ಕೋಲಾರ

ಸಣ್ಣ ವ್ಯಾಜ್ಯಗಳು ಗ್ರಾಮ ಮಟ್ಟದಲ್ಲಿಯೇ ಇತ್ಯರ್ಥವಾಗಲಿ: ಬಿ.ಕೆ. ರವಿಕಾಂತ

Published On :

ಗೌರಿಬಿದನೂರು: ಸಣ್ಣಪುಟ್ಟ ವ್ಯಾಜ್ಯಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಇತ್ಯರ್ಥಗೊಳಿಸಿಕೊಳ್ಳಲು ಸಿವಿಲ್ ಪ್ರಧಾನ ನ್ಯಾಯದೀಶರಾದ ಬಿ.ಕೆ. ರವಿಕಾಂತ ಅವರು ಕರೆ ನೀಡಿದರು.
ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಹತ್ತು ಸಾವಿರ ಜನಸಂಖ್ಯೆ ವ್ಯಾಪ್ತಿಯ ಗ್ರಾಪಂ ಮತ್ತು ಸರ್ಕಾರಿಯೇತರ ಸಂಘ ಸಂಸ್ಥೆ ಹಾಗೂ ವಕೀಲರ ಸಮ್ಮುಖದಲ್ಲಿ ಸಣ್ಣಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಸಲಹೆ ಇತ್ತರು. ನ್ಯಾಯಾಲಯ ಆಡಳಿತ ಶಿರಸ್ತೇದಾರ್ ಶ್ರೀನಾಥ್, ಶಿಲ್ಪ, ವಕೀಲರಾದ ರಾಮಚಂದ್ರಪ್ಪ, ಪಂಚಾಯ್ತಿ ಅಧ್ಯಕ್ಷ ಬಾಬ್‌ಜಿ ಹುಸೇನ್, ಸೈಯದ್ ಅಕ್ರಮ್ ರಾಜಾ, ಪಂಚಾಯ್ತಿ ಕಾರ್ಯದರ್ಶಿ ಗೋಪಾಲಕೃಷ್ಣ, ಎಸ್. ಜಗನ್ನಾಥರೆಡ್ಡಿ ಇದ್ದರು.

ಎಟಿಎಂನಲ್ಲಿ ತುಡಾದ ನೋಟು!
ಶಿಡ್ಲಘಟ್ಟ: ಪಟ್ಟಣದ ಅಶೋಕ ರಸ್ತೆಯ ಎಟಿಎಂನಲ್ಲಿ 1,000 ರು. ಬೆಲೆಯ ಹರಿದು ತುಂಡಾದ ನೋಟು ಬಂದಿದ್ದು ಗ್ರಾಹಕರು ಕಂಗಾಲಾದ ಘಟನೆ ನಡೆದಿದೆ. ಸ್ಟೇಟ್‌ಬ್ಯಾಂಕ್ ಆಪ್ ಮೈಸೂರ್‌ಗೆ ಸೇರಿದ ಎಟಿಎಮ್‌ನಲ್ಲಿ ಗುತ್ತಿಗೆದಾರ ಗೋಪಾಲ್ ಹಣ ಡ್ರಾ ಮಾಡಿದಾಗ ಹರಿದು ತೇಪೆ ಹಾಕಿದ ನೋಟನ್ನು ಕಂಡು ಕಂಗಾಲಾಗಿ ಬ್ಯಾಂಕಿಗೆ ದಾವಿಸಿದಾಗ ಬ್ಯಾಂಕ್ ಮುಷ್ಕರದಿಂದ ಬ್ಯಾಂಕ್ ಮುಚ್ಚಿದ್ದು ಕಂಗಾಲಾಗಿದ್ದಾರೆ.  ಇಂತಹ ನೋಟುಗಳನ್ನು ಯಂತ್ರಕ್ಕೆ ತುಂಬಿರುವ ಬ್ಯಾಂಕ್ ಸಿಬ್ಬಂದಿಗೆ ಹಿಡಿ ಶಾಪ ಹಾಕಿದ್ದಾರೆ.

ಕೊಲೆ ಬೆದರಿಕೆ ಆರೋಪ
ಕೋಲಾರ: ನಗರದ ಇಟಿಸಿಎಂ ಆಸ್ಪತ್ರೆಯಲ್ಲಿ ಸಹಾಯಕ ನರ್ಸಿಂಗ್ ಅಧೀಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ. ಶ್ರೀವಾಣಿಯವರಿಗೆ ಗುಣಭೂಷಣ ಎಂಬುವರು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆಂಧ್ರಪ್ರದೇಶದ ಮದನಪಲ್ಲಿಯವರಾದ ಕೆ. ಶ್ರೀವಾಣಿಯ ಜೊತೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.