ಮತ್ತೆ ಮಾತೃ ಪಕ್ಷದತ್ತ ಮಾಜಿ ಶಾಸಕರ ಒಲವು
ಬಂಗಾರಪೇಟೆ: ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಜೆಡಿಎಸ್ ತೊರೆದು ಮತ್ತೆ ಮಾತೃಪಕ್ಷ ಬಿಜೆಪಿ ಸೇರಲು ತೆರೆ ಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ.
ಜನತಾಪರಿವಾರದಲ್ಲಿದ್ದ ಮಾಜಿ ಶಾಸಕ ವೆಂಕಟಮುನಿಯಪ್ಪ ನಂತರ ರಾಜಕೀಯ ದ್ರುವೀಕರಣದಲ್ಲಿ ಬಿಜೆಪಿ ಸೇರಿ ಪ್ರಥಮವಾಗಿ ಬೇತಮಂಗಲ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರಯುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೂರು ವರ್ಷಗಳ ಕಾಲ ಶಾಸಕರಾಗಿದ್ದ ವೆಂಕಟಮುನಿಯಪ್ಪ, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಪರಾಭವಗೊಂಡಿದ್ದರು. ಕಾಂಗ್ರೆಸ್ನಿಂದ ಗೆದ್ದಿದ್ದ ಎಂ.ನಾರಾಯಣಸ್ವಾಮಿ ಕಾಂಗ್ರೆಸ್ ತೊರೆದು ಆಪರೇಷನ್ ಕಮಲಕ್ಕೆ ಬಲಿಯಾಗಿ ಪಕ್ಷ ಸೇರಿದ ಬಳಿಕ ವೆಂಕಟಮುನಿಯಪ್ಪ ಮುನಿಸಿಕೊಂಡಿದ್ದರು. ಇದಾದ ಬಳಿಕ ನಡೆದ ವಿಧಾನಸಭೆ ಉಪಸಮರದಲ್ಲಿ ಮನಸಿಲ್ಲದೆ ಎಂ. ನಾರಾಯಣಸ್ವಾಮಿರನ್ನು ಬೆಂಬಲಿಸಿದರು.
ಕಳೆದ ಎಂಟು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಮುನಿಸಿಕೊಂಡು ಜೆಡಿಎಸ್ ಸೇರಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ ಬಂದಿದ್ದ ಪುರಸಭೆ ಚುನಾವಣೆಯಲ್ಲಿ ಪಟ್ಟಣದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಟಿಕೆಟ್ ನೀಡಲು ಪಕ್ಷ ನಿರ್ದರಿಸಿತ್ತು, ಆದರೆ ವೆಂಕಟಮುನಿಯಪ್ಪ ಪ್ರಭಾವ ಪುರಸಭೆ ಚುನಾವಣೆಯಲ್ಲಿ ನಡೆಯಲಿಲ್ಲ ಪಕ್ಷ ಹೀನಾಯ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ವಿಧನಾಸಭೆ ಟಿಕೆಟ್ ವೆಂಕಟಮುನಿಯಪ್ಪ ಬದಲಾಗಿ ಜಿಪಂ ಮಾಜಿ ಸದಸ್ಯ ರಾಮಚಂದ್ರರಿಗೆ ನೀಡಿತು. ಇಲ್ಲಿಯೂ ತಮ್ಮ ಪ್ರಭಾವ ಬಳಸಲು ಆಗಲಿಲ್ಲವೆಂದು ರಾಮಚಂದ್ರ ಪರ ಕೆಲಸ ಮಾಡದೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿಗೆ ಬೆಂಬಲಿಸಿ ಹೈಕಮಾಂಡ್ ಕಂಗಣ್ಣಿಗೆ ಗುರಿಯಾಗಿದ್ದರು.
ಕಳೆದ ವರ್ಷದಿಂದ ರಾಜಕೀಯವಾಗಿ ಯಾವ ಪಕ್ಷದಲ್ಲಿಯೂ ಗುರ್ತುಸಿಕೊಳ್ಳದೆ ವೆಂಕಟಮುನಿಯಪ್ಪ ರಾಜಕೀಯವಾಗಿ ಅತಂತ್ರವಾಗಿದ್ದರು. ಇದೀಗ ಬಿಜೆಪಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ವಿಧಾನಸಭೆಯಲ್ಲಿ ಸೋತ ನಂತರ ಬರುವ ಲೋಕಸಭೆ ಚುನಾವಣೆಗೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎಂ.ನಾರಾಯಣಸ್ವಾಮಿ ಸ್ಥಾನವನ್ನು ತಾವು ತುಂಬ ಬಹುದು ಎಂಬ ಲೆಕ್ಕಾಚಾರದಲ್ಲಿ ಸದ್ದಿಲ್ಲದೆ ಮತ್ತೆ ಮಾತೃ ಪಕ್ಷವನ್ನು ಸೇರಲು ಈಗಾಗಲೇ ಮೂರು ಸುತ್ತು ಮಾತುಕತೆಯನ್ನು ಪಕ್ಷದ ವರಿಷ್ಠರ ಜೊತೆ ಮುಗಿಸಿ ಅವರ ಅನುಮತಿಗಾಗಿ ಎದುರು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

