ಹಿಂದೂ ಧರ್ಮದ ಖ್ಯಾತಿ ಸಾರಿದ ವಿವೇಕರು
ಗೌರಿಬಿದನೂರು: ಹಿಂದೂ ಧರ್ಮದ ಸಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ವಿಧಾಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.
ಪಟ್ಟಣ ಸಮೀಪದ ಕಲ್ಲಂತರಾಯನಗುಟ್ಟೆಯ ಬಳಿ ಇರುವ ಶ್ರೀರಾಮಕೃಷ್ಣ ಶಾರದಾದೇವಿ ವಿದ್ಯಾಮಂದಿರ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಪರಮಹಂಸ ಶಿಷ್ಯರಾಗಿ ಸನ್ಯಾಸ ದೀಕ್ಷೆ ಪಡೆದು ಚಿಕಾಗೋ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಹಿಂದೂ ಧರ್ಮದ ಸಾರವನ್ನು ತಿಳಿಸುವ ಮೂಲಕ ನಮ್ಮ ಧರ್ಮಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಜೊತೆಗೆ ದೇಶದ ಜನರ ಮೂಢನಂಬಿಕೆ ಕಂದಾಚಾರ ಹೋಗಲಾಡಿಸಲು ಶ್ರಮಿಸಿದವರು ಎಂದರು.
ರಾಮಕೃಷ್ಣಾಶ್ರಮದ ಮಾರ್ಗದರ್ಶನದಲ್ಲಿ ಗುಣಾತ್ಮಕ ಶಿಕ್ಷಣವನ್ನು ಗ್ರಾಮೀಣ ಭಾಗದವರಿಗೂ ಸಿಗುವ ರೀತಿಯಲ್ಲಿ ಸಂಸ್ಥೆ ನೀಡುತ್ತಿರುವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ಸಮಾರಂಭ ಉದ್ಟಾಟಿಸಿ ಆಶೀರ್ವಚನ ನೀಡಿದ ಬೆಂಗಳೂರಿನ ಹಲಸೂರು ರಾಮಕೃಷ್ಣ ಮಠದ ಸ್ವಾಮಿ ತತ್ವರೂಪಾನಂದಜೀ ಮಹರಾಜ್ ಅವರು, ಬದುಕಿನಲ್ಲಿ ಗುರು ಮತ್ತು ಗುರಿ ಇದ್ದಾಗಲೇ ನಾವು ಸಾರ್ಥಕ ಬದುಕನ್ನು ಬದುಕಲು ಸಾಧ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾದ ಜವಾಬ್ದಾರಿ ನಮ್ಮದು, ದೇಶದ ಸಂಪ್ರದಾಯ, ಪರಂಪರೆ, ಸಂಸ್ಕೃತಿ, ತ್ಯಾಗ ಮನೋಭಾವ, ಆಧ್ಯಾತ್ಮಿಕ ಚಿಂತನೆಗಳ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಬೇಕು ಎಂದರು. ವೀತಭಯಾನಂದಜೀ ಮಹರಾಜ್ ಸ್ವಾಮೀಜಿ ಮಾತನಾಡಿ, ಆಧುನಿಕತೆಯ ಮೋಹದಿಂದ ನೈಜ ಶಿಕ್ಷಣ ಮಾಯವಾಗುತ್ತಿದೆ, ನೈಜ ಶಿಕ್ಷಣ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಎಂದರು. ಮುಕ್ತಿಪದಾನಂದಜೀ ಮಹರಾಜ್ ಅವರು ಶ್ರೀರಾಮಕೃಷ್ಣ ಪರಮಹಂಸರ ಜೀವದ ಧ್ಯೇಯಗಳ ಬಗ್ಗೆ ತಿಳಿಸಿದರು. ಶಾಲೆ ಆಡಳಿತಾಧಿಕಾರಿ ವಿ.ಡಿ. ನಾಗೇಶ್ ಪ್ರಾಸ್ತವಿಕ ಭಾಷಣ ಮಾಡಿದರು. ಬಿ.ಜಿ. ವೇಣುಗೋಪಾಲರೆಡ್ಡಿ, ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ.ಡಿ. ಗಣೇಶ್ ವಹಿಸಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

