ಮರೆವು ರೋಗ: ಎಚ್ಚರ ವಹಿಸಲು ಶಾಸಕ ವರ್ತೂರ್ ಪ್ರಕಾಶ್ ಸಲಹೆ
ಕ.ಪ್ರ.ವಾರ್ತೆ ಕೋಲಾರ ಸೆ.20
ಅಲ್ಜೀಮರ್ ಡಿಮೆಂಶಿಯಾ ಮರೆವು ರೋಗದ ಬಗ್ಗೆ ಜನತೆ ಎಚ್ಚರ ವಹಿಸಬೇಕು, ತಜ್ಞ ವೈದ್ಯರ ಜೊತೆ ಸಮಾಲೋಚನೆ ಮಾಡಿ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಆರ್. ವರ್ತೂರು ಪ್ರಕಾಶ್ ಜನತೆಗೆ ಸಲಹೆ ನೀಡಿದರು.
ನಗರದ ಇ.ಟಿ.ಸಿ.ಎಂ. ಆಸ್ಪತ್ರೆ, ನೈಟಿಂಗೇಲ್ ಸೆಂಟರ್ ಫಾರ್ ಏಜಿಂಗ್ ಅಂಡ್ ಅಲ್ಜೀಮರ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 21ನೇ ವಿಶ್ವ ಅಲ್ಜೀಮರ್ಸ್ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ 3 ದಿನಗಳ ಜನ ಜಾಗೃತಿ ಮತ್ತು 60 ಕಿ.ಮೀ. ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಯೋವೃದ್ಧರಲ್ಲಿ ಜ್ಞಾಪಕ ಶಕ್ತಿ ಕೊರತೆ, ನಿತ್ಯ ಜೀವನ ಚಟುವಟಿಕೆಗಳಲ್ಲಿ ನಡವಳಿಕೆ ವ್ಯತ್ಯಾಸವಾಗದಿರಲು ಮಾನಸಿಕ ಆರೋಗ್ಯ ಬಹಳ ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ಹಿರಿಯ ನಾಗರೀಕರಲ್ಲಿ ಕಂಡು ಬರುವ ಜ್ಞಾಪಕ ಶಕ್ತಿ ಕೊರತೆ, ನಿತ್ಯ ಜೀವನ ಚಟುವಟಿಕೆಗಳಲ್ಲಿ ನಡವಳಿಕೆ ಬದಲಾವಣೆಗೆ ಸಂಬಂಧಪಟ್ಟಂತ ಕಾಯಿಲೆ ಸಾಮನ್ಯವಾಗಿದೆ ಎಂದರು.
ವಯಸ್ಸಾದವರ ಭಾವನೆಗಳನ್ನು ಹಾಗೂ ಸಾಮಾನ್ಯವಾಗಿ ಅವರನ್ನು ಆವರಿಸುವ ಡಿಮೆನ್ಷಿಯಾ-ಅಲ್ಜೀಮರ್ಸ್ ಕಾಯಿಲೆ ಬಗ್ಗೆ ಕುಟುಂಬ ಸದಸ್ಯರು ಜ್ಞಾನ ಹೆಚ್ಚಿಸಿಕೊಂಡರೆ ಅದು ಹಿರಿಯರಲ್ಲಿ ಕಾಣುವ ಈ ವ್ಯಾಧಿಯನ್ನು ಹೆಚ್ಚದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು.
ನೈಟಿಂಗೇಲ್ ಸೆಂಟರ್ ಫಾರ್ ಏಜಿಂಗ್ ಅಂಡ್ ಅಲ್ಜೀಮರ್ಸ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಧಾಮೂರ್ತಿ ಮಾತನಾಡಿ, ಮರೆವು ಕಾಯಿಲೆ ಮತ್ತು ವರ್ತನೆಗಳಲ್ಲಿ ಬದಲಾವಣೆಯಾಗುವುದನ್ನು 60 ರಿಂದ 90 ರ ವಯೋವಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ರೋಗಕ್ಕೆ ಇದುವರೆವಿಗೂ ಯಾವುದೇ ಚಿಕಿತ್ಸೆ ಇಲ್ಲವಾಗಿರುವುದರಿಂದ ಜನತೆ ವೈದ್ಯರ ಬಳಿ ಆಗಾಗ ಸಲಹೆ ಪಡೆಯಬೇಕೆಂದರು.
ದೇಶದಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸುತ್ತಿಲ್ಲ, ದೇಶಾದ್ಯಂತ 100 ಮೆಮೋರಿ ಕ್ಲಿನಿಕ್ ಮಾತ್ರ ಇದೆ, ಅಲ್ಜೀಮರ್ಸ್ಗೆ ಬೆಂಗಳೂರಿನ ಕಸ್ತೂರಿನಗರದಲ್ಲಿ ಒಂದು ಕ್ಲಿನಿಕ್ ಇದೆ ಅದು ಸ್ವಲ್ಪ ದುಬಾರಿಯಾಗಿದ್ದರೂ ರಾಷ್ಟ್ರದ ಏಕೈಕ ಚಿಕಿತ್ಸಾ ಕೇಂದ್ರವಾಗಿದೆ ಎಂದರು.
ಇಟಿಸಿಎಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಾನ್ಸನ್ ಕುಂದರ್, ಡಾ. ಸಂದೀಪ್,ಇ.ಟಿ.ಸಿ.ಎಂ ಆಸ್ಪತ್ರೆಯ ಡಾ.ಪಾಲ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಬೀನಾ, ಡಾ. ಪ್ರೇಮಕುಮಾರ್ ರಾಜ, ಡಾ. ಥಾಮಸ್, ಡಾ. ಸೌಮ್ಯ, ಡಾ. ಸಂದೀಪ್, ಡಾ. ಅಭಿಷೇಕ್ ಇದ್ದರು. ರಮಣಿ ಸ್ವಾಗತಿಸಿ, ರೋಜರ್ ವಂದಿಸಿದರು.
ಮಾಜಿ ಶಾಸಕ ರಾಜೇಂದ್ರನ್ ಮನೆಯಲ್ಲಿ ಕಳವು
ಕೆಜಿಎಫ್: ತೋಟಕ್ಕೆ ಆಳವಡಿಸಿದ್ದ ಹನಿ ನೀರಾವರಿ ಸಾಮಗ್ರಿಗಳನ್ನು ಮತ್ತು ಮನೆಯ ಬಾಗಿಲನ್ನು ಮುರಿದು ಕಂಪ್ಯೂಟರ್ ಸಲಕರಣೆಗಳು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಕೆಜಿಎಫ್ನ ಮಾಜಿ ಶಾಸಕ ಎಸ್.ರಾಜೇಂದ್ರನ್ ಅವರ ಮನೆಯಲ್ಲಿ ನಡೆದಿದೆ. 10 ಸಾವಿರ ನಗದು ಸೇರಿದಂತೆ ಒಟ್ಟು ಸುಮಾರು 1.15 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಮಾಜಿ ಶಾಸಕ ಎಸ್. ರಾಜೇಂದ್ರನ್ ಉರಿಗಾಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

