ಅದ್ಧೂರಿಯ ಹೂವಿನ ಕರಗ
ಮಾಲೂರು: ಇಲ್ಲಿನ ಧರ್ಮರಾಯಸ್ವಾಮಿ ದೇವಾಲಯದ ಶ್ರೀ ದ್ರೌಪದಮ್ಮ ಹೊವಿನ ಕರಗವು ಸಾವಿರಾರು ಭಕ್ತರ ಶ್ರದ್ದಾ-ಭಕ್ತಿಯ ನಡುವೆ ಭಾನುವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.
ಹೂವಿನ ಕರಗ ವೀಕ್ಷಿಸಲು ತಾಲೂಕು ಸೇರಿದಂತೆ ಸುತ್ತಮುತ್ತಲ ಗ್ರಾಮದ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಕರಗ ಹೂತ್ತ ಪೂಜಾರಿ ಶಂಕರಪ್ಪ ಅವರು ದೇವಾಲಯ ಸುತ್ತ ಅಕರ್ಷಕವಾಗಿ ನರ್ತಿಸುತ್ತ ಸಾಗಿದರು. ದೇವಾಲಯ ಸುತ್ತ ನಿಂತ ಭಕ್ತರು ಗೋವಿಂದ-ಗೋವಿಂದ ಎಂಬ ನಾಮ ಜಪಿಸುತ್ತಾ ಮಲ್ಲಿಗೆ ಹೂ ಕರಗದ ಮೇಲೆ ಎರೆಚಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಿರಿಸಿದ ಕರಗವು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನೃತ್ಯಿಸಿ, ಭಕ್ತರನ್ನು ಮನರಂಜಿಸಿತು. ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಪಟಾಲಮ್ಮ, ಸಫಲಾಂಭ, ವೀರ ಆಂಜನೇಯ, ಮಾರಿಕಾಂಭ, ಮುತ್ಯಾಲಮ್ಮ ಸೇರಿದಂತೆ ಹಲವು ದೇವತೆಗಳ ಪಲ್ಲಕ್ಕಿಗಳು ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿದವು. ಪಟ್ಟಣದ ಹಲವಡೆ ನಾಟಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲಿಲ್ಲಿ ಸಂಘ ಸಂಸ್ಥೆಗಳು ಅನ್ನದಾನ ಹಮ್ಮಿಕೊಂಡಿದ್ದರೆ, ಮಾರಿಕಾಂಭ ದೇವಾಲಯ ಸಮಿತಿಯವರು ದೋಸೆ ಕ್ಯಾಂಪ್ ಆಯೋಜಿಸಿ, ಭಕ್ತರಿಗೆ ಉಚಿತವಾಗಿ ದೋಸೆ ಹಂಚಿದರು. ಪಟ್ಟಣದ ರೈಲ್ವೇ ಸೇತುವೆ ಬಳಿ ಶಾಸಕ ಮಂಜುನಾಥ್ ಗೌಡ ಪ್ರಯೋಜಿತ ಬಾಣ ಬಿರುಸುಗಳ ಪಟಾಕಿ ಸಿಡಿತದ ಕಾರ್ಯಕ್ರಮ ಒಂದು ಗಂಟೆ ಕಾಲ ನಡೆಯಿತು. ಭಾನುವಾರ ಸಂಜೆ ಪಟಾಲಮ್ಮ ದೇವಿ ದೇವಾಲಯ ಬಳಿ ನಡೆದ ಸಿಡಿರಣ್ಣ ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಿಡಿಗೆ ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು. ಭಾನುವಾರ ರಾತ್ರಿ ಯಿಂದ ಸೋಮವಾರ ಬೆಳ್ಳಗೆ 9 ಗಂಟೆ ತನಕ ಪಟ್ಟಣದಾದ್ಯಂತ ಸಂಚರಿಸಿದ ಹೂವಿನ ಕರಗವು ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗ ಅಗ್ನಿ ಕುಂಡ ಪ್ರವೇಶಿಸುವ ಮೂಲಕ ಅಂತ್ಯಗೊಂಡಿತು. ಶಾಸಕ ಮಂಜುನಾಥ್ ಗೌಡ ದಂಪತಿ, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಯಾದಿ ಗ್ರಾಮದ ಗಣ್ಯರೆಲ್ಲ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

