ಬಂಗಾರಪೇಟೆಯಲ್ಲಿ ನಮೋ ಟೀ ಸ್ಟಾಲ್ ಆರಂಭ
ಬಂಗಾರಪೇಟೆ: ಪಟ್ಟಣದಲ್ಲಿ ಶನಿವಾರ ನಮೋ ಟೀ ಸ್ಟಾಲ್ ಅಧಿಕೃತವಾಗಿ ಪ್ರಾರಂಭವಾಗಿದ್ದು ಮೊದಲ ದಿನ ಭರ್ಜರಿ ಟೀ ವ್ಯಾಪಾರವಾಗಿ ಸಾರ್ವಜನಿಕರನ್ನು ಸೆಳೆಯಿತು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಜಾರ್ನಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಬಳಿ ನಮೋ ಟೀಸ್ಟಾಲ್ ತೆರೆದು ಒಂದು ರು.ಗೆ ಒಂದು ಟೀ ಕೊಟ್ಟು ಪ್ರಚಾರ ಆರಂಭಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ, ದೇಶದ ಮುಂದಿನ ಪ್ರಧಾನಿ ನರೇಂದ್ರ ಮೋದಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಮೋದಿ ಪ್ರಧಾನಿಯಾದರೆ ಮಾತ್ರ ದೇಶ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿಡಲು ಸಾಧ್ಯ. ಬಿಜೆಪಿಯಲ್ಲಿ ಒಡಕಿಲ್ಲ ಎಲ್ಲರೂ ಒಗ್ಗಟ್ಟು ಮಂತ್ರ ಜಪಿಸುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಅಟಲ್ ಜೀ ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸಗಳನ್ನು ಮತದಾರರಿಗೆ ತಿಳಿಸಿ ಹಾಗೂ ಮುಂದಿನ ಭವಿಷ್ಯಕ್ಕಾಗಿ ಮೋದಿಗೆ ಮತ ಹಾಕುವಂತೆ ಅವರ ಮನವೊಲಿಸಬೇಕೆಂದು ಕೋರಿದರು. ವಾರಕ್ಕೆ ಎರಡು ದಿನ ಪಟ್ಟಣದ ವಿವಿಧ ಕಡೆ ನಮೋ ಟೀ ಸ್ಟಾಲ್ ತೆರೆಯುವುದಾಗಿ ತಿಳಿಸಿದರು. ನಗರ ಅಧ್ಯಕ್ಷ ರಮೇಶ್, ಪ್ರದಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಪ್ರಭಾಕರ್, ಮುದ್ದೇಗೌಡ, ಶಶಿಕುಮಾರ್ ಇದ್ದರು.
ಕಾಲುಬಾಯಿ ರೋಗಕ್ಕೆ ಲಸಿಕೆ ಕಾರ್ಯಕ್ರಮ
ಮಾಲೂರು.: ರಾಜ್ಯ ಸರ್ಕಾರ ಕಾಲುಬಾಯಿ ರೋಗ ತಡೆಯಲು ಆಂದೋಲನ ರೀತಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು ಸದುಪಯೋಗ ಪಡೆಯಬೇಕೆಂದು ಕೋ-ಚಿ ಹಾಲು ಒಕ್ಕೂಟದ ನಿರ್ದೇಶಕ ಡಾ. ಪ್ರಸನ್ನ ತಿಳಿಸಿದರು.
ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಒಕ್ಕೂಟ ಗ್ರಾಮದ ಹಾಲು ಉತ್ಪಾದಕರ ಸಂಘದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ರಾಸುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಗರ್ಭ ಧರಿಸಿರುವ ಹಸುಗಳಿಗೂ ಲಸಿಕೆ ಹಾಕಿಸಬಹುದಾಗಿದ್ದು, ರೈತರು ಅಂತಕ ಪಡಬೇಕಾಗಿಲ್ಲ.ಫೆ.15 ರಿಂದ ಪ್ರಾರಂಭವಾಗಿರುವ ಲಸಿಕೆ ಕಾರ್ಯಕ್ರಮ ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಸಹಕಾರದಲ್ಲಿ ಮಾರ್ಚ್ 15 ರ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ವಿ. ವಿಶ್ವನಾಥ್ ಮಾತನಾಡಿದರು. ಯಶವಂತಪುರ ಹಾಲು ಉತ್ವಾದಕರ ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಮುನಿರಾಜು, ಒಕ್ಕೂಟದ ಡಾ. ಪ್ರಭುದೇವ್, ಡಾ. ವಿಜಯ, ಡಾ.ಎಸ್. ಪಾಟೀಲ್, ಡಾ. ವೆಂಕಟಶಿವಾರೆಡ್ಡಿ, ಕೋಮುಲ್ ಚೇತನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

