ಕೋಲಾರ ಜಿಲ್ಲೆಗೆ ನೀರು ಹರಿಸುವ 110 ಕೋಟಿ ಯೋಜನೆ ಪಟ್ಟಿಗೆ ಮಾಲೂರು ಸೇರಿಸಲು ಆಗ್ರಹ
ಮಾಲೂರು: ಬೆಂಗಳೂರಿನ ಕೊರಮಂಗಲ-ಚಲ್ಲಘಟ್ಟ-ಎಲೆ ಮಲ್ಲಪ್ಪಶೆಟ್ಟಿ ಕೆರೆ ನೀರನ್ನು ಶುದ್ಧೀಕರಿಸಿ ಕೋಲಾರ ಜಿಲ್ಲೆಗೆ ಹರಿಸುವ 110 ಕೋಟಿ ರು.ಗಳ ಯೋಜನೆಯ ಪಟ್ಟಿಯಲ್ಲಿ ಕೈ ಬಿಟ್ಟಿರುವ ಮಾಲೂರು ತಾಲೂಕು ಹೆಸರನ್ನು ಮತ್ತೆ ಸೇರಿಸಿ ತಾಲೂಕಿನ ಜನತೆಗೆ ನ್ಯಾಯ ಒದಗಿಸಿ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ತ್ಯಾವನಹಳ್ಳಿ ಡಾ.ಎಂ. ಗೋಪಾಲ್ ಗೌಡ ಶನಿವಾರ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಗೋಪಾಲ್ ಗೌಡ ರವರು ಹಾಲಿ ಜಿಲ್ಲಾಧಿಕಾರಿಗಳ ದೂರದೃಷ್ಟಿಯಿಂದ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಜಿಲ್ಲೆಯ ಮಾಲೂರು-ಕೋಲಾರ-ಬಂಗಾರಪೇಟೆ-ಶ್ರೀನಿವಾಸಪುರ-ಮುಳಬಾಗಿಲು ತಾಲೂಕಿನ ಕೆರೆಗಳಿಗೆ ನೀರು ಹರಿಸುವ 110 ಕೋಟಿ ರು. ಯೋಜನೆ ರೂಪಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿ ಸಕರಾತ್ಮಾಕ ಸ್ಪಂದನೆ ಸಿಕ್ಕಿರುವುದು ಉತ್ತಮ ಬೆಳೆವಣಿಗೆ ಎಂದು ಖುಷಿ ಪಟ್ಟಿದ್ದೆವು. ಆದರೆ ಇದೀಗ ಪಟ್ಟಿಯಿಂದ ಮಾಲೂರು ತಾಲೂಕಿನ ಹೆಸರನ್ನು ಬಿಟ್ಟಿರುವುದು ತಿಳಿದು ಬಂದಿದ್ದು, ತಾಲೂಕಿನ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಕೋಲಾರ ಜಿಲ್ಲೆಯ ರೈತರ, ಶ್ರಮಿಕರ, ಜನತೆ ಅನುಭವಿಸುತ್ತಿರುವ ನೀರಿನ ಸಮಸ್ಯೆ ಗಳ ಬಗ್ಗೆ ತಿಳಿದು ಯೋಜನೆ ರೂಪಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ರವರಿಂದ ಈ ರೀತಿಯ ತಪ್ಪು ನಡೆದಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಮಾಲೂರು ತಾಲೂಕಿನ ಹೆಸರನ್ನು ಬಿಟ್ಟಿರುವ ಹಿಂದೆ ರಾಜಕೀಯ ಒತ್ತಡ ಆಡಗಿದೆ ಎಂದೆನ್ನೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯಾವೂದೇ ರಾಜಕೀಯ ಒತ್ತಡಕ್ಕೆ ಈ ಯೋಜನೆ ಬಲಿಯಾಗಲು ಬಿಡದೆ ಮಾಲೂರು ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಹುಲಿಧೇನು ಮಂಜು, ದಯಾನಂದ್, ರೆಡ್ಡಿ, ಮುನಿನಾರಾಯಣ,ಲಕ್ಷ್ಮಿನಾರಾಯಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

