ಕೋಲಾರ

ಮೇವಿಗೆ ಬರ: ರೈತರ ಸ್ಥಿತಿ ಗಂಭೀರ

Published On :

ಗೌರಿಬಿದನೂರು: ಬತ್ತಿದ ಕೆರೆಗಳು, ಕುಡಿಯುವ ನೀರಿನ ಸಮಸ್ಯೆ ಜೊತೆಗೆ ರೈತರು ದನಕರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದ್ದು, ಮೇವಿನ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದ್ದು, ಸರ್ಕಾರ ಉಚಿತವಾಗಿ ಮೇವು ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಅಲ್ಪಸ್ವಲ್ಪ ಮೇವು ಬೆಳೆದಿರುವ ರೈತರು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ತಾಲೂಕಿನ ಒಣ ಜೋಳದ ಮೇವು ದೂರದ ತಾಲೂಕುಗಳಿಗೆ ಕೊಂಡೊಯ್ಯುತ್ತಿದ್ದಾರೆ. ಕೊಳವೆ ಬಾವಿಗಳು ಬತ್ತಿಹೋಗಿದ್ದು, ಸಿಗುತ್ತಿರುವ ಅಲ್ಪ ನೀರು ಹಾಯಿಸಲು ವಿದ್ಯುತ್ ಅಭಾವವಿರುವುದರಿಂದ ಬೆಳೆ ಬೆಳೆಯಲು ರೈತರು ಹಿಂಜರಿಯುತ್ತಿದ್ದಾರೆ. ಇದರಿಂದ ಮೇವಿನ ಕೊರತೆ ಹೆಚ್ಚಾಗಿದೆ. ಪ್ರಸ್ತುತ ರೈತರು ಒಂದು ಟ್ರ್ಯಾಕಟರ್ ಮೇವಿಗೆ 11 ಸಾವಿರಕ್ಕೂ ಹೆಚ್ಚು ಹಣ ತೆತ್ತು ಕೊಳ್ಳುತ್ತಿದ್ದಾರೆ.
ಇಲ್ಲಿಯೇ ಮೇವಿಗೆ ಕೊರೆತೆ ಇದೆ. ಆದರೂ ಬೇರೆ ತಾಲೂಕುಗಳಾದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ ಮುಂತಾದ ಭಾಗಗಳಿಂದ ರೈತರು ಮೇವಿಗೆ ದುಬಾರಿ ಬೆಲೆ ತೆತ್ತು ಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯ ಈ ಭಾಗದಿಂದ ಸುಮಾರು 15 ರಿಂದ 20ಕ್ಕೂ ಹೆಚ್ಚು ಲೋಡ್ ಮೇವು ಹೊರ ತಾಲೂಕುಗಳಿಗೆ ಹೋಗುತ್ತಿದೆ. ಇದರಿಂದ ಸ್ಥಳೀಯ ಬಡ ರೈತರು ದುಬಾರಿ ಬೆಲೆ ತೆತ್ತು ಮೇವು ಖರೀದಿಸಲಾಗದೆ, ಜಾನುವಾರುಗಳನ್ನು ಉಪವಾಸ ಕೆಡವಲಾರದೆ ಕಸಾಯಿಖಾನೆಗೆ ತಳ್ಳುವ ದುಸ್ಥಿತಿಎದುರಿಸುವಂತಾಗಿದೆ.
ಕಳೆದ ವರ್ಷ 6 ರಿಂದ 7 ಸಾವಿರಕ್ಕೆ ದೊರೆಯುತ್ತಿದ್ದ ಒಂದು ಲೋಡು ಮೇವು ಈ ವರ್ಷ 11 ಸಾವಿರದಷ್ಟು ಬೆಲೆ ಏರಿದ್ದು  ಮಾರಾಟಗಾರರಿಗೆ ಲಾಭವಾದರೂ, ಕೊಳ್ಳುವವರಿಗೆ ದುಬಾರಿ ಯಾಗಿದೆ.
ರಾಗಿ ಮೇವು ದೊರೆಯುತ್ತಿಲ್ಲ: ನೀರು ಕಡಿಮೆಯಾಗಿ ಹಸಿಮೇವು ದೊರೆಯುವುದು ಕಷ್ಟವಾಗಿರುವುದರಿಂದ ಒಣ ಮೇವಿಗೂ ಬರವಾಗಿದೆ. ದೊರೆತರೂ ದುಬಾರಿಯಾಗಿದ್ದು ಸರ್ಕಾರ  ಉಚಿತ ಮೇವು ನೀಡಬಹುದೆಂಬ ನೀರಿಕ್ಷೆಯಲ್ಲಿ ರೈತ ಕಾಯುತ್ತಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.