ಕೋಲಾರ

ಅಪಘಾತ: ಬಂಗಾರಪೇಟೆ ಅಧಿಕಾರಿಗಳಿಗೆ ಗಾಯ

Published On :

ಬಂಗಾರಪೇಟೆ: ಧರ್ಮಸ್ಥಳ ಬಳಿ ಸಂಭವಿಸಿದ ಅಪಘಾತದಲ್ಲಿ ಬಂಗಾರಪೇಟೆಯ ಅಧಿಕಾರಿಗಳು ಗಾಯಗೊಂಡ ಘಟನೆ ನಡೆದಿದೆ. ಶಿಶು ಅಭಿವೃದ್ಧಿ ಇಲಾಖೆ 44 ಅಧಿಕಾರಿಗಳು ರಾಜ್ಯದ ಮೂರು ಕಡೆ ಆಹಾರ ಉತ್ಪಾದನೆ ಘಟಕಗಳಿಗೆ ಭೇಟಿ ನೀಡಲು ತೆರಳಿದ್ದರು. ಮಂಗಳವಾರ ಅಧಿಕಾರಿಗಳಿದ್ದ ಸರ್ಕಾರಿ ಧರ್ಮಸ್ಥಳಧ ನೇತ್ರಾವತಿ ನದಿಯ ತಿರುವಿನಲ್ಲಿ ಆಯಾ ತಪ್ಪಿ ಉರುಳಿದೆ. ಈ ಘಟನೆಯಲ್ಲಿ ಇಬ್ಬರಿಗೆ ಕೈ ಮುರಿದು, 20ಕ್ಕೂ ಹೆಚ್ಚು ಸಿಬ್ಬಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಬಂಗಾರಪೇಟೆ ಸಿಡಿಪಿಒ ರಾಮನ್ ಬಸ್ನಿಂದ ಪಾರಾಗಿ, ಕಿಟಕಿ ಗಾಜು ಒಡೆದು ಬಸ್ನಲ್ಲಿದ್ದವರನ್ನು ಹೊರಗೆ ತೆಗೆದಿದ್ದಾರೆ. ಪ್ರಥಮ ದರ್ಜೆ ಗುಮಾಸ್ತೆ ರೂಪಾ ಕೈ ಕತ್ತರಿಸಿ ತುಂಡಾಗಿದೆ. ಶ್ರೀನಿವಾಸಪುರ ಶಿಶು ಅಭಿವೃದ್ಧಿ ಅಧಿಕಾರಿ ಶೈಲಜ ಅವರ ಕೈಯೂ ಕಟ್ ಆಗಿದೆ. ಮುಳಬಾಗಿಲು ಸಿಡಿಪಿಓ ರಾಮಪ್ಪ ಅವರಿಗೆ ಎದೆಯ ಮೂಳೆ ಮುರಿದಿದೆ. ಇವರನ್ನೆಲ್ಲ ಧರ್ಮಸ್ಥಳದ ಅಶ್ವಿನಿ ಆಸ್ಪತ್ರೆ ಮತ್ತು ಎ.ಜಿ.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.