ರಜಪೂತ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲಿ: ಶಾಸಕ ಮಂಜುನಾಥ್
ಮುಳಬಾಗಲು: ರಜಪೂತ ಸಮಾಜದವರು ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಿದ್ದರೂ ಒಗ್ಗಟ್ಟಿನಿಂದ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಶಾಸಕ ಕೊತ್ತೂರು ಮಂಜುನಾಥ್ ಕಿವಿಮಾತು ಹೇಳಿದರು.
ಪಟ್ಟಣದ ಉದ್ಭವ ಶಿವಲಿಂಗೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಜಪೂತ ಸಮಾಜ ಸೇವಾ ಸಂಘ ಉದ್ಪಾಟಿಸಿ ಅವರು ಮಾತನಾಡಿದರು. ರಜಪೂತ ಸಮುದಾಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಿದ ಅವರು ಜನಾಂಗದವರು ನಿರ್ಮಿಸುವ ಸಮುದಾಯ ಭವನಕ್ಕೆ ವೈಯಕ್ತಿಕವಾಗಿ ನೆರವು ನೀಡುವುದರ ಜೊತೆಗೆ, ಸರ್ಕಾರದಿಂದ ಅನುದಾನ ಹಾಗೂ ನಿವೇಶನಕ್ಕೆ ಎರಡು ಎಕರೆ ಜಮೀನು ಕೊಡಿಸುವುದಾಗಿ ನುಡಿದರು.
ರಾಜ್ಯ ರಜಪೂತ ಸಂಘದ ಅಧ್ಯಕ್ಷ ಕೃಷ್ಣಸಿಂಗ್, ಕಾರ್ಯದರ್ಶಿ ಎಲ್. ನಾರಾಯಣಸಿಂಗ್, ಡಾ.ಮುನಿಸಿಂಗ್, ಡಾ.ಹರೀಶ್ ಸಿಂಗ್, ಪುರಸಭೆ ಸದಸ್ಯ ಜಿ.ಠಾಕೂರ್ ಸಿಂಗ್, ಜಗನ್ನಾಥಸಿಂಗ್, ಎಸ್.ಸೂರಿಸಿಂಗ್, ಎಂ.ಅನಂತರಾಂಸಿಂಗ್, ಗೋವಿಂದಸಿಂಗ್, ಎಸ್.ಗೌರಿಬಾಯಿ, ಆರ್.ಮಂಜುಳಬಾಯಿ, ಬಾಲಾಜಿಸಿಂಗ್, ಎನ್.ರವೀಂದ್ರಸಿಂಗ್, ಎನ್.ಶಂಕರಸಿಂಗ್ ಭಾಗವಹಿಸಿದ್ದರು.
ಹಾಲು ಸಹಕಾರ ಸಂಘಗಳಿಗೆ ಆಯ್ಕೆ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಹಕಾರ ಸಂಘಗಳಿಗೆ ಚುನಾವಣೆ ಮೂಲಕ ಮೀಸಲು ಅಭ್ಯರ್ಥಿಗಳ ಸ್ಥಾನದ ಚುನಾಯಿತರಾದವರ ವಿವರ.
ಬಂಡೀರಾಮನಹಳ್ಳಿ: ವಿಜೇತರು, ಬಿ.ಎನ್.ಅಶ್ವಥ್ಥರೆಡ್ಡಿ, ಎಸ್.ಶಿವಶಂಕರ್‌ರೆಡ್ಡಿ, ಶ್ರೀನಿವಾಸ್, ನಾರಾಯಣರೆಡ್ಡಿ, ಕೆ.ವಿ.ಸುಬ್ಬರೆಡ್ಡಿ, ನಾಗಪ್ಪ, ದೊಡ್ಡ ವೆಂಕಟೇಶ್, ಆದಿಲಕ್ಷ್ಮಮ್ಮ, ಪಾರ್ವತಮ್ಮ, ಜೆಡಿಎಸ್‌ನ ರಾಜಶೇಖರ್.
ರಾಯನಕಲ್ಲು: ವೆಂಕೇಶಪ್ಪ, ಆರ್.ಸಿ.ಕೃಷ್ಣಪ್ಪ, ಆರ್.ಸಿ.ಪ್ರಕಾಶ್, ಸುಬ್ರಮಣಿ, ಬೈಯ್ಯಪ್ಪರೆಡ್ಡಿ, ಆರ್.ಎನ್.ಬಾಲರೆಡ್ಡಿ, ಆರ್.ಎಂ.ವೆಂಕಟೇಶ್, ಗಂಗರತ್ನಮ್ಮ, ನರಸಮ್ಮ, ಆರ್.ವಿ. ಲಕ್ಷ್ಮಣರೆಡ್ಡಿ.
ಹನುಮಂತಪುರ: ಎಚ್.ಆರ್.ವೆಂಕಟೇಶ್, ಎಚ್.ಎನ್.ಗೋವಿಂದಪ್ಪ, ಎಚ್.ವಿ.ಚನ್ನೆಗೌಡ, ಎಚ್.ಎಸ್.ಸುರೇಶ್, ಎಚ್.ವಿ.ಸುಬ್ಬೇಗೌಡ, ಎಸ್.ವಿ.ನರಸಿಂಹಪ್ಪ, ಚಂದ್ರಪ್ಪ ಎಚ್.ಟಿ., ಜೆಡಿಎಸ್‌ನ ಎಚ್.ಸಿ.ನಾರಾಯಣಗೌಡ, ಎಚ್.ಆರ್.ಚನ್ನೇಗೌಡ, ಸುಮಿತ್ರಮ್ಮ, ಲಕ್ಷಮ್ಮ.
ಮಂಚೇನಹಳ್ಳಿ: ಪಿ.ವಿ.ಲಕ್ಷ್ಮೀಪತಿ, ಕೋಟೆ ಗೋವಿಂದಪ್ಪ, ಪಿ.ವಿ.ನಾರಾಯಣಪ್ಪ. ಮಲ್ಲೇಗೌಡ, ಕೆ.ದೇವರಾಜ್, ಪಿ.ಎನ್.ಪ್ರಭಾಕರ್, ಪಿ.ಟಿ.ರಂಗಣ್ಣ, ವೀರೇಂದ್ರ, ನಾಗಮಣಿ, ರತ್ಮಮ್ಮ, ಮತ್ತು ಬಾಲಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

