ಕೋಲಾರ

ನ್ಯಾಯಾಧೀಶರ ವಸತಿಗೃಹಗಳ ಉದ್ಘಾಟನೆ

Published On :

ಕೆಜಿಎಫ್: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕಪಾಡಿಯಾ ಅವರು ಕೈಗೊಂಡ ಕ್ರಮಗಳಿಂದಾಗಿ ದೇಶದ ಎಲ್ಲ ನ್ಯಾಯಾಲಯಗಳಿಗೆ ಸೂಕ್ತ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಪುನರಾವಲೋಕನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷ ಎನ್.ಕೆ.ಪಾಟೀಲ್ ಹೇಳಿದರು.
ನಗರದ ಆಂಡ್ರಸನ್‌ಪೇಟೆ ವ್ಯಾಪ್ತಿಯ ಮಸ್ಕನ್ ಕೈಗಾರಿಕಾ ಪ್ರಾಂಗಣದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 2.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನ್ಯಾಯಾಧೀಶರ ವಸತಿ ಗೃಹಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾ.ಆನಂದ್ ಬೈರಾರೆಡ್ಡಿ ಮಾತನಾಡಿ, 'ದೇಶದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಮತ್ತು ನ್ಯಾಯಾಂಗದ ವಲಯದಲ್ಲಿ ಕೈಗೊಳ್ಳಬೇಕಾದ ಯೋಜನೆಗಳಿಗೆ ಅನುದಾನ ಅಗತ್ಯವಿದೆ. ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ. ಇಂತಹ ಯೋಜನೆಗಳಿಗೆ ಹಣಕಾಸು ಅಗತ್ಯವಿದೆ' ಎಂದು ಹೇಳಿದರು. ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಡಾ.ಜವಾದ್ ರಹೀಂ ಮತ್ತು ಎಲ್.ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ನ್ಯಾ. ಎನ್.ಎಸ್.ಮಮದಾಪುರ, ಎಸ್.ಜೆ.ಕೃಷ್ಣ, ಆರ್.ಪಿ.ನಂದೀಶ್, ವಿ.ಜಯಪ್ರಕಾಶ್, ಕಾರ್ಯಪಾಲಕ ಅಭಿಯಂತರ ಮುನಿಅಂಜಿನಪ್ಪ, ಹನುಮಪ್ಪ, ಎಸ್.ರಾಜೇಂದ್ರನ್, ಆನಂದರಾಮಯ್ಯ, ಶ್ರೀನಾಥ್, ರಾಘವನ್, ಸುಂದರರಾಮರೆಡ್ಡಿ, ಎಸ್.ಎನ್.ರಾಜಗೋಪಾಲಗೌಡ, ಮಣಿವಣ್ಣನ್, ವೆಂಕಟರಾಮರೆಡ್ಡಿ, ತಂಗರಾಜ್, ಮನೋಹರನ್, ತಿರುವರಂಗಮ್, ಯಮುನಾ, ಮುಕುಂದ, ಶ್ರೀದೇವಿ, ಮಗೇಂದಿರನ್, ಕಣ್ಣನ್, ಗೋಪಿ, ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ, ವೃತ್ತ ನಿರೀಕ್ಷಕರಾದ ಲಕ್ಷ್ಮೀನಾರಾಯಣ, ಪವಣ್‌ಕುಮಾರ್, ಪಿಎಸ್‌ಐಗಳಾದ ಎಲ್.ಆಂಜಪ್ಪ, ರಂಗಶಾಮಯ್ಯ ಹಾಜರಿದ್ದರು.
ಮನವಿ: ಕುಟುಂಬ ನ್ಯಾಯಾಲಯ  ಮತ್ತು ಜಿಲ್ಲಾ ನ್ಯಾಯಾಲಯದ ಮಾನ್ಯತೆ ಪ್ರೊಸೆಸ್ ಶುಲ್ಕವನ್ನು ಕೆಜಿಎಫ್ ನ್ಯಾಯಾಲಯದಲ್ಲೇ ಕಾರ್ಯನಿರ್ವಹಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿ ವಕೀಲರ ಸಂಘದ ಅಧ್ಯಕ್ಷ ಎಸ್.ಎ.ಹರಿನಾಥ್ ಮನವಿ ಪತ್ರವನ್ನು ನ್ಯಾ. ಡಾ.ಜವಾದ್‌ರಹೀಂ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ. ಎಸ್.ರೇಣುಕಾಪ್ರಸಾದ್‌ಅವರಿಗೆ ಸಲ್ಲಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.