'ದೇಶ ರಕ್ಷಣೆಗೆ ಯುವಪೀಳಿಗೆ ಮುಂದಾಗಬೇಕು'
ಕೆಜಿಎಫ್: ದೇಶವನ್ನು ಕಾಪಾಡಲು ರಾಷ್ಟ್ರದ ಹಿಂದುಗಳ ಪ್ರತಿಯೊಬ್ಬರ ಕರ್ತವ್ಯ ಎಂದು ಆರ್ಎಸ್ಎಸ್ ಶಾರೀರಕ ಪ್ರಮುಖ್ ಚಂದ್ರಶೇಖರ ರಹಗೀರ್ಧಾರ್ ಹೇಳಿದರು.
ನಗರಸಭೆ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು. ಹಿಮಾಲಯ ಪರ್ವತದಿಂದ ಹಿಂದೂಮಹಾಸಾಗರದ ವರೆಗೆ ಹಿಂದೂಗಳ ರಾಷ್ಟ್ರವಾಗಿದ್ದು ನಮ್ಮ ಭೂತಾಯಿಯ ಪ್ರಕೃತಿಯನ್ನು ರಕ್ಷಿಸಲು ಸೇವೆಸಲ್ಲಿಸುತ್ತಿರುವ ಭಾರತ ಸೈನಿಕರ ರಕ್ಷಣೆಗೆ ಆರ್ಎಸ್ಎಸ್ ಮತ್ತು ಯುವ ಶಕ್ತಿ ಮುಂದಾಗಬೇಕು ಎಂದರು. ಕೆಜಿಎಫ್ ನಗರದ ಸುಮತಿ ಜೈನ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ 9 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ 120 ಸ್ವಯಂ ಸೇವಕರು 30ಕ್ಕೂ ಹೆಚ್ಚು ಸಂಚಾಲಕರು, ಶಿಕ್ಷಕರು, ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ನಗರಸಭೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭಕ್ಕೂ ಮುನ್ನ ಜಿಲ್ಲೆಯ ಸ್ವಯಂ ಸೇವಕರು ನಗರದ ಪ್ರಮುಖ ರಸ್ತೆಗಳಲ್ಲಿ ಧ್ವಜ ಸಮೇತ ಗಣವೇಶದಾರಿಗಳ ಆಕರ್ಷಕ ಪಥಸಂಚಲನ ನಡೆಸಿದರು. ರಾಷ್ಟ್ರೀಯ ಸ್ವಯೆ ಸೇವಕ ಸಂಘದ ಶಿಭಿರಾಧಿಕಾರಿ ಪಿ.ಎ. ಸರವಣವೇಲು, ಮಹೇಂದ್ರಜೈನ್, ಸಂಘ ಚಾಲಕ ವಿಜಯಕುಮಾರ್, ಡಾ. ಶಂಕರ್ನಾಯಕ್, ದತ್ತಾತ್ರೇಯ ರಾಮಚಂದ್ರ, ಶ್ರೀಧರ್ರಾವ್ಸಿಂಧ್ಯೆ, ಮಾಧವನ್, ಶಿವಸುಬ್ರಮಣ್ಯಂ, ರಾಮಕೃಷ್ಣ, ಮತ್ತು ಇತರೆ ಸಂಚಾಲಕರು ಹಾಜರಿದ್ದರು.
ಮುಂದುವರಿದ ವಿದ್ಯುತ್ ಗುತ್ತಿಗೆದಾರರ ಧರಣಿ
ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಇಲ್ಲಿನ ಬೆಸ್ಕಾಂ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರೆಯಿತು. ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಎಸ್. ಬಾಬು, ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಹೊನ್ನೇಗೌಡ, ಜಂಟಿ ಕಾರ್ಯದರ್ಶಿ ಪ್ರಸಾದ್, ಖಜಾಂಚಿ ವಿಜಯ್ ಕುಮಾರ್ ನಾಯ್ಡು, ವೆಂಕಟೇಶ್, ಮಂಜುನಾಥ್, ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

