ಆಜಾದ್ ಚೌಕ್ನಲ್ಲಿ ಕಗ್ಗತ್ತಲು!
ಚಿಂತಾಮಣಿ: ನಗರದ ಮಧ್ಯ ಭಾಗದಲ್ಲಿರುವ ಆಜಾದ್ ಚೌಕ್ನಲ್ಲಿರು ಬೀದಿ ದೀಪಗಳು ಹಾಳಾಗಿದ್ದು, ರಾತ್ರಿ ವೇಳೆ ಸಾರ್ವಜನಿಕರು ಭಾರಿ ತೊಂದರೆ ಅನುಭವಿಸತ್ತಿದ್ದಾರೆ.
ಆಜಾದ್ ಚೌಕ್ನಲ್ಲಿರುವ ಬೀದಿ ದೀಪಗಳನ್ನು ಸರಿಪಡಿಸಲು ನಾಗರಿಕರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಜನರು.
ರೇಲ್ವೆ ಸ್ಟೇಷನ್ ರಸ್ತೆ, ಅಗ್ರಹಾರ, ಬ್ರಾಹ್ಮಣರಪೇಟೆ, ದೊಡ್ಡಪೇಟೆ, ಎಂ.ಜಿ.ರಸ್ತೆ, ಹೂವಿನಪೇಟೆ ಸೇರಿದಂತೆ ವಿವಿಧ ಭಾಗಗಳಿಗೆ ಈ ಚೌಕ್ ಬಳಸಿಕೊಂಡ ಹೋಗಬೇಕಾಗುತ್ತದೆ. ಬೀದಿ ಇಲ್ಲದೇ ಇರುವುದರಿಂದ ವೃದ್ಧರು, ಮಹಿಳೆಯರು, ಮಕ್ಕಳು ಅಡ್ಡಾಡುವುದು ಕಷ್ಟಕರವಾಗಿದೆ.
ಕುಡುಕರ ಹಾವಳಿ: ಇನ್ನೊಂದೆಡೆ ವೃತ್ತದ ಸುತ್ತ ಸಂಜೆಯಾದರೆ ತಳ್ಳು ಗಾಡಿ ವ್ಯಾಪಾರ ಶುರುವಾಗುತ್ತದೆ. ಹಾಗಾಗಿ, ತಿಂಡಿ ತಿನ್ನಲು ಹಲವು ಕುಡುಕರು ಕಂಠ ಪೂರ್ತಿ ಕುಡಿದು ಬರುತ್ತಾರೆ. ಅಲ್ಲದೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆರೋಪವು ಸ್ಥಳೀಯರಿಂದ ಕೇಳಿ ಬಂದಿದೆ. ಕೆಲವು ಪಡ್ಡೆ ಹುಡುಗರು ಯುವತಿಯರಿಗೆ ಚುಡಾಯಿಸುವುದು ಇಲ್ಲಿ ಸಾಮಾನ್ಯವಾಗುತ್ತಿದೆ. ನಗರದಲ್ಲಿ ಇತ್ತೀಚೆಗೆ ಸರಗಳ್ಳತನ ಹೆಚ್ಚಾಗಿದೆ. ರಾತ್ರಿ ವೇಳೆ ಈ ಚೌಕ್ನಲ್ಲಿ ಬರಲು ಮಹಿಳೆಯರು ಹೆದರುತ್ತಿದ್ದಾರೆ. ಕತ್ತಲೆ ಇರುವುದರಿಂದ ಯಾವ ವ್ಯಕ್ತಿ ಬರುತ್ತಿದ್ದಾರೆ, ಹೋಗುತ್ತಿದ್ದಾರೆಂಬುದು ಗೊತ್ತಾಗುವುದಿಲ್ಲ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆಜಾದ್ ಚೌಕ್ನಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

