ಕೋಲಾರ

ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡಿದೆ: ಮೊಯ್ಲಿ

Published On :

ಚಿಕ್ಕಬಳ್ಳಾಪುರ: ಕೊಟ್ಟ ಮಾತಿನಂತೆ ವೀರಪ್ಪಮೊಯ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುವುದಿಲ್ಲ ಎಂದೇಳಿದ್ದ ಎಚ್.ಡಿ.ಕುಮಾರಸ್ವಾಮಿ ಇದೀಗ ತಾವೇ ಮಾತು ತಪ್ಪಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯ್ಲಿ ಟೀಕಿಸಿದರು. ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಶ್ವತ ನೀರಾವರಿ ಯೋಜನೆ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ಭಾಗದ ಸಮಸ್ಯೆ ನೀರಾವರಿ. ಈ ಹಿನೆಲೆಯಲ್ಲಿ ಕುಡಿವ ನೀರನು ಒದಗಿಸುವುದೇ ನನ ಪ್ರಮುಖ ಗುರಿ. ಎತ್ತಿನಹೊಳೆ ಯೋಜನೆ ನದಿ ತಿರುವಲ್ಲ. ಇದರಿಂದ 21 ಟಿಎಂಸಿ ನೀರು ಸಿಗಲಿದ್ದು ಈಗಾಗಲೇ ಕರಾವಳಿ ಜನರೊಂದಿಗೆ ಚರ್ಚೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರನು ಒಪ್ಪಿಸಿದ್ದೇನೆ ಎಂದರು. ಶಾಸಕ ಕೆ.ಸುಧಾಕರ್ ಮಾತನಾಡಿದರು.  

ಜಯಕರ್ನಾಟಕ ವತಿಯಿಂದ ಡಾ.ರಾಜ್ 8ನೇ ಪುಣ್ಯಸ್ಮರಣೆ
ಕೋಲಾರ: ನಟಸಾರ್ವಭೌಮ ಡಾ.ರಾಜ್‌ಕುಮಾರ್ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜಯ ಕರ್ನಾಟಕ ಸಂಘಟನೆಯಿಂದ ಶನಿವಾರ ನಡೆಯಿತು. ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್, ಡಾ.ರಾಜ್ ಅಗಲಿ ಇಂದಿಗೆ 8 ವರ್ಷವಾದರೂ ಅವರ ನೆನಪು ಮಾತ್ರ ಕನಡಿಗರ ಹೃದಯದಲ್ಲಿ ಶಾಶ್ವತವಾಗಿದೆ ಎಂದರು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಸಿ.ಆರ್.ಪಿ.ವೆಂಕಟೇಶ್, ಖಜಾಂಚಿ ಬಿ.ರಾಂಸಿಂಗ್,  ಬಿ.ಎಸ್.ಪ್ರಸಾದ್, ಸಂಘಟನಾ ಕಾರ್ಯದರ್ಶಿ ಬಿ.ವಿ.ಶಿವಕುಮಾರ್, ಮುಖಂಡರಾದ ಕೆ.ಎಂ.ಗೋವಿಂದರಾಜು, ಬೆಳ್ಳಂಬರಿ ವೇಣುಗೋಪಾಲ್, ಉಪೇಂದ್ರ ನಾಗರಾಜ್ ಮತ್ತಿತರರು ಉಪಸ್ಥಿತರ್‌ದರು.

ಕೋಟಗಾನಹಳ್ಳಿ ರಾಮಯ್ಯಗೆ ದಸಂಸ ಬೆಂಬಲ ಘೋಷಣೆ
ಕೋಲಾರ: ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜನಪರ ಆಡಳಿತ ನೀಡಲು ವಿಫಲವಾಗಿರುವ ಹಿನಲೆಯಲ್ಲಿ ಈ ಬಾರಿ ಅಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುವ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಬೆಂಬಲಿಸಲು ನಿರ್ಧರಿಸಿರುವುದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡರು ತಿಳಿಸಿದ್ದಾರೆ. ಈ ಸಂಬಂಧ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ದಸಂಸ ಮುಖಂಡರಾದ ಹೂರಾಸನಹಳ್ಳಿ ರಾಜಪ್ಪ, ಹಾರೋಹಳ್ಳಿ ರವಿ, ಕೀಲುಹೊಳಲಿ ಸತೀಶ್ ಮತ್ತಿತರರು, ಭ್ರಷ್ಟಚಾರ ರಹಿತ ಮತ್ತು ಅನೇಕತೆಯಲ್ಲಿ ಏಕತೆ ಕಾಣುವ ವ್ಯಕ್ತಿ ಕೋಟಿಗಾನಹಳ್ಳಿ ರಾಮಯ್ಯ ಅವರನು ಗೆಲಿಸುವುದರ ಮೂಲಕ ಕ್ಷೇತ್ರದಲ್ಲಿ ಹೊಸ ಪರಂಪರೆ ಹುಟ್ಟುಹಾಕಲು ದಸಂಸ ಚಿಂತನೆ ನಡೆಸಿದೆ ಎಂದರು. ಕಾಂಗ್ರೆಸ್ಪ್‌ಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ಸಂಸದರಾಗಿ ಆಯ್ಕೆಯಾಗಿದ್ದರೂ ಸಹ ತಳ ಸಮುದಾಯಗಳ ಅಭಿವೃದ್ಧಿಗೆ ಸಹಕರಿಸಿಲ್ಲ ಎಂದ ಆರೋಪಿಸಿದ ಅವರು, ಕ್ಷೇತ್ರದಲ್ಲಿ ಒಳಪಂಗಡಗಳನು ವಿಗಂಡಿಸಿದ್ದೇ ಮುನಿಯಪ್ಪ ಸಾಧನೆ ಎಂದು ಆರೋಪಿಸಿದರು. ದಸಂಸ ಮುಖಂಡರಾದ ನಾರಾಯಣಸ್ವಾಮಿ, ಬಾಬುರಾಮಯ್ಯ ಇದ್ದರು.

ಪಕ್ಷ ಸೇರ್ಪಡೆ...
ಚಿಂತಾಮಣಿ ಬಿಜೆಪಿ ಅಧ್ಯಕ್ಷ ಸೂರ್ಯಪ್ರಕಾಶ್ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು  ಬಿಜೆಪಿ ಸೇರ್ಪಡೆಗೊಂಡರು.

ಲ್ಯಾಂಕೋ ಚೆಕ್‌ಪೋಸ್ಟ್ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ
ಮುಳಬಾಗಲು: ತಾಲೂಕಿನ ರಾ.ಹೆ. 4 ರ ಹಾಗೂ ದೇವರಾಯಸಮುದ್ರಂ ಲ್ಯಾಂಕೋ ಚೆಕ್‌ಪೋಸ್ಟ್ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಂಧಲೆ ನಡೆಸಿರುವ ಘಟನೆ ಶನಿವಾರ ನಡೆದಿದೆ.  ಕೋಲಾರದಿಂದ ಮುಳಬಾಗಲು ಕಡೆ ಜೆಡಿಎಸ್ ಮುಖಂಡರಿಗೆ ಸೇರಿದ ಇನೋವಾ ಕಾರು ಬಂದಿದೆ.  ಈ ವೇಳೆ ಚೆಕ್‌ಪೋಸ್ಟ್ ಬಳಿ ಹಣ ಕೇಳಲಾಗಿ,  ಜೆಡಿಎಸ್ ಮುಖಂಡರ ಹೆಸರು ಹೇಳಿದ ಕಾರಣ ಅವರು ಕಾರು ಹೋಗಲು ಬಿಟ್ಟಿದ್ದಾರೆ. ಆದರೆ ಕಾರು ಚಾಲಕ ಒಬ್ಬನೇ ಇದ್ದು ಕಾರು ತಡೆಹಿಡಿದ ಬಗ್ಗೆ ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ ಕಾರಣ ಕೆಲವು ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಲ್ಯಾಂಕೋ ಮೇಲೆ ದಾಳಿ ನಡೆಸಿ ಗಾಜುಗಳನು ಒಡೆದು ಹಾಕಿದ್ದಾರೆ ಎಂದು ವೃತ್ತ ನಿರೀಕ್ಷಕ ಕೃಷ್ಣಪ್ಪ ತಿಳಿಸಿದ್ದಾರೆ. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರಾದ ಮುರಳಿ, ರಘುಪತಿರೆಡ್ಡಿ, ಮಂಜುನಾಥ್ ಮತ್ತಿತರರ ಮೇಲೆ ದೂರು ದಾಖಲು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ವೀರಪ್ಪ ಮೊಯ್ಲಿ ವಾಗ್ದಾಳಿ
ಬಾಗೇಪಲ್ಲಿ: ನಿಜವಾಗಲೂ ಹೋರಾಟ ಮಾಡುವ ತಾಕತ್ತು ಇದ್ದಿದ್ದರೆ ರಾಮನಗರ ಕ್ಷೇತ್ರದ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ  ಮಾಡಬೇಕಾಗಿತ್ತೇ ಹೊರತು, ನನಂತಹ ಹಿಂದುಳಿದ ವರ್ಗದವನ ಮೇಲೆ ಹೋರಾಟ ಮಾಡುವಂತಹ ಅನಿವಾರ್ಯತೆ ಇದೆಯೇ ಎಂದು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ  ವಾಗ್ದಾಳಿ ನಡೆಸಿದರು. ಪಟ್ಟಣದ ಹೊರವಲಯದಲ್ಲಿರುವ ಶಾದಿಮಹಲ್ ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದರು.  ಮಾಜಿ ಶಾಸಕ ಎನ್.ಸಂಪಂಗಿ ಮಾತನಾಡಿದರು. ಸಚಿವ ಅಭಯಚಂದ್ರ ಜೈನ್, ಜಿಪಂ ಸದಸ್ಯೆ ಅಮರಾವತಿ ಇದ್ದರು.

ಮತ ಅರಿವು ಮೂಡಿಸಲು ಬೈಕ್ ಓಡಿಸಿದ ಜಿಲ್ಲಾಧಿಕಾರಿ
ಕೋಲಾರ: ನಗರದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಸಮಿತಿಯಿಂದ ಶನಿವಾರ ನಗರದಲ್ಲಿ ಬೈಕ್ ರ್ಯಾಲಿ  ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಬೈಕ್‌ರ್ಯಾಲಿಗೆ ಸ್ವತಃ ಬೈಕ್ ಓಡಿಸುವ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಜಿಪಂ ಸಿಇಒ ವಿನೋದ್‌ಪ್ರಿಯಾ ಚಾಲನೆ ನೀಡಿದರು. ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಹೊಸ ಬಸ್‌ನಿಲ್ದಾಣ, ಚಂಪಕ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಡೆಸಿ ಮತದಾರರಲ್ಲಿ ಮತದಾನದ ಅರಿವು ಮೂಡಿಸಲಾಯಿತು. ಸಿ.ಎಂ.ರಂಗಾರೆಡ್ಡಿ, ಜಿಪಂ ಉಪ ಕಾರ್ಯದರ್ಶಿ ಬದನೂರು, ನಗರಸಭೆ ಆಯುಕ್ತ ಜಗದೀಶ್ ಇದ್ದರು.

ಬಾಗೇಪಲ್ಲಿ ಪಟ್ಟಣದಲ್ಲಿ ಬಿಜೆಪಿ ಪರ ಮತಯಾಚನೆ
ಬಾಗೇಪಲ್ಲಿ: ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಪಾದಯಾತ್ರೆ ಹೊರಟು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರವಾಗಿ ಸ್ಥಳೀಯ ಬಿಜೆಪಿ ಮುಖಂಡರು ಮತ ಯಾಚಿಸಿದರು.ಸ್ಥಳೀಯ ಮುಖಂಡ ಎಸ್.ಟಿ.ಬಾಬು ಮಾತನಾಡಿ, ಕೇಂದ್ರ ಸಚಿವ ವೀರಪ್ಪಮೊಯ್ಲಿ 5ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ದಿನನಿತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಅಭಾವ, ವಿದ್ಯುತ್ ಕೊರತೆ, ಬಸ್ ಪ್ರಯಾಣ ದರ ಏರಿಕೆ, ಇಂಧನ ತುಟ್ಟಿ ಮಾಡಿ ಜನ ಸಾಮಾನ್ಯರ ಬದುಕಿನೊಂದಿಗೆ ಕಾಂಗ್ರೆಸ್   ಚೆಲ್ಲಾಟವಾಡುತ್ತಿದೆ ಎಂದರು.
ಮೊಯ್ಲಿಗೆ ತಕ್ಕಪಾಠ: 2009ರ ಚುನಾವಣಾ ಸಮಯದಲ್ಲಿ ನೀಡಿರುವ ಒಂದು ಭರವಸೆಯನಾದರೂ ಸಹ ಈಡೇರಿಸುವಲ್ಲಿ ವಿಫಲರಾಗಿರುವ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಸ್ಥಳೀಯ ಮುಖಂಡರಾದ ಪಾತಪಾಳ್ಯ ಸುರೇಶ್, ಶಿವಪ್ಪ, ಚಂದ್ರಶೇಖರರೆಡ್ಡಿ, ಲೋಕೇಶ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಶಿಡ್ಲಘಟ್ಟದಲ್ಲಿ ಮತ ಪ್ರಚಾರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ
ಶಿಡ್ಲಘಟ್ಟ: ತಾಲೂಕಿನ ಪಲಿಚೆರ್ಲ ಗ್ರಾಮದಲ್ಲಿ ಬಿಜೆಪಿ ಸೇರ್ಪಡೆ ಹಾಗೂ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಕಾಂಗ್ರೆಸ್  ಶಾಶ್ವತ ನೀರಾವರಿ ಎಂದು ಜಪ ಮಾಡುತ್ತಿದೆಯೇ ಹೊರತು ಅದನು ಕಾರ್ಯರೂಪಕ್ಕೆ ತರುತ್ತಿಲ್ಲ. ಬಿಜೆಪಿ ತನ ಪ್ರಣಾಳಿಕೆಯಲ್ಲಿ ಹೆಣ್ಣು ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ, ಉದ್ಯೋಗ ಭದ್ರತೆ, ನದಿ ಜೋಡಣೆ ಮುಂತಾದ ಮಹತ್ತರ ಯೋಜನೆಗಳನು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.  ಸುರೇಂದ್ರಗೌಡ ಮಾತನಾಡಿ, ಕೋಲಾರ ಲೋಕಸಭೆ ಬಿಜೆಪಿ ಅಭ್ಯರ್ಥಿ ಎಂ ನಾರಾಯಣಸ್ವಾಮಿ ಅವರನು ಬೆಂಬಲಿಸಬೇಕು ಎಂದು ಕೋರಿದರು.  ಬಿಜೆಪಿ ಮುಖಂಡರಾದ ರವೀಂದ್ರ ಮತ್ತಿತರರು ಮಾತನಾಡಿದರು. ಸುಮಾರು 50 ಮಂದಿ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.

ಜಿಲ್ಲಾ ಸಹಕಾರಿ ನಿರ್ದೇಶಕ ಬಾಬು ಕಾಂಗ್ರೆಸ್ ಸೇರ್ಪಡೆ  
ಕೋಲಾರ: ಜನತೆ ತಮಗೆ ಈ ಬಾರಿಯೂ ಅವಕಾಶ ಮಾಡಿಕೊಟ್ಟಲ್ಲಿ ಉಳಿದ ಪ್ರಗತಿಪರ ಕೆಲಸ ಪೂರ್ಣಗೊಳಿಸುವ ಮೂಲಕ ಜನತೆಗೆ ಋಣಿಯಾಗಿರುತ್ತೇನೆ ಎಂದು ಕೋಲಾರ ಮೀಸಲು ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ತಿಳಿಸಿದರು. ಕ್ಯಾಲನೂರು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಷೇಕ್ ಮೆಹಬೂಬ್ ಬಾಬಾರನು ಕಾಂಗ್ರೆಸ್‌ಗೆ ಸ್ವಾಗತಿಸಿ ಅವರು ಮಾತನಾಡಿದರು.  ಬಾಬಾ ಮಾತನಾಡಿ, ಮುನಿಯಪ್ಪ ತಮ್ಮ ಸಹಕಾರ ಸಂಘದ ಮೂಲಕ ಸಾಲ ಸೌಲಭ್ಯವನು ಒದಗಿಸಿರುವುದೇ ಅಲ್ಲದೆ, ಇನು ಮುಂದೆಯೂ ನಮಗೆ ಬೇಕಾದ ಅನುಕೂಲ ಮಾಡಿಕೊಡುವ ವಿಶ್ವಾಸವಿದ್ದು, ಇದಕ್ಕೆ ಪ್ರತಿಫಲವಾಗಿ ಕಾಂಗ್ರೆಸ್ ಬಲಪಡಿಸಲು ಕಾಂಗ್ರೆಸ್ ಸೇರಿರುವುದಾಗಿ ಪ್ರಕಟಿಸಿದರು. ಜಿಲ್ಲಾ ಅಧ್ಯಕ್ಷ ಅನಿಲ್‌ಕುಮಾರ್ ಇದ್ದರು.

ಮತ ಯಾಚನೆ...
ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಎಂ.ಮುದ್ದಲಹಳ್ಳಿ, ಕೆಂಚಾರ್ಲಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಇಬ್ಬರು ದುಷ್ಕರ್ಮಿಗಳ ಕೃತ್ಯವೈದ್ಯ ವಿದ್ಯಾರ್ಥಿಗೆ ಇರಿತ
ಕೋಲಾರ: ವೈದ್ಯ ವಿದ್ಯಾರ್ಥಿಯೊಬ್ಬರನು ಅಡ್ಡಗಟ್ಟಿ ಸುಲಿಗೆ ಮಾಡಿರುವುದಲ್ಲದೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ನಗರ ಹೊರ ವಲಯದ ಕೋಗಿಲಹಳ್ಳಿ ಗೇಟ್ ಬಳಿ ಶನಿವಾರ ನಡೆದಿದೆ. ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಚಿತ್ರದುರ್ಗ ಮೂಲದ ಮಂಜುನಾಥ್ (25) ದುಷ್ಕರ್ಮಿಗಳಿಂದ ಸುಲಿಗೆಗೆ ಒಳಗಾಗಿ ಗಾಯಗೊಂಡು ಆಲ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ನಗರದಿಂದ ಟಮಕದ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ಯುವಕರಿಬ್ಬರು ವಾಹನ ಅಡ್ಡಗಟ್ಟಿ  ರಸ್ತೆ ಬದಿಯ ನಿರ್ಜನ ಪ್ರದೇಶಕ್ಕೆ ಬರುವಂತೆ ಒತ್ತಾಯ ಮಾಡಿ ಕರೆದುಕೊಂಡು ಹೋಗಿ ಚಾಕು ತೋರಿಸಿ ಹಣ ಮತ್ತು ಕೈಯಲ್ಲಿರುವ ಚಿನದ ಉಂಗುರ ನೀಡುವಂತೆ ಬೆದರಿಸಿದ್ದಾರೆ. ಜೇಬಿನಲ್ಲಿದ್ದ ಪರ್ಸ್ ಕಿತ್ತುಕೊಂಡಿದ್ದು, ಉಂಗುರ ಕೇಳಲಾಗಿ, ಆತ ಇದು ನನ ನಿಶ್ಚಿತಾರ್ಥ ಉಂಗುರವಾಗಿದ್ದು, ಕೊಡುವುದಿಲ್ಲ ಎಂದು ಹೇಳಿದಾಗ ಉಂಗುರವನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ ನಡೆಸಿ ಪ್ರತಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಮ್ಯಾರಾಥಾನ್ ಮೂಲಕ ಮತದಾರರಲ್ಲಿ ಜಾಗೃತಿ
ಬಾಗೇಪಲ್ಲಿ: ಕ್ಷೇತ್ರದಲ್ಲಿ ಮತದಾರರು ಆಸೆ-ಆಮಿಷಗಳಿಗೆ ಬಲಿಯಾಗದೆ  ಪ್ರತಿಯೊಬ್ಬರು ತಮ್ಮ ಮತವನು ನಿರ್ಭಯವಾಗಿ ತಪ್ಪದೇ ಮತ ಚಲಾಯಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ನಾಗರಾಜಶೆಟ್ಟಿ ಮತದಾರರಲ್ಲಿ ಮನವಿ ಮಾಡಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ಮತದಾರರಲ್ಲಿ ಜನ ಜಾಗೃತಿ ಮೂಡಿಸಲು ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮೇಣದಬತ್ತಿ ಮೆರವಣಿಗೆ ಮಾಡಲಾಗಿದೆ. ಇದೀಗ ಮ್ಯಾರಾಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಬದ್ಧ ದೇಶದಲ್ಲಿ ಪ್ರತಿಯೊಬ್ಬರಿಗೂ ಮತ ಚಲಾಯಿಸುವುದು ಹಕ್ಕು ಆಗಿದೆ. ಮತ ಹಾಕಿ, ಉತ್ತಮ ವ್ಯಕ್ತಿಯನು ಆರಿಸಿಕೊಳ್ಳಲು ಅವಕಾಶ ಇದೆ. ಆದರೆ, ಮತದಾನದ ಬಗ್ಗೆ ಕೆಲವರು ನಿರ್ಲಕ್ಷ್ಯ ಮನೋಭಾವನೆಯಿಂದ ಮತ ಚಲಾಯಿಸದೆ ನಿರ್ಲಕ್ಷ್ಯ ಮಾಡದೆ ಪ್ರತಿಯೊಬ್ಬರು ಮತ ಹಾಕಬೇಕು ಎಂದು ತಿಳಿಸಿದರು. ಪಟ್ಟಣದ ರಸ್ತೆಗಳಲ್ಲಿ ಸಂಚರಿಸಿ ಸಿವಿಲ್ ನ್ಯಾಯಾಲಯದವರಿಗೂ ನಡೆಯಿತು.

ವೊಡಾಫೋನ್ ಕಂಪೆನಿ ವಿರುದ್ಧ ಪತ್ರ ಚಳವಳಿ
ಚಿಂತಾಮಣಿ: ವೊಡಾಫೋನ್ ಕಂಪೆನಿ ಕನಡ ವಿರೋಧಿ ನೀತಿ ಖಂಡಿಸಿ ಚಿಂತಾಮಣಿಯಲ್ಲಿ ಕರವೇ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.
ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾದ ಒಕ್ಕೂಟದ ದೇಶವಾಗಿರುವ ಭಾರತದಲ್ಲಿ 2500 ವರ್ಷಗಳ ಇತಿಹಾಸವುಳ್ಳ ಕನಡ ಭಾಷೆ ಪ್ರಾಚೀನ ಭಾಷೆಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕದಲ್ಲಿ ಕನಡ ಆಡಳಿತ ಭಾಷೆ. ಕರ್ನಾಟಕದ ಸರ್ಕಾರ 2008ರಲ್ಲಿ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಜ್ಯದ ಎಲ್ಲಾ ಅಂಗಡಿ ನಾಮ ಫಲಕಗಳಲ್ಲಿ ಕನಡ ಕಡ್ಡಾಯವಾಗಿರಬೇಕೆಂಬ ನಿಯಮವಿದ್ದರೂ  ಸಹ ವೊಡಾಫೋನ್ ಮೂಲಕ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿರುವುದನು ಖಂಡಿಸಿ ಚಿಂತಾಮಣಿಯಲ್ಲಿ ಕರವೇ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು.
ಅಂಬಿ ಆಗಮನಕ್ಕೆ ಸಂತಸ: ಕರವೇ ತಾಲೂಕು ಅಧ್ಯಕ್ಷ ಎನ್. ಅಂಬರೀಷ್ ಮಾತನಾಡಿ, ಹಿರಿಯ ನಟ ಅಂಬರೀಷ್ ಮಲೇಷ್ಯಾದಿಂದ ತಾಯಾಡಿಗೆ ಮರಳಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸಿ.ಡಿ.ಶಂಕರ್, ಚಂದ್ರಕುಮಾರ್,  ಅಶೋಕ್, ನಾರಾಯಣರೆಡ್ಡಿ, ಶಿವಣ್ಣ, ರಾಮಣ್ಣ ಇದ್ದರು.

ವೃದ್ಧಾಶ್ರಮದಲ್ಲಿ ಅನ ಸಂತರ್ಪಣೆ
ಚಿಂತಾಮಣಿ: ನಗರದ ವೆಂಕಟಗಿರಿಕೋಟೆಯ ದಿ.ಬಾಲಕೃಷ್ಣ ಮತ್ತು ದಿ.ಪ್ರಕಾಶ್ ಜ್ಞಾಪಕಾರ್ಥವಾಗಿ ಪಟ್ಟಣದ ವಾಸವಿ ವೃದ್ಧಾಶ್ರಮದ  ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಒಂದು ದಿನದ ಊಟದ ವ್ಯವಸ್ಥೆಯನು ಏರ್ಪಡಿಸಿ ಒಂದನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮವನು ಆಶ್ರಮದಲ್ಲಿ ಅನ ಸಂತರ್ಪಣೆ ಮಾಡಿ ಆಚರಿಸಿಕೊಂಡರು. ಇದೇ ವೇಳೆ ದಿ.ಬಾಲಕೃಷ್ಣ ಅವರ ಪತಿ ಸಾವಿತ್ರಮ್ಮ ಮಾತನಾಡಿ, ತ್ರಿವೇಣಿ ಸಂಗಮ ನದಿಗಳ ಹತ್ತಿರ ಹೋಗಿ ದುಂದು ವೆಚ್ಚ ಮಾಡುವ ಬದಲು ಇಂತಹ ಅನಾಥ ಆಶ್ರಮದಲ್ಲಿ ಇರುವ ಮಕ್ಕಳಿಗೆ ವೃದ್ಧರಿಗೆ ಹೊಟ್ಟೆ ತುಂಬಾ ಊಟ ನೀಡಿದರೆ ದೇವರ ಆಶೀರ್ವಾದ ಸದಾ ನಮ್ಮ ಮೇಲೆ ಇದ್ದು,ದಿವಂಗತರಾಗಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನುಡಿದರು.

ಚಿಕ್ಕಕುಂತೂರು ಗ್ರಾಮದಲ್ಲಿ
ಜಾತ್ರಾ ಮಹೋತ್ಸವ
ಮಾಲೂರು: ಜನಪದ ಸಂಸ್ಕೃತಿ ಬಿಂಬಿಸುವ ಜಾತ್ರೆಗಳು ಮಾನವ ಸಂಬಂಧ ಗಟ್ಟಿಗೊಳಿಸುತ್ತವೆ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂತೂರು ಚಂದ್ರಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಚಿಕ್ಕಕುಂತೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ಕರಗ: ಚಿಕ್ಕಕುಂತೂರು ಗ್ರಾಮದ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಶ್ರೀರಾಮ, ಗಣೇಶ್, ವೇಣುಗೋಪಾಲ್‌ಸ್ವಾಮಿ, ಆಂಜನೇಯ, ಮುನೇಶ್ವರ, ವೆಂಕಟೇಶ್ವರ, ಸಪ್ಲಮ್ಮ, ಗಂಗಮ್ಮ, ಮಾರಮ್ಮ, ಯಲ್ಲಮ್ಮದೇವಿ ಪಲ್ಲಕ್ಕಿಗಳ ಮೆರವಣಿಗೆ ನಡೆದವು. ನಾಗರಾಜ್ ಹೂವಿನ ಕರಗ ಹೊತ್ತು ಸಂಚರಿಸಿದರು.

ನರೇಂದ್ರಮೋದಿ ಪ್ರಧಾನಿಯಾದರೆ
ಸಕಲ ಸಮಸ್ಯೆ ನಿವಾರಣೆಗೆ ಆದ್ಯತೆ
ಗೌರಿಬಿದನೂರು: ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದಲ್ಲದೆ ನದಿ ಜೋಡಣೆ ಕೈಗೆತ್ತಿಕೊಂಡು ಬಯಲು ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದು ಬಿಜೆಪಿ ಮುಖಂಡ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು. ಹೋಬಳಿಯ ಪುರ ಗ್ರಾಪಂ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಮನೆಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.    ಬಿಜೆಪಿ ಮುಖಂಡರಾದ ಆದಿನಾರಾಯಣ, ಶಂಕರೇಗೌಡ, ಸುರೇಶ್, ವೆಂಕಟೇಶ್, ರಾಮಾಂಜಿನಪ್ಪ, ಮನೋಹರ್, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಮತ ಜಾಗೃತಿ...
ಬಾಗೇಪಲ್ಲಿ ಪಟ್ಟಣದಲ್ಲಿ ಮತದಾರ ಜನ ಜಾಗೃತಿ ಮೂಡಿಸಲು ಮ್ಯಾರಾಥಾನ್ ಓಟಕ್ಕೆ ಚಾಲನೆ ಸಹಾಯಕ ಚುನಾವಣಾಧಿಕಾರಿ ನಾಗರಾಜಶೆಟ್ಟಿ ಮಾತನಾಡಿದರು.

 ಕುಂದುಕೊರತೆ ಪರಿಶೀಲಿಸಿದಬೆಂಗಳೂರು ವಿವಿ ಸಮಿತಿ
ಕೋಲಾರ: ಬೆಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ತಿಮ್ಮೇಗೌಡ ಅವರು ಶುಕ್ರವಾರ ನಗರದ ನಗರದ ಮಹಿಳಾ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಫಲಿತಾಂಶ ಪ್ರಕಟಣೆ ಹಾಗೂ ಅಂಕಪಟ್ಟಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಹಾಜರಿ ಎಂದು ಬರುತ್ತಿರುವುದು, ಅಂಕಪಟ್ಟಿಯಲ್ಲಿ ಹೆಸರುಗಳು ಮತ್ತು ಭಾವಚಿತ್ರಗಳ ಅದಲು ಬದಲಾವಣೆಗಳು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಉಪಕುಲಪತಿಗಳಿಗೆ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಈ ಎಲ್ಲಾ ಸಮಸ್ಯೆಗಳನ್ನು ದಾಖಲೆ ಸಮೇತ ಬೆಂಗಳೂರಿಗೆ ಬಂದು ತಮ್ಮನ್ನು ಭೇಟಿ ಮಾಡಬೇಕೆಂದು ಇದರ ಪರಿಹಾರಕ್ಕಾಗಿ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದ್ದು ಶೀಘ್ರ ಬಗೆಹರಿಸಿ ಕೊಡುವುದಾಗಿ ಅವರು ತಿಳಿಸಿದರು. ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಆಂಜನಪ್ಪ, ಬೆಂಗಳೂರು ವಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಮುನಿರಾಜು, ವಿದ್ಯಾರ್ಥಿ ಮುಖಂಡರಾದ ಸುರೇಶ್‌ಗೌಡ, ವಾಸುದೇವರೆಡ್ಡಿ, ಮಹಾದೇವ್ ಹಾಗೂ ಕಾಲೇಜಿನ ಆಡಳಿತ ವರ್ಗದ ಸಿಬ್ಬಂದಿ ಉಪಸ್ಥಿತರಿದ್ದರು .

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.