ಕೋಲಾರ

ರಾಸು ಓಟದ ಸ್ಪರ್ಧೆ ತಡೆದ ಪೊಲೀಸರಿಗೆ ಕಲ್ಲು

Published On :

ಬಂಗಾರಪೇಟೆ: ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳ ಓಟದ ಸ್ಪರ್ಧೆ ಅರ್ಧಕ್ಕೆ ಸ್ಥಗಿತಗೊಳಿಸುವಂತೆ ಪೊಲೀಸರು ಹೇಳಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶಗೊಂಡು ಪೊಲೀಸರತ್ತ ಕಲ್ಲು ಬೀಸಿದ್ದರಿಂದ ಮೂರು ಮಂದಿ ಪೇದೆಗಳು ಗಾಯಗೊಂಡಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ ಘಟನೆ ಕಾಮಸಮುದ್ರದಲ್ಲಿ ನಡೆದಿದ.
ಪೇದೆಗಳಾದ ಅಮರನಾರಾಯಣ, ನಟರಾಜ್ ಹಾಗೂ ಮುನಿರಾಜು ಗಾಯಗೊಂಡು ಕಾಮಸಮುದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು. ರಾಸುಗಳ ಓಟದ ಸ್ಪರ್ಧೆ ನಡೆಸಬಾರದು ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ರಾಸುಗಳ ಸ್ಪರ್ಧೆ ಇದೆ ಎಂದು ಕರಪತ್ರಗಳ ಮೂಲಕ ಪ್ರಚಾರ ಮಾಡಿದ್ದರಿಂದ ರಾಜ್ಯದ ಜೊತೆಗೆ ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ರಾಸುಗಳ ಜೊತೆ ಬಂದಿದ್ದರು.
12ಗಂಟೆ ಹೊತ್ತಿಗೆ ಸುಮಾರು 20 ಸಾವಿರ ಜನರು ಸೇರಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಈ ಕಾರ್ಯಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರನ್ನೂ ಆಹ್ವಾನಿಸಿದ್ದರು.
 ಶಾಸಕರು ಸ್ಥಳಕ್ಕೆ ಬಂದರೂ ಇದು ಅನಧಿಕೃತ ಕಾರ್ಯಕ್ರಮವಾಗಿದ್ದರಿಂದ ದೇವಸ್ಥಾನಕ್ಕೆ ಬಂದು ವಾಪಸ್ ಹೋದರು. ನಂತರ 1 ಗಂಟೆಗೆ ಜನರನ್ನು ನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗದೆ ರಾಸುಗಳ ಓಟದ ಸ್ಪರ್ಧೆಯನ್ನು ಸ್ಥಗಿತಗೊಳಿಸುವಂತೆ ಪೊಲೀಸ್ ವ್ಯಾನ್ ಮೈದಾನದ ಮಧ್ಯೆ ಇಟ್ಟಿದ್ದರಿಂದ ಕುಪಿತರಾದ ಸಾರ್ವಜನಿಕರು ಪೊಲೀಸರ ಕ್ರಮ ಖಂಡಿಸಿ, ರಾಸುಗಳ ಸ್ಪರ್ಧೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರೂ ಪೊಲೀಸರು ಜಗ್ಗದ ಕಾರಣ ಕುಪಿತರಾದ ಸಾರ್ವಜನಿಕರು ಪೊಲೀಸರತ್ತ ಕಲ್ಲು ಬೀಸಿದರು. ಪೊಲೀಸರು ಜನರನ್ನು ಹತೋಟಿಗೆ ತರಲು ಲಾಠಿ ಪ್ರಹಾರ ಮಾಡಿದಾಗ ಜನರು ದಿಕ್ಕಾಪಾಲಾಗಿ ಓಡಿ ಹಲವರಿಗೆ ಗಾಯಗಳಾಗಿವೆ. ಘಟನೆಯಿಂದ ಮೂರು ಮಂದಿ ಪೊಲೀಸರು ಗಾಯಗೊಂಡು, ಜೀಪ್ಗಳು ಜಖಂಗೊಂಡಿವೆ.
ರಾಸುಗಳ ಓಟದ ಸ್ಪರ್ಧೆ ನಡೆಸದಂತೆ ಹೈಕೋರ್ಟ್ ಆದೇಶವಿದ್ದರೂ ಕಾಮಸಮುದ್ರ ಪೊಲೀಸರು ಸ್ಪರ್ಧೆಗೆ ಅನುಮತಿ ಕೊಟ್ಟಿದ್ದೇಕೆ, ನಂತರ ಮಧ್ಯದಲ್ಲೆ ಸ್ಥಗಿತಗೊಳಿಸಿದ್ದೇಕೆ ಎಂಬ ಪ್ರಶ್ನೆ ಕಾಡ ತೊಡಗಿದೆ.
 ತಿಂಗಳಿಂದ ಕಾರ್ಯಕ್ರಮ ಆಯೋಜಕರು ಪ್ರಚಾರ ಮಾಡುತ್ತಿದ್ದರು ಪ್ರಶ್ನಿಸದ ಪೊಲೀಸರು ಈಗ ಏಕಾಏಕಿ ತಡೆದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕೆಜಿಎಫ್ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಮತ್ತು ಡಿವೈಎಸ್ಪಿ ವಿವೇಕಾನಂದರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.