ಇಟಿಸಿಎಂ ಆಸ್ಪತ್ರೆಯಲ್ಲಿ ಅವ್ಯವಹಾರ: ಮುಖಂಡರ ಆರೋಪ
ಕೋಲಾರ: ನೂರಾರು ವರ್ಷಗಳ ಇತಿಹಾಸವಿರುವ ಇಟಿಸಿಎಂ ಆಸ್ಪತ್ರೆಯ ಆಡಳಿತ ಮಂಡಳಿ ಮೆಥೋಡಿಸ್ಟ್ ಸ್ಸಂಸ್ಥೆಗೆ ಲಕ್ಷಾಂತರ ರು. ವಂಚನೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ಕ್ರೈಸ್ತ ಸಂಘರ್ಷ ಸಮಿತಿ ಆರೋಪಿಸಿದೆ.
ಕೋಲಾರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕ್ರೈಸ್ತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸದಾನಂದ ಮೆಥೋಡಿಸ್ಟ್ ಸಂಸ್ಥೆ ಸೇವಾ ಮನೋಭಾವದಿಂದ ಪ್ರಾರಂಭವಾಗಿದ್ದು ಆ ಮೂಲಕ ಸಾಕಷ್ಟು ಅಂಗ ಸಂಸ್ಥೆಗಳನ್ನು ನಿರ್ಮಿಸಿಕೊಂಡು ದೇಶಾದ್ಯಂತ ಸೇವೆ ನಡೆಸುತ್ತಿದೆ. ಆದ್ರೆ ಕೋಲಾರದ ಇಟಿಸಿಎಂ ಆಸ್ಪತ್ರೆಯಲ್ಲಿ ಕಳೆದ ಮೂರೂಕಾಲು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಜಾನ್ಸನ್ ಕುಂದರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಬೆಂಬಲಿಗರಾಗಿ ನಿಂತ್ತು ಮೆಥೋಡಿಸ್ಟ್ ಸಂಸ್ಥೆಗೆ ವಂಚನೆ ಮಾಡಿದ್ದಾರೆಂದು ದೂರಿದರು.
ಆಸ್ಪತ್ರೆಯಲ್ಲಿನ ಅಕೌಂಟ್ಸ್ ವಿಭಾಗದಲ್ಲಿ ಹಾಗೂ ಔಷಧಾಲಯಗಳಲ್ಲಿ ಆಸ್ಪತ್ರೆಗೆ ಔಷಧಿಗಳ ಖರೀದಿಯಲ್ಲಿ ಒಂದು ಬಿಲ್ ತೋರಿಸಿ ಅದನ್ನು ಮಾರಾಟ ಮಾಡುವುದರಲ್ಲಿ ಒಂದು ಬಿಲ್ ಹಾಕಿ ಸಂಸ್ಥೆ ಮತ್ತೊಂದು ಬಿಲ್ ತೋರಿಸಲಾಗಿದೆ. ಅದೇ ರೀತಿ ಆಸ್ಪತ್ರೆಯಲ್ಲಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾವತಿಸುವ ಶುಲ್ಕ ಬಿಲ್ನಲ್ಲೂ ಸಹ ನಕಲು ಬಿಲ್ ಮಾಡಲಾಗಿದೆ ಈ ಅಕ್ರಮಗಳ ಬಗ್ಗೆ ಸಂಘರ್ಷ ಸಮಿತಿ ಆಡಳಿತ ಮಂಡಳಿಯ ಮುಖ್ಯಸ್ಥ ಜಾನ್ಸನ್ ಕುಂದರ್ ಗಮನಕ್ಕೆ ತಂದರೆ ಯಾವುದೇ ಕ್ರಮ ಜರುಗಿಸಿಲ್ಲ. ಮತ್ತು ಅಕ್ರಮ ನಡೆಸಿದವರಿಗೆ ಪ್ರೋತ್ಸಾಹ ನೀಡಿ ಆರೋಪಿಗಳನ್ನು ಅದೇ ಸ್ಥಾನದಲ್ಲಿ ಮುಂದುವರೆಸಿದ್ದಾರೆ ಎಂದರು.
ಸಮಿತಿಯ ರಾಜ್ಯಾಧ್ಯಕ್ಷ ಗುರುಪ್ರಸಾದ್ ಮಾತನಾಡಿ ಆಡಳಿತಾಧಿಕಾರಿ ಜಾನ್ಸನ್ಕುಂದರ್ ತಮ್ಮ ಅಕೌಂಟ್ಸ್ ವಿಭಾಗದಲ್ಲೇ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ವಿಫಲರಾಗಿದ್ದು ಇಂತಹ ಅಧಿಕಾರಿಗಳಿಂದ ಆಸ್ಪತ್ರೆಯ ಬಾಗಿಲು ಮುಚ್ಚುವಂತಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಮೆಥೋಡಿಸ್ಟ್ ಸಂಸ್ಥೆಯ ಮುಖ್ಯಸ್ಥ ಬಿಷಪ್ ತಾರಾನಾಥ್ ಸಾಗರ್ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕ್ರೈಸ್ತ ಸಂಘರ್ಷ ಸಮಿತಿ ಉಪಾಧ್ಯಕ್ಷ ಆನಂದ ರಾಜಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಡೇವಿಡ್, ಕೋಲಾರ ಘಟಕದ ಜಿಲ್ಲಾಧ್ಯಕ್ಷ ಪ್ರಾಂಕ್ಲಿನ್, ಉಪಾಧ್ಯಕ್ಷ ಕಿರಣಣ್ಪಾಲ್, ಪ್ರಧಾನ ಕಾರ್ಯದರ್ಶಿ ಸುರೇಶ್ಬಾಬು, ಖಜಾಂಚಿ ಪಾಲ್ರಾಜ್, ಸಂಘಟನಾ ಕಾರ್ಯದರ್ಶಿ ಮನೋಜ್ ಪ್ರಸಾದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

