ಕೋಲಾರ

ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಆದ್ಯತೆ: ದಿನೇಶ್ ಗುಂಡೂರಾವ್

Published On :

ಕನ್ನಡಪ್ರಭ ವಾರ್ತೆ, ಗೌರಿಬಿದನೂರು, ಸೆ.1
ಚಿಕ್ಕಬಳ್ಳಾಪುರ ಗಡಿಪ್ರದೇಶವಾಗಿದ್ದು, ಬರಪೀಡಿತ ಜಿಲ್ಲೆ ಆದ್ದರಿಂದ ಸರ್ಕಾರದಿಂದ ಅಗತ್ಯ ನೆರವು ಲಭಿಸುವಂತೆ ಮಾಡುವುದು ಉಸ್ತುವಾರಿ ಸಚಿವರಾಗಿ ಆದ್ಯ ಕರ್ತವ್ಯ ಎಂದು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭಾನುವಾರ ವಿವಿ ಪುರಂನಲ್ಲಿರುವ ಬ್ರಾಹ್ಮಣ ಕ್ಷೇಮಾಭ್ಯುದಯ ಸಂಘದ ವತಿಯಿಂದ ಶಾರದಾಂಬೆ ಹಾಗು ಶಂಕರಾಚಾರ್ಯರ ಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸುದರ್ಶನ ಹೋಮ ಹಾಗು ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರ್ಕಾರದ ಕಾರ್ಯಕ್ರಮಗಳಿಂದ ಸವಲತ್ತುಗಳು ಸಾಮಾನ್ಯ ಜನರಿಗೆ ಮುಟ್ಟುವಂತೆ ಆಗಬೇಕು. ಮುಂದಿನ ತಿಂಗಳಿಂದ ಜಿಲ್ಲಾದ್ಯಂತ ಪ್ರವಾಸ ಮಾಡಿ ಪ್ರತಿ ತಾಲೂಕಿನಲ್ಲಿನ ಸಮಸ್ಯೆ ಅರಿತು ಅಲ್ಲಿನ ಶಾಸಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾಸಭಾ ಉಪಾಧ್ಯಕ್ಷರಾದ ಶಾಸಕ ಶಿವಶಂಕರರೆಡ್ಡಿ ಮಾತನಾಡಿ, 1986ರಲ್ಲಿ ಈಗ ನಾವು ಪೂಜೆ ಮಾಡುತ್ತಿರುವ ಶೃಂಗೇರಿ ಶಾರದಾ ಮಾತೆಯ ದೇವಾಲಯಕ್ಕೆ ಅಂದಿನ ಮುಖ್ಯಮಂತ್ರಿ ದಿ. ಗುಂಡೂರಾಯರು ಅಡಿಗಲ್ಲು ಹಾಕಿದ್ದರು. ಮುಂದಿನ ದಿನಗಳಲ್ಲಿ ಅವರ ಪುತ್ರರಾದ ದಿನೇಶ್ ಗುಂಡೂರಾವ್ ಸಮುದಾಯ ಭವನ ಉದ್ಘಾಟಿಸಲಿದ್ದಾರೆ ಎಂದರು.  ವೀರಪ್ಪ ಮೊಯ್ಲಿ ಅವರ ಸಂಸದರ ನಿಧಿಯಿಂದ 10ಲಕ್ಷ ಹಾಗೂ ನನ್ನ ಶಾಸಕರ ನಿಧಿಯಿಂದಲೂ ಸಹಾ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಿವಶಂಕರರೆಡ್ಡಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎಸ್.ವಿ. ಅಶ್ವತ್ಥನಾರಾಯಣರಾವ್, ವೆಂಕಟರಮಣಪ್ಪ, ಡಾ.ಶಶಿಧರ್, ಜಿ.ಕೆ. ವೆಂಕಟೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಹನುಮಂತರಾವ್, ನಾಗಭುಷಣರಾವ್, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸದಸ್ಯರಾದ ಕೇಶವರೆಡ್ಡಿ, ಪುರಸಭೆಯ ಸದಸ್ಯರಾದ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ಜಿ.ಕೆ.ಸತೀಶ್, ಜಯಸಿಂಹ ಮುರಳಿ, ನವಮೋಹನ್, ಆದಿಶೇಷರಾವ್, ಎನ್.ವಿ.ರಾವ್ ಹಾಜರಿದ್ದರು. ವೆಂಕಟೇಶಮೂರ್ತಿ ತಂಡದಿಂದ ವೇದ ಘೋಷ, ವಾಣಿ ಮಹಿಳಾ ತಂಡದವರಿಂದ ಪ್ರಾರ್ಥನೆ, ಸುಬ್ರಹ್ಮಣ್ಯಂ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.