ಕೋಲಾರ

ಬಲಿಜ ಸಮಾಜ ಮುಖ್ಯವಾಹಿನಿಗೆ ಬರಲಿ

Published On :

ಕೋಲಾರ: ಬಲಿಜ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡುವ ಮೂಲಕ ಇತರೆ ಸಮುದಾಯಗಳಂತೆ ಮುಖ್ಯವಾಹಿನಿಗೆ ಬಂದು ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಬೇಕೆಂದು ಬಲಿಜ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಬಾಲ್ಡ್ ವಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ಶ್ರೀ ಯೋಗಿ ನಾರಾಯಣ ಬಲಿಜ ನೌಕರರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸ್ಥಾಪಿಸಿರುವ ಶ್ರೀ ಸಾಯಿ ಯೋಗಿ ನಾರಾಯಣ ಕನ್ಸ್ಲ್ಟೆನ್ಸಿ ಸರ್ವಿಸ್ ಪ್ರಾರಂಭೋತ್ಸವ, ಬಲಿಜ ಜನಾಂಗದ ವಿದ್ಯಾರ್ಥಿಗಳ ಹಾಗೂ ಉದ್ಯೋಗಸ್ಥರ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಜನಾಂಗದ ಪಟ್ಟಿಯನ್ನು ಗಮನಿಸಿದರೆ ಬಲಿಜ ಜನಾಂಗ ಕೊನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 50 ಲಕ್ಷ ಮಂದಿ ಬಲಿಜಿಗರು ಇದ್ದಾರೆ, ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಬಲಿಜ ಸಮುದಾಯದವರು ಇದ್ದರು ಕಾರ್ಯಕ್ರಮಕ್ಕೆ ಕೆಲವೇ ಮಂದಿ ಬಂದಿರುವುದು ಗಮಮಿಸಿದರೆ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.
ವೀರಪ್ಪ ಮೊಯ್ಲಿಯವರು ಮುಖ್ಯ ಮಂತ್ರಿಯಾಗಿದ್ದಾಗ ಬಲಿಜ ಸಮುದಾಯವನ್ನು 2ಎಯಿಂದ ತೆಗೆದು 3ಎಗೆ ಸೇರಿಸಿ ಸಮುದಾಯದ ಮೀಸಲಾತಿಗೆ ಧಕ್ಕೆ ಬರುವಂತೆ ಮಾಡಿದರೆಂದು ಟೀಕಿಸಿದರು.
ನಮ್ಮ ಸಮುದಾಯದವರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚು ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಎಂದರು. ಕರ್ನಾಟಕದ ಎಲ್ಲ ತಾಲೂಕುಗಳಲ್ಲೂ ಬಲಿಜಿಗ ಸಮುದಾಯದವರನ್ನು ಸಂಘಟಿಸಿ ನಮ್ಮನ್ನು 2ಎಗೆ ಸೇರಿಸುವ ತನಕ ನಿರಂತರ ಹೋರಾಟ ನಡೆಸಿ ಒಂದು ವೇಳೆ 2ಎಗೆ  ಸೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವಂತೆ ಕರೆ ನೀಡಿದರು.
ಐಎಎಸ್, ಐಪಿಎಸ್ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳ ಪಟ್ಟಿ ಕೊಡಿ, ಅವರಿಗೆ ಸಂಘದವತಿಯಿಂದ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ವೆಚ್ಚ ಮತ್ತು ಇತರೆ ಲಭ್ಯವಿರವ ಎಲ್ಲಾ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದ ಅವರು, ಈ ವಿಚಾರ ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವಂತಾಗಬೇಕೆಂದರು.
ಅವಿಭಜಿತ ಕೋಲಾರ ಜಿಲ್ಲೆಯ ಬುದ್ಧಿವಂತ ವಿದ್ಯಾರ್ಥಿಗಳಿದ್ದು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಜನಾಂಗಕ್ಕಾಗಿ ವಿದ್ಯಾಸಂಸ್ಥೆ ಹಾಗೂ ಸಮುದಾಯದ ಸಹಕಾರ ಸಂಘವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಶ್ರೀ ಸಾಯಿ ಯೋಗಿ ನಾರಾಯಣ ಕನ್ಸ್ಲ್ಟೆನ್ಸಿ ಸರ್ವಿಸ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಸುರೇಶ್ ಕುಮಾರ್ ಮಾತನಾಡಿ, ಬಲಿಜ ಸಮುದಾಯದವರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಶ್ರೀ ಸಾಯಿ ಯೋಗಿ ನಾರಾಯಣ ಕನ್ಸ್ಲ್ಟೆನ್ಸಿ ಸರ್ವೀಸ್ ಸ್ಥಾಪಿಸಲಾಗಿದೆ, ಈ ಸಂಸ್ಥೆಯಲ್ಲಿ ಸಮುದಾಯದವರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಲಾಗುತ್ತದೆ, ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿ ಗ್ರಾಮೀಣ ಬ್ಯಾಂಕಿನ ಹಿರಿಯ ಪ್ರಬಂಧಕ ರಾಜಶೇಖರ್, ಪ್ರಬಂಧಕ ರಮೇಶ್, ಕೂಡಾ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್, ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ, ನಿವೃತ್ತ ತಹಸೀಲ್ದಾರ್ ಜಯರಾಮರೆಡ್ಡಿ, ಶ್ರೀ ಸಾಯಿ ಯೋಗಿ ನಾರಾಯಣ ಕನ್ಸ್ಲ್ಟೆನ್ಸಿ ಸರ್ವೀಸ್ ಕಾರ್ಯನಿರ್ವಾಹಕ ನಿರ್ದೇಶಕ ಜನಾರ್ದನ್, ರುಕ್ಮಂಗದ, ವೆಂಕಟಶಿವಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.