ನಗರೋತ್ಥಾನ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಕೋಲಾರ: ನಗರೋತ್ಥಾನ-2 ರ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಆಗಮಿಸಿದ್ದ ಪೌರಾಡಳಿತ ಇಲಾಖೆ ಅಧೀಕ್ಷಕ ಅಭಿಯಂತರ ಶಿವಕುಮಾರ್ ಅವರಿಗೆ ಸದಸ್ಯರು ಮುತ್ತಿಗೆ ಹಾಕಿ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.
ಇದರಿಂದ ತಬ್ಬಿಬ್ಬಾದ ಅಧೀಕ್ಷಕ ಅಭಿಯಂತರರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪಲಾಯನ ಮಾಡಿದರು. ನಗರೋತ್ಥಾನ-2 ರ ಕಾಮಗಾರಿಗಳ ಪರಿಶೀಲನೆಗಾಗಿ ಬಂದಿದ್ದ ಅಧಿಕಾರಿ ಸದಸ್ಯರ ತೀವ್ರ ವಿರೋಧ ಎದರಿಸಬೇಕಾಯಿತು.
ಕಾಮಗಾರಿಗಳಿಗೆ ಒಂದು ವರ್ಷದ ಅವದಿ ನಿಗಧಿ ಮಾಡಿ ಕಾರ್ಯಾದೇಶ ನೀಡಿ ಈಗ 11 ತಿಂಗಳು ಕಳೆದಿದ್ದರೂ 30ಕ್ಕೂ ಹೆಚ್ಚು ವಾರ್ಡುಗಳಲ್ಲಿ ಇನ್ನೂ ಕಾಮಗಾರಿಯೇ ಆರಂಭಗೊಂಡಿಲ್ಲ ಎಂದು ಸದಸ್ಯರು ಆರೋಪಿಸಿದರು.
ಕಾಮಗಾರಿಗಳು ಆರಂಭಗೊಳ್ಳದ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಕಾಮಗಾರಿ ಪ್ರಾರಂಭಗೊಳ್ಳದ ಕುರಿತು ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವರ್ಷದೊಳಗೆ ಮುಗಿಸಬೇಕಾದ ಕಾಮಗಾರಿಯ ಕಾರ್ಯಾದೇಶ ನೀಡಿ 11 ತಿಂಗಳು ಕಳೆದಿದೆ, ಆದರೂ ಈವರೆಗೂ ಗುತ್ತಿಗೆದಾರರಿಗೆ ಏಕೆ ನೋಟಿಸ್ ನೀಡಿಲ್ಲ ಮತ್ತು ಗುತ್ತಿಗೆದಾರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೂಂಡರು. ಇದಕ್ಕೆ ಧ್ವನಿಗೂಡಿಸಿದ ನಗರಸಭಾ ಸದಸ್ಯ ಸೋಮಶೇಖರ್, ಚಾಂದ್ ಪಾಷ ನಗರದ ಜನತೆ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ರಸ್ತೆಗಳು ಹಾಳಾಗಿದ್ದರೂ, ಕಾಮಗಾರಿ ಆರಂಭಗೊಂಡಿಲ್ಲ, ನಾವು ಹೇಗೆ ಮತದಾರರಿಗೆ ಮುಖ ತೋರಿಸುವುದು ಎಂದು ಪ್ರಶ್ನಿಸಿದರು.
ಈಗ ಮೂರ್ನಾಲ್ಕು ವಾರ್ಡುಗಳಲ್ಲಿ ಮಾಡುತ್ತಿರುವ ಕಾಮಗಾರಿ ಗುಣಮಟ್ಟವೂ ಕಳಪೆಯಾಗಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಗರಸಭಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧೀಕ್ಷಕ ಅಭಿಯಂತರ ಶಿವಕುಮಾರ್ ತರಾತುರಿಯಲ್ಲಿ ಕಾರು ಹತ್ತಿ ಪಲಾಯನ ಮಾಡಿದರು. ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಸರ್ವರ್ ಮರ್ಚೆಂಟ್, ಇಇ ಗೋಪಿನಾಥ್, ಪೌರಾಯುಕ್ತ ಜಗದೀಶ್, ಎಇ ಗರುಡಾಚಲ, ಕೊಟ್ರೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

