ಕೋಲಾರ

ಅಪರಿಚಿತ ಮಹಿಳೆ ಸಾವು

Published On :

ಚಿಂತಾಮಣಿ: ಅಪರಿಚಿತ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಬಂದು ಮೃತಪಟ್ಟಿರುವ ಘಟನೆ ಕೈವಾರ ಗ್ರಾಮದಲ್ಲಿ ನಡೆದಿದೆ.     ತಾಲೂಕಿನ ಕೈವಾರ ತಪೋಭವನಕ್ಕೆ ಬಂದ ಅಪರಿಚಿತ ಮಹಿಳೆ ಸುಮಾರು 40 ವರ್ಷ ವಯಸ್ಸಿನವರಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ನಗರದ ಸಾರ್ವಜನಿಕ  ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.


ಟೇಕಲ್ನಲ್ಲಿ ಎಟಿಎಂ ಕೇಂದ್ರಕ್ಕೆ ಚಾಲನೆ
ಟೇಕಲ್: ವಿಜಯಾ ಬ್ಯಾಂಕಿನ ನೂತನ ಎಟಿಎಂ ಕೇಂದ್ರವನ್ನು ಶನಿವಾರ ಪ್ರಾರಂಭಿಸಲಾಯಿತು. ಶಾಖಾ ವ್ಯವಸ್ಥಾಪಕ ಮೋಹನ್ ಕುಮಾರ್ ಮಾತನಾಡಿ, ಗ್ರಾಮೀಣ ಬ್ಯಾಂಕ್ ಗ್ರಾಹಕರಿಗೆ ಎಟಿಎಂನಿಂದ ಪ್ರಯೋಜನ ಸಿಗುವಂತಾಗಿದ್ದು, ಬ್ಯಾಂಕಿನ ವೇಳೆ ಗ್ರಾಹಕರು ಉಪಯೋಗ ಪಡೆಯಬಹುದು. ಮುಂದಿನ ದಿನಗಳಲ್ಲಿ ಬ್ಯಾಂಕಿನ ಮುಂಭಾಗದಲ್ಲಿ ಪ್ರತ್ಯೇಕ ಕಟ್ಟಡ ಕಟ್ಟಿ ಎಟಿಎಂ ಕೌಂಟರ್ ಸ್ಥಾಪಿಸಲಾಗುತ್ತದೆ ಎಂದರು.


ಹುಲ್ಲು ಬಣವೆಗೆ ಬೆಂಕಿ
ಗುಡಿಬಂಡೆ: ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸುಮಾರು 9 ಟ್ರ್ಯಕ್ಟರ್ ಮೇವು ಸುಟ್ಟು ಬೂದಿಯಾಗಿರುವ ಘಟನೆ ತಾಲೂಕಿನ ಕೊಪ್ಪಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬೀಚಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಪ್ಪಕಾಟೇನಹಳ್ಳಿ ಗ್ರಾಮದ ದೊಡ್ಡವೆಂಕಟೇಶಪ್ಪ ಎಂಬವರಿಗೆ ಸೇರಿದ ಹುಲ್ಲಿನ ಬಣವೆಗೆ ಭಾನುವಾರ ಮುಂಜಾನೆ ಆಕಸ್ಮಿಕ ಬೆಂಕಿ ತಾಕಿದ್ದು, ಸಾರ್ವಜನಿಕರೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿ, ಅಗ್ನಿಶಾಮಕ ದಳಕ್ಕೆ ಕರೆಮಾಡಿದ್ದಾರೆ. ಅಗ್ನಿಶಾಮಕ ದಳ ಚಿಕ್ಕಬಳ್ಳಾಪುರದಿಂದ ಬರುವಷ್ಟರಲ್ಲಿ ಸುಟ್ಟು ಭಸ್ಮವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.