ದೇಗುಲ ವಾರ್ಷಿಕೋತ್ಸವ
ಚಿಂತಾಮಣಿ: ಲೋಕ ಕಲ್ಯಾಣಾರ್ಥಕ್ಕಾಗಿ ನಗರದ ಶ್ರೀ ವೆಂಕಟರವಣಸ್ವಾಮಿ ದೇವಾಲಯದ 75ನೇ ವಾರ್ಷಿಕೋತ್ಸವ ಅಂಗವಾಗಿ 75 ದಂಪತಿಗಳು ಹೋಮದಲ್ಲಿ ಭಾಗವಹಿಸಿದ್ದರು. ನಗರದ ನೆಕ್ಕುಂದಿಪೇಟೆಯಲ್ಲಿ ನೆಲೆಸಿರುವ ಶ್ರೀ ವೆಂಕಟರವಣ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಅಭಿವೃದ್ಧಿ ಸಮಿತಿಯ ಕೆ.ಟಿ.ಪ್ರಕಾಶ್, ಎಸ್.ಜಿ. ವೆಂಕಟೇಶ್, ಶ್ರೀಧರ್ ಬಾಬು, ಶಾಂತಪ್ಪ ಇದ್ದರು.
ಶಿಕ್ಷಕ ವೈದ್ಯ ವೆಚ್ಚದ ಹಣ ಬಿಡುಗಡೆ
ಕೋಲಾರ: ಜಿಲ್ಲೆಯಲ್ಲಿ ಸುಮಾರು 2 ವರ್ಷಗಳಿಂದ ಬಾಕಿಯಿದ್ದ ಶಿಕ್ಷಕರ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳು ಹಾಗೂ ಮರುಪಾವತಿ ಮಾಡಿಕೊಳ್ಳಲು ಅನುದಾನವನ್ನು ನಿಗದಿ ಮಾಡಿರುವುದರಿಂದ ಶಿಕ್ಷಕರು ಪರದಾಡುವುದು ತಪ್ಪಿದಂತಾಗಿದೆ ಎಂದು ಶಿಕ್ಷಕರ ಸಂಘದ ಮುಖಂಡರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಚಾರಿರವರಿಗೆ ಶಿಕ್ಷಕರ ಸಮಸ್ಯೆ ತಿಳಿಸಲಾಗಿತ್ತು, ಮನವಿಗೆ ಸ್ಪಂದಿಸಿರುವ ಅವರು ತಕ್ಷಣ ಜಿಪಂ ಸಿಇಒ ಬಳಿ ಚರ್ಚಿಸಿ ಶಿಕ್ಷಕರ ವೈದ್ಯಕೀಯ ವೆಚ್ಚದ ಬಾಬ್ತಿನ ಬಿಲ್ಲುಗಳ ಪಾವತಿಗೆ ಬೇಕಾದ ಹಣ ಬಿಡುಗಡೆ ಮಾಡುವಂತೆ ಸೂಚಿಸಿರುವುದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರೀಕಾರ ಮತ್ತು ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ ಪ್ರಯತ್ನದಿಂದಾಗಿ ಜಿಪಂ ಮತ್ತು ತಾಪಂ ವ್ಯಾಪ್ತಿಯ ನೌಕರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಕೋಲಾರ ತಾಲೂಕಿಗೆ 42ಲಕ್ಷ, ಶ್ರೀನಿವಾಸಪುರಕ್ಕೆ 25 ಲಕ್ಷ, ಮುಳಬಾಗಿಲಿಗೆ 30 ಲಕ್ಷ, ಬಂಗಾರಪೇಟೆ 57, ಮಾಲೂರು 30 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 84 ಲಕ್ಷ ರು. ಸರ್ಕಾರದಿಂದ ಬಿಡುಗಡೆಯಾಗಿದೆ. ಸರ್ವಶಿಕ್ಷಣ ಅಭಿಯಾನದಡಿ ಕಾರ್ಯನಿರ್ವಹಿಸುವ ನೌಕರರಿಗಾಗಿ ಕೋಲಾರ ತಾಲೂಕಿಗೆ 2 ಲಕ್ಷ ಬಂಗಾರಪೇಟೆ 8 ಲಕ್ಷ, ಮಾಲೂರು 5 ಲಕ್ಷ, ಮುಳಬಾಗಿಲು 3.80 ಲಕ್ಷ, ಶ್ರೀನಿವಾಸಪುರ 3 ಲಕ್ಷ ಒಟ್ಟು 21 ಲಕ್ಷ 80 ಸಾವಿರ ಬಿಡುಗಡೆಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಬಿಇಒಗಳು ವಿಳಂಬವಿಲ್ಲದೆ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳನ್ನು ತಯಾರಿಸಿ ಶಿಕ್ಷಕರಿಗೆ ನಗದೀಕರಣ ಮಾಡಿಕೊಡಲು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

