಂಜೀವಿನಿ ಯೋಜನೆ ಜಾರಿಯಲ್ಲಿವೆ ಎಂದರು. ಇದೇ ಸಂಧರ್ಭದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪ್ರಮಾಣ ಪತ್ರ ವಿತರಿಸಲಾಯಿತು. ಎಸ್. ನಾರಾಯಣಸ್ವಾಮಿ, ಎನ್. ರಮೇಶ್, ಸುಶೀಲಮ್ಮ, ವಿ. ಅಂಬರೀಷ್, ನೀಲಮ್ಮ, ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.