ಮುನಿಯಪ್ಪ ಮನಸ್ಸು ಮಾಡಿದ್ರೆ ಶಾಶ್ವತ ನೀರಾವರಿ ಜಾರಿಗೆ ಬರುತ್ತೆ
ಕ.ಪ್ರ.ವಾರ್ತೆ ಕೋಲಾರ ಅ. 28
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಮನಸ್ಸು ಮಾಡಿದರೆ ಕೋಲಾರ ಜಿಲ್ಲೆಗೆ ಆದಷ್ಟು ಬೇಗನೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರಲು ಸಾಧ್ಯವೆಂದು ಮಾಜಿ ಸಚಿವ, ಹಾಲಿ ಶಾಸಕ ವರ್ತೂರ್ ಆರ್. ಪ್ರಕಾಶ್ ತಿಳಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಸೋಮವಾರ ಮಾಧ್ಯಮ ಅಕಾಡೆಮಿಯು ಹಮ್ಮಿಕೊಂಡಿದ್ದ ಅಂತರ್ಜಲ ಸಂರಕ್ಷಣೆ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕೈ ಹಿಡಿದು ಶಾಶ್ವತ ನೀರಾವರಿ ಯೋಜನೆಗೆ ಅಂಕಿತ ಪಡೆಯುವ ಶಕ್ತಿ ಕೆ.ಎಚ್. ಮುನಿಯಪ್ಪನವರಿಗಿದೆ ಎಂದರು. ಮುನಿಯಪ್ಪ ಸಿದ್ದರಾಮಯ್ಯನವರ ಅಡುಗೆ ಮನೆಯಲ್ಲಿ ಇದ್ದಾರೆ. ಮನಸ್ಸು ಮಾಡಿದ್ರೆ ಸಿದ್ದರಾಮಯ್ಯನವರ ಕೈಹಿಡಿದು ಯೋಜನೆ ಜಾರಿಗೆ ಬೇಕಾದ ಅನುದಾನ ಬಿಡುಗಡೆ ಮಾಡಿಸಬಹುದು ಎಂದ ವರ್ತೂರ್ ಪ್ರಕಾಶ್, ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಹೊಸಬರು. ಮುನಿಯಪ್ಪ ಹಳಬರಾಗಿರುವುದರಿಂದ ಪಟ್ಟು ಹಿಡಿದು ಕೆಲಸ ಮಾಡಿಕೊಳ್ಳಬಹುದೆಂದರು. ಬರುವ 2014ರ ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ಆಗಲಿರುವುದರಿಂದ ರಾಜಕಾರಣಿಗಳು ಸ್ವಾರ್ಥ ಬದಿಗಿಟ್ಟು ನೀರಾವರಿ ಯೋಜನೆಗಾಗಿ ಅರ್ಧದಷ್ಟು ಮೀಸಲಿಡುವಂತೆ ಸಿದ್ದರಾಯಯ್ಯನವರ ಮೇಲೆ ಒತ್ತಡ ತರಬೇಕಾಗಿದೆ. ನೀರಿನ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಕಾರಣ ಮಾಡಲ್ಲವೆಂದು ತಿಳಿಸಿದರು. ಎತ್ತಿನ ಹೊಳೆಗೆ ಕೇವಲ 1 ಸಾವಿರ ಕೋಟಿ ಮತ್ತು ಪರಮಶಿವಯ್ಯ ಯೋಜನೆಯ ಡಿಪಿಆರ್ಗಾಗಿ 50 ಕೋಟಿ ನೀಡಲಾಗಿದೆ. ಇದಕ್ಕೆ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರ ಮೇಲೆ ಗೂಬೆ ಕೂರಿಸಲ್ಲ, ಮುಖ್ಯಮಂತ್ರಿ ಜೊತೆ ಚನ್ನಾಗಿರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ನೀರು ಹರಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಷ್ಟಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಟ್ಟಾಗಿ ಕೆಲ್ಸ ಮಾಡಿದ್ರೆ ಗೆಲವು ಸಾಧ್ಯ: ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲುವುದಕ್ಕೆ ಪ್ರಯತ್ನ ನಡೆಸಿದ್ದೀರಾ, ಎಲ್ಲರೂ ಸೇರಿ ಕೆಲಸ ಮಾಡಿದರೆ ಮಾತ್ರ ನಿಮ್ಮ ಗೆಲುವು ಸುಲಭವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

