ಕೋಲಾರ

ಬಂಗಾರಪೇಟೆಯಲ್ಲಿ ಮಳೆ; ವಿವಿಧ ಬೆಳೆಗಳಲ್ಲಿ ಹೊಸ ಕಳೆ

Published On :

ಬಂಗಾರಪೇಟೆ: ವರುಣನ ನಿರೀಕ್ಷೆಯಲ್ಲಿದ್ದ ಇಲ್ಲಿನ ಜನರಿಗೆ ಕಳೆದ ಎರಡು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಎಲ್ಲೆಡೆ ಮಂದಹಾಸ ಮೂಡಿದೆ. ಈ ವರ್ಷದಲ್ಲಿ ಜನರ ನಿರೀಕ್ಷೆಯ ತಕ್ಕಂತೆ ವಾಡಿಕೆ ಮಳೆ ಸಹ ಬಿದ್ದಿಲ್ಲ ಇದರ ಪರಿಣಾಮ, ಜೀವ ಜಲವಾಗಿದ್ದ ಕೆರೆಗಳು ಸಂಪೂರ್ಣವಾಗಿ ಒಣಗಿ ಮನುಷ್ಯರ ಜೊತೆಗೆ ಜಾನುವಾರು ಕೂಡ ಕುಡಿಯುವ ನೀರಿಗಾಗಿ ಚಿಂತೆಗೀಡು ಮಾಡುವಂತೆ ಮಾಡಿತ್ತು.
ನೀರಿಲ್ಲದೆ ಕಂಗಾಲಾಗಿದ್ದರು: ಮುಂಗಾರು ಮಳೆ ಪ್ರಾರಂಭವಾದಾಗ ಈ ಬಾರಿ ಭಾರೀ ಮಳೆ ನಿರೀಕ್ಷಿಸಲಾಗಿತ್ತಾದರೂ, ವರುಣನ ಆಗಮನವಿಲ್ಲದೆ, ನಿರೀಕ್ಷೆ ಹುಸಿಯಾಗಿತ್ತು. ಮಳೆಯಾಶ್ರಿತ ಪ್ರದೇಶವಾದ ಕೋಲಾರ ಜಿಲ್ಲೆಯ ರೈತರು ಕೊಳವೆ ಬಾವಿಗಳಿಂದ ನೀರೆತ್ತಿ ಕಷ್ಟಪಟ್ಟು ಬೆಳೆ ಮಾಡಲೂ ನೀರಿಲ್ಲದೆ ಕಂಗಾಲಾಗಿದ್ದರು.
ಗಾಳಿ ರಹಿತ ಮಳೆ: ಇಂತಹ ಸಮಯದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಗಾಳಿ ರಹಿತ ಮಳೆ ಜೋರಾಗಿ ಸುರಿದಿದ್ದು, ಯಾವುದೇ ನಷ್ಟವಾಗದಿದ್ದರೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಯೊಳಗೆ ಪ್ರವೇಶಿಸಿದರಿಂದ ರಾತ್ರಿ ಇಡಿ ಮನೆಯವರಿಗೆ ನೀರನ್ನು ಹೊರ ಚೆಲ್ಲುಲು ಹರಸಾಹಸ ಮಾಡಬೇಕಾಯಿತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಈಗೆ ಇನ್ನು 3 ದಿನಗಳು ಮುಂದುವರವೆದರೆ ಕೆರೆಗಳಿಗೆ ಸ್ವಲ್ಪವಾದರು ನೀರು ಸಂಗ್ರಹವಾಗಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಕಮಟ್ಟಿಗೆ ನೀಗಲಿದೆ ಎಂಬುದು ಸ್ಥಳೀಯರ ಬಯಕೆ. ರಾಗಿ, ಶೇಂಗಾ ಬೆಳೆಗಳಿಗೆ ನೀರಿಲ್ಲದೆ ಒಣಗುವಂತಾಗಿತ್ತು ಈಗ ಮಳೆ ಬಿದ್ದಿರುವುದು ರೈತರ ಮೊಗದಲ್ಲಿ ಆಶಾಭಾವನೆ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.