ಕೋಲಾರ

ಲಾರಿ ಅಪಹರಣ; ಸಿನಿಮೀಯ ರೀತಿಯಲ್ಲಿ ಪೊಲೀಸರಿಂದ ವಶ

Published On :

ಚಿಂತಾಮಣಿ: ಆಂಧ್ರಪ್ರದೇಶಕ್ಕೆ ಸೇರಿದ ಲಾರಿಯೊಂದನ್ನು ಅಪಹರಿಸಲು ಯತ್ನಿಸಿದ ಕಳ್ಳನೊಬ್ಬ ಸಿಕ್ಕಿ ಬಿದ್ದಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೇಕಲ್ಲಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಇಂದೂರ್ ಗ್ರಾಮಕ್ಕೆ ಸೇರಿದ ಲಾರಿಯಲ್ಲಿ ಏಲಕ್ಕಿ ಬಾಳೆಯನ್ನು ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಸಂತೇಕಲ್ಲಹಳ್ಳಿ ಗೇಟ್ ಬಳಿ 3 ಜನ ಅಪರಿಚಿತರು ಮಾರುತಿ ವ್ಯಾನ್ನಲ್ಲಿ ಬಂದು ರಸ್ತೆಗೆ ಅಡ್ಡ ನಿಲ್ಲಿಸಿ ಚಾಲಕನನ್ನು ಥಳಿಸಿ ಲಾರಿ ಸಮೇತ ಪರಾರಿಯಾಗಿದ್ದಾರೆ. ಪೊಲೀಸರು ಬೆಂಗಳೂರಿನಿಂದ ಇದೇ ಮಾರ್ಗವಾಗಿ ಬರುತ್ತಿದ್ದನ್ನು ಕಂಡ ಲಾರಿ ಚಾಲಕ ವಿಷಯವನ್ನು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿಗೆ ತಿಳಿಸಿದ್ದು, ತಕ್ಷಣ ವೈರಲೆಸ್ ಮೂಲಕ ಆರೋಪಿಗಳನ್ನು ಬಂಧಿಸಲು ಎಚ್.ಕ್ರಾಸ್ ಬಳಿ ಇರುವ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಹಿಂಬಾಳಿಸಿದ್ದು, ಲಾರಿ ಅಪಹರಿಸಿದ ವೆಂಕಟೇಶ್ ಎಂಬಾತನನ್ನು ಬಂಧಿಸಿದ್ದಾರೆ. ರಮೇಶ್ ಹಾಗೂ ಅಶ್ವಥ್ ಎಂಬವರು ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ, ಸಿಬ್ಬಂದಿ ಮಂಜುನಾಥ, ಶಿವಪ್ಪ, ವೆಂಕಟೇಶ ಮೂರ್ತಿ, ಸೋಮಶೇಖರ್, ರವಿ, ಗೋಪಾಲ್, ಸುರೇಶ್ ಅವರ ಕಾರ್ಯವೈಖರಿಗೆ ಪೊಲೀಸ್ ರಕ್ಷಣಾಧಿಕಾರಿ ಪ್ರಶಂಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.