ಸಾಹಿತ್ಯವೇ ಜೀವನ: ವೈ. ಸಂಪಂಗಿ
ಬಂಗಾರಪೇಟೆ: ಸಾಹಿತ್ಯವೇ ಜೀವನ, ಉಳಿದ ಜೀವನದ ಎಲ್ಲಾ ಅಂಶಗಳು ಸಾಹಿತ್ಯಕ್ಕೆ ಪೂರಕ ಎಂದು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ಹೇಳಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ 4ನೇ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳಗಳು ನಡೆಸುವ ಮೂಲಕ ಗ್ರಾಮೀಣರಿಗೂ ಸಾಹಿತ್ಯ ರುಚಿ ತೋರಿಸಲು ಹೊರಟಿರುವ ಪರಿಷತ್ ಕಾರ್ಯವನ್ನು ಶ್ಲಾಘಿಸಿ ಬೇತಮಂಗಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಸಹಾಯ ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೆಜಿಎಫ್ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಅಪ್ಪಯ್ಯಗೌಡ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ಮನುಷ್ಯನ ಜೀವನವನ್ನು ವಿಕಸಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಇಂತಹ ಸಮ್ಮೇಳನಗಳು ಯಶಸ್ವಿಯಾಗಲೂ ಸರ್ಕಾರಿ ನೌಕರರು. ನಾಗರೀಕರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್. ಅಶ್ವಥ್ ಮಾತನಾಡಿ ಶತಮಾನೋತ್ಸವ ಅಂಚಿನಲ್ಲಿರುವ ಸಾಹಿತ್ಯ ಪರಿಷತ್ತು ತಾಲೂಕು ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಉತ್ಸುಕವಾಗಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ಜೂನ್ 13 ರಂದು ಬಂಗಾರಪೇಟೆ 4ನೇ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಬೇತಮಂಗಲದಲ್ಲಿ ಏರ್ಪಡಿಸಲಾಗಿದ್ದು ಕನ್ನಡಾಭಿಮಾನಿಗಳು, ಸಾಹಿತಿಗಳು, ಕವಿಗಳು, ನಾಗರೀಕರು, ಸರ್ಕಾರಿ ನೌಕರರು, ಶಿಕ್ಷಕ ವೃಂದದವರು ಎಲ್ಲರೂ ಸಹಕಾರ ನೀಡಿ ಯಶಸ್ವಿ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ವೆಂಕಟಮುನಿಯಪ್ಪ, ಪಧಾಧಿಕಾರಿ ಎಲ್.ರಾಜಪ್ಪ. ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಚ್.ಬಾಲಕೃಷ್ಣೇಗೌಡ, ಪರಿಷತ್ ಕಾರ್ಯದರ್ಶಿಗಳಾದ ಬಿ.ನಾಗರಾಜ, ಆ.ನಾ. ರಮೇಶ್. ಮು.ಶಿ. ಜಗದೀಶ್ವರಯ್ಯ, ಕ.ರ.ವೇ. ಮುಖಂಡ ಕೋದಂಡರಾಮಯ್ಯ, ಹೋಬಳಿ ಅಧ್ಯಕ್ಷ ಎಲ್.ಎ. ವಿಜಯಕುಮಾರ್ ಮಾತನಾಡಿದರು.
ಬಿಆರ್‌ಪಿ ಮಂಜುನಾಥ್, ಶಿವಕುಮಾರ್, ವಿಜಯಲಕ್ಷ್ಮೀ, ವಾಣಿ, ಸುರೇಶ್, ಶ್ರೀಧರ್ ಶರ್ಮ, ನಾಗಭೂಷಣ್, ನವೀನ್, ಶಂಕರ್, ಲಕ್ಷೀನಾರಾಯಣ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

