'ಲಾರಿಗಳಿಗೆ ಬೆಂಕಿ ಹಚ್ಚಿದರೆ ಮರಳು ಸಾಗಣೆ ನಿಲ್ಲುತ್ತೆ'
ಕ.ಪ್ರ.ವಾರ್ತೆ ಗೌರಿಬಿದನೂರು ಸೆ. 18
ನಿರಂತರವಾಗಿ ಮರಳು ಸಾಗಣೆಯಾಗುತ್ತಿರುವ ಸ್ಥಳಕ್ಕೆ ತೆರಳಿ ಮರಳು ಲಾರಿಗಳನ್ನು ರೈತರೇ ಸುಡಬೇಕು. ಆಗ ಮರಳು ಸಾಗಣೆ ನಿಲ್ಲುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ರೈತರಿಗೆ ತಿಳಿಸಿದರು.
ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿ ಗ್ರಾಮಕ್ಕೆ ಜಲಾನಯನ ಇಲಾಖೆಯ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಲು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ರೈತರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ನಿರಂತರ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ರಾತ್ರಿ ವೇಳೆ ಮರಳು ಲಾರಿಗಳಲ್ಲಿ ತುಂಬಲಾಗುತ್ತದೆ. 50 ಲಾರಿಗಳಷ್ಟು ಸಾಗಣೆಯಾಗುತ್ತಿದೆ. ಇದನ್ನು ತಡೆಯುವವರು ಯಾರು ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ರೈತರೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ತೊಂದರೆಯಾಗುತ್ತಿರುವ ವಿಷಯ ಇದು ನೀವು ಏಕೆ ಸುಮ್ಮನಿದ್ದೀರಿ? ನೀವೇ ಟ್ರ್ಯಾಕ್ಟರ್ ಹಾಗೂ ಲಾರಿಯನ್ನು ಸುಟ್ಟು ಹಾಕಿ ಆಗ ಅದೇ ನಿಲ್ಲುತ್ತದೆ ಎಂದ ಅವರು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತೇನೆ ಎಂದರು.
ಜಲಾನಯನ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಕೃಷಿ ಸಚಿವರು, ಜಲಾನಯನ ಇಲಾಖೆಯಲ್ಲಿ ಕೈಗೊಂಡಿರುವ ಯೋಜನೆಗಳು ಕಾಮಗಾರಿಗಳು ಗುಣಮಟ್ಟವಾಗಿಲ್ಲ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಕೃಷಿ ಸಚಿವರು ಸುಮಾರು ಅರ್ಧ ಗಂಟೆ ಕಾಲ ರೈತ ಜಮೀನುಗಳಲ್ಲಿ ಜಲಾನಯನ ಇಲಾಖೆಯ ವತಿಯಿಂದ ಕೈಗೊಂಡಿರುವ ಯೋಜನೆಗಳನ್ನು ಪರಿಶೀಲಿಸಿದರು ಕೈಗೊಂಡಿರುವ ಕಾಮಗಾರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಇಲಾಖೆಯ ಕೃಷಿ ಹೊಂಡ, ಬದುಗಳು, ಕೃಷಿ ಅರಣ್ಯ ಸಸಿಗಳು, ನಾಲಾ ಬದುಗಳನ್ನು ಜಲಾನಯನ ಅಧಿಕಾರಿಗಳಿಂದ ಸರ್ವೆನಂ ಪ್ರಕಾಶ್ ಅವರ ಪಡೆದ ಸದರಿ ಸರ್ವೆನಂಬರ್ ಇರುವ ಜಮೀನಿಗೆ ತೆರಳಿ ರೈತರಿಂದ ಕಾಮಗಾರಿಯ ಬಗ್ಗೆ ವಿವರ ಪಡೆದ ನಂತರ ಜಲಾನಯನ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ನೀವು ನಕ್ಷೆ ಪ್ರಕಾರ ಸರ್ವೆ ನಂಬರ್ ಗುರ್ತಿಸಿಲ್ಲ. ಮುಂದಿನ ದಿನಗಳಲ್ಲಿ ನಕ್ಷೆ ಪ್ರಕಾರವೇ ಸರ್ವೆ ನಂಬರ್ ಗುರ್ತಿಸಿ ಕಾಮಗಾರಿ ಕೈಗೊಳ್ಳಬೇಕು ಗುಣಮಟ್ಟ ಕಾಯ್ದುಕೊಳ್ಳಬೇಕು, ರೈತರು ಕೇಳಿದರೆ ಮಾತ್ರ ನೀವು ಯೋಜನೆಯ ಪ್ರಯೋಜನೆಗಳನ್ನು ತಿಳಿಸುತ್ತೀರಿ. ಸಾಮಾನ್ಯ ರೈತನಿಗೂ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಸೌಲಭ್ಯ ಸಿಗಬೇಕು ಎಂದರು. ಗೌರಿಬಿದನೂರು ಶಾಸಕರು ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಜಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

