ಕೋಲಾರ

ಹುಂಡಿಯಲ್ಲಿ ರು. 46 ಲಕ್ಷ ಸಂಗ್ರಹ

Published On :

ಮಾಲೂರು: ತಾಲೂಕಿನ ಪುರಾಣ ಪ್ರಸಿದ್ಧಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿಯನ್ನು ತೆರಯಲಾಗಿದ್ದು, 69 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಸೇರಿದಂತೆ 46 ಲಕ್ಷ ನಗದು ಸಂಗ್ರಹವಾಗಿದೆ.
ತಹಸೀಲ್ದಾರ್ ಡಾ. ಸುಧಾ ಪಾಯ್ಸ್, ಉಪತಹಸೀಲ್ದಾರ್ ತಿಮ್ಮರಾಯಪ್ಪ, ಇಒ ಹಿರೇಮಠ್, ದೇವಾಲಯ ಸಮಿತಿ ಸದಸ್ಯರು ಸ್ಥಳೀಯ ಪೊಲೀಸರ ಭದ್ರತೆ ನಡುವೆ ಸಂಗ್ರಹವಾಗಿದ್ದ ಹಣ ಎಣಿಸಲಾಯಿತು. ದೇವಾಲಯದ ಮೂರು ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಅಮೆರಿಕಾ, ಇಂಗ್ಲೆಂಡ್, ನೆದರ್ಲ್ಯಾಂಡ್, ಪಾಕಿಸ್ತಾನ, ನೈಜಿರಿಯಾ, ಕೀನ್ಯಾ ದೇಶಗಳ ಕರೆನ್ಸಿಗಳು ಕಂಡು ಬಂದಿದ್ದು, ಒಟ್ಟು 46,26,100 ರು.ನಗದು ಸಂಗ್ರಹವಾಗಿದೆ.ನೂತನ ವರ್ಷಾಚರಣೆ, ವೈಕುಂಠ ಏಕಾದಶಿ ಹಾಗೂ ವಿಶೇಷ ಪೂಜಾ ವರ್ಷಾಚರಣೆ ಸೇರಿದಂತೆ ಕಳೆದ 4 ತಿಂಗಳಿಂದ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ನೀಡಿದ ಕಾಣಿಕೆಯನ್ನು ಸ್ಥಳೀಯ ಕೆನರಾ ಬ್ಯಾಂಕ್ಗೆ ಜಮಾ ಮಾಡಲಾಯಿತು.
ಕಳೆದ ಆಕ್ಟೋಬರ್ನಲ್ಲಿ ಸಂಗ್ರಹವಾಗಿದ್ದ 47 ಲಕ್ಷ ರು.ಗಿಂತ ವರ್ಷಚಾರಣೆ, ಏಕಾದಶಿ ಇದ್ದರೂ ಒಂದು ಲಕ್ಷ ಕಡಿಮೆಯಾಗಿರುವುದು ಕಂಡು ಬಂದಿದೆ. ಎಣಿಕೆಗಾಗಿ ಗ್ರಾಮದ ಎಸ್ಎಲ್ವಿ ಶಾಲೆಯ ವಿದ್ಯಾರ್ಥಿಗಳು, ಕೆನರಾ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು. ದೇವಾಲಯ ವ್ಯವಸ್ಥಾಪಕ ಸಮಿತಿ ಸದಸ್ಯ ಟಿ.ಆರ್. ವೆಂಕಟೇಶ್ಗೌಡ,ಪಿ. ಶ್ರೀನಾಥ್, ಅಲಂಬಾಡಿ ಸುರೇಶ್, ಗೂಲ್ಲಹಳ್ಳಿ ಕಾಂತಮ್ಮ, ಲಕ್ಕೂರು ಶ್ರೀನಿವಾಸ್, ಕಲ್ಕೆರೆ ಶ್ರೀನಿವಾಸ ಗೌಡ, ರಾಮಕೃಷ್ಣಗೌಡ, ಗೋಪಾಲಕೃಷ್ಣ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.