ವ್ಯಕ್ತಿ ಕೊಲೆ ಮಾಡಿ ಕೆರೆಯಲ್ಲಿ ಶವ ಹೂತ ದುರುಳರು
ಬಂಗಾರಪೇಟೆ: ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿ ನಂತರ ಶವವನ್ನು ಕೆರೆಯಲ್ಲಿ ಹೂತು ಹಾಕಿರುವ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.
ತಾಲೂಕಿನ ಬೇತಮಂಗಲ ಹೋಬಳಿ ಬಳಿಯಿರುವ ಸಲ್ಲಪಳ್ಳಿ ಗ್ರಾಮದ ಚಲಪತಿ 22 ಎಂಬಾತನೆ ಕೊಲೆಗೀಡಾಗಿರುವ ವ್ಯಕ್ತಿಯಾಗಿದ್ದು, ಮೃತ ವ್ಯಕ್ತಿ ಇಲ್ಲಿಗೆ ಸಮೀಪದ ಗಾಜಗ ಗ್ರಾಮದ ಬಳಿಯಿರುವ ಹಿರೇಕರಪನಹಳ್ಳಿ ಗ್ರಾಮದ ತಮ್ಮ ಮಾನವ ಮನೆಯಲ್ಲೇ ಕಳೆದ 6ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ, ಕಳೆದ ರಾತ್ರಿ ಸ್ನೇಹಿತರು ಫೋನ್ ಮಾಡಿದ್ದಾರೆ ಹೊರಗೆ ಹೋಗಿ ಬರುವುದಾಗಿ ಮಾನವನಿಗೆ ಹೇಳಿ ಹೋದವ ಮತ್ತೆ ಮನೆಗೆ ಬಂದಿರಲಿಲ್ಲ. ಮಂಗಳವಾರ ರಾತ್ರಿಯೇ ಸ್ನೇಹಿತರು ಚಲಪತಿರನ್ನು ಹಿರೇಕರಪನಹಳ್ಳಿಗೆ ಸಮೀಪದಲ್ಲೇ ಚಾಕುವಿನಿಂದ ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಕೆರೆ ಅಂಗಳಕ್ಕೆ ಎಳೆದುಕೊಂಡು ಹೋಗಿ ಗುಂಡಿ ತೆಗೆದು ಮುಚ್ಚಿ ಪರಾರಿಯಾಗಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳಿದ್ದು, ದಾರಿ ಹೋಕರು ಕೆರೆ ಅಂಗಳದ ಒಂದು ಭಾಗದಲ್ಲಿ ದೇಹ ಮುಚ್ಚಿದ್ದು ಬರೀ ಕಾಲು ಮಾತ್ರ ಕಾಣುತ್ತಿದ್ದ ಶವವನ್ನು ಕಂಡು ಗಾಬರಿಯಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಶ್ವಾನ ದಳ ಬಂದರೂ ಉಪಯೋಗವಾಗಿಲ್ಲ, ಮದ್ಯಾಹ್ನದ ನಂತರ ತಹಸೀಲ್ದಾರ್ ಉಷಾರವರ ಸಮಕ್ಷಮದಲ್ಲಿ ಹೂತಿದ್ದ ಶವವನ್ನು ಹೊರತೆಗೆದಾದ ನಿಜಾಂಶ ಬಯಲಾಯಿತು. ಆದರೆ ಯಾವ ಕಾರಣಕ್ಕೆ ಚಲಪತಿರನ್ನು ಕೊಲೆ ಮಾಡಲಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದ್ದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.
ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಾ. ರೋಹಿಣಿ ಸಪೆಟ್, ವೃತ್ತನಿರೀಕ್ಷಕ ವೆಂಕಟಾಚಲಪತಿ ಭೇಟಿ ನೀಡಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ
ಮಾಲೂರು: ಕರ್ನಾಟಕ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು, ಅರ್ಹ ಮತದಾರರು ಅವಶ್ಯವಿರುವ ದಾಖಲೆಯ ಜತೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾ ತಿಳಿಸಿದ್ದಾರೆ.
ಚುನಾವಣೆ-2013 ರ ಸಂಬಂಧ ಮತದಾರರ ಪಟ್ಟಿ ಪರಿಷ್ಕರಣೆ ಇದೇ ತಿಂಗಳ ಒಂದರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 30 ರ ವರಗೆ ನಡೆಯಲಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ಸೇರ್ಪಡೆ ಮಾಡಬೇಕಾದಲ್ಲಿ ನಮೂನೆ-18 ನ್ನು ನಿಗದಿತ ವೇಳೆ ಪಡೆದು ಇತ್ತೀಚಿನ ವಾಸ್ಪೋರ್ಟ್ ಆಳತೆಯ ಭಾವಚಿತ್ರ, ಎಪಿಕ್ ಕಾರ್ಡ್ ಜೆರಾಕ್ಸ್, ಪದವಿ ಪರೀಕ್ಷೆಯ ಕಾನ್ವೆಕೇಷನ್ ಸರ್ಟೀಫೀಕೆಟ್ ನೊಂದಿಗೆ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ದಿನಾಂಕ 1-11-2013 ಕ್ಕೆ 3 ವರ್ಷ ಪೂರ್ಣಗೊಂಡಿರುವ ಪದವಿದರರು ಈ ಅವಕಾಶ ಉಪಯೋಗಿಸಕೊಳ್ಳಬಹುದಾಗಿದ್ದು, ಹಿಂದೆ 2007 ರಲ್ಲಿ ತಯಾರಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿದವವರು ಈಗ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

