ಕೋಲಾರ

ಕೆಜಿಎಫ್ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ

Published On :

ಕೆಜಿಎಫ್: ರಾಮನವಮಿ ಹಬ್ಬದ ಪ್ರಯುಕ್ತ  ಬಸವ ಸೇವಾ ಸಮಿತಿಯಿಂದ ಕೆಜಿಎಫ್ನಲ್ಲಿ ಎಂಟನೇ ವರ್ಷದ ಶ್ರೀ ಬಸವೇಶ್ವರಸ್ವಾಮಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಅತ್ಯಂತ ವೈಭವದಿಂದ ಯಶಸ್ವಿಯಾಗಿ ನಡೆಯಿತು.
ರಾಬರ್ಟ್ಸನ್ಪೇಟೆ ಸ್ವರ್ಣಕುಪ್ಪಂನ ಡಾ.ರಾಜ್ಕುಮಾರ್ ವೃತ್ತದಲ್ಲಿನ ಶ್ರೀ ಮಹಾಲಕ್ಷ್ಮೀ ಸತ್ಯನಾರಾಯಣಸ್ವಾಮಿ ಸಮೇತ ಶ್ರೀ ವಿರಾಂಜನೇಯಸ್ವಾಮಿ ದೇವಲಾಯಲ 34ನೇ ವರ್ಷದ ಶ್ರೀರಾಮನವಮಿ ಮಹೋತ್ಸವಗಳಲ್ಲಿ ಶ್ರೀ ಬಸವ ಸೇವಾ ಸಮಿತಿಯವರು ಎಂಟನೇ ವರ್ಷದ ಶ್ರೀ ಬಸವೇಶ್ವರಸ್ವಾಮಿ ಪಲ್ಲಕ್ಕಿ ಹಾಗೂ ಅಗ್ನಿಕುಂಡ ಮಹೋತ್ಸವವನ್ನು ನಡೆಸಲಾಯಿತು.
ಭಾನುವಾರ ಸಂಜೆ 7 ಗಂಟೆಗೆ ಕೋಲಾರ ತಾಲೂಕು ಅಂದ್ರಹಳ್ಳಿ ಲಿಂಗದವೀರರು ಎ.ಎನ್.ರುದ್ರೇಶ್, ಕೊತ್ತನೂರು ಗಂಗಾಧರ ಹಾಗೂ ಎನ್.ನಂದೀಶ್ ಸಂಗಡಿಗರಿಂದ ಆಕರ್ಷಕ ವೀರಗಾಸೆ ಕುಣಿತ ಕಾರ್ಯಕ್ರಮ ನಡೆಯಿತು. ಪ್ರಮುಖ ಬೀದಿಗಳಲ್ಲಿ ಶ್ರೀ ಬಸವಣ್ಣನ ಪಲ್ಲಕಿ ಉತ್ಸವವು ಮೆರವಣಿಗೆಯಲ್ಲಿ  ನಡೆಯಿತು. 10 ಗಂಟೆಗೆ ಡಾ.ರಾಜ್ಕುಮಾರ್ ವೃತ್ತದಲ್ಲಿನ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಮೈದಾನದಲ್ಲಿ ಅಗ್ನಿಕುಂಡ ಮಹೋತ್ಸವವನ್ನು ಅದ್ದೂರಿಯಿಂದ ಏರ್ಪಡಿಸಲಾಗಿತ್ತು.
ಶ್ರೀ ಬಸವ ಸೇವಾ ಸಮಿತಿಯ ಅಧ್ಯಕ್ಷ ಪಿ. ಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ ವಿ.ಮಂಜುನಾಥ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ರಾಜೇಂದ್ರಪ್ರಸಾದ್ ಅವರು ಉಸ್ತುವಾರಿ ವಹಿಸಿದ್ದು, ವೀರಶೈವ ಸಮಾಜದ ಎಸ್.ಸಿ.ಚಂದ್ರಶೇಖರ್, ಸಂಗಣ್ಣ, ರುದ್ರಪ್ಪ, ಮಲ್ಲಿಕಾರ್ಜುನ, ಸುರೇಶ್, ಎಸ್.ಸಂತೋಷ್, ವಿ.ಲೋಕೇಶ್ ವಕೀಲರಾದ ವೇಲಾಯುಧಂ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.