ಹೆದ್ದಾರಿ ರಸ್ತೆ ಅಪಘಾತ ತಡೆಗೆ ರು. 56 ಕೋಟಿ
ಮುಳಬಾಗಲು: ಹೊಸಕೋಟೆಯಿಂದ ಮುಳಬಾಗಲು ಗಡಿ ನಂಗಲಿ ಪ್ರದೇಶದವರೆಗೂ ನಡೆಯುತ್ತಿರುವ ರಸ್ತೆ ಅಪಘಾತಗಳ ತಡೆಗಾಗಿ 56 ಕೋಟಿ ಮಂಜೂರು ಮಾಡಿರುವುದಾಗಿ ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹೊಸಕೋಟೆ ಮತ್ತು ಮುಳಬಾಗಲು ವಿಭಾಗದ ಚತುಷ್ಟಥ ರಸ್ತೆ ಉದ್ಫಾಟನೆ ನೆರವೇರಿಸಿ ಮಾತನಾಡಿ, ಈ ಹಣದಲ್ಲಿ ಅಗತ್ಯವಿರುವ ಕಡೆ ರಸ್ತೆ ನಿರ್ಮಾಣ, ಪ್ಲೇ ಓವರ್ ನಿರ್ಮಾಣ ತುರ್ತಾಗಿ ಕೈಗೊಳ್ಳಲು ಸೂಚಿಸಿದರು.
ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸುದಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಶಾಶ್ವತ ನೀರಾವರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ನಂಗಲಿಯಿಂದ ತಿರುಪತಿಯವರೆಗೂ ಚತುಷ್ಟ ರಸ್ತೆ ನಿರ್ಮಾಣ, ಸರ್ವಿಸ್ ರಸ್ತೆಗಳ ನಿರ್ಮಾಣ, ರಾಜ್ ಪೇಟ್ನಿಂದ ಬಂಗಾರುಪೇಟೆ, ಬಂಗಾರುಪೇಟೆಯಿಂದ ಹೂಸೂರು, (ಕನ್ನಂಪಲ್ಲಿ ಮಾರ್ಗವಾಗಿ) ಕೋಲಾರದಿಂದ ವಿಜಯಪುರ ಮಾರ್ಗವಾಗಿ ದೇವನಹಳ್ಳಿಯವರೆಗೂ ರಸ್ತೆ ಅಭಿವೃದ್ಧಿಗಾಗಿ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದರು. ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಕೋಲಾರದಿಂದ ಕಡಪ ನಡುವೆ ಬಿ. ಕೊತ್ತಕೋಟೆ ರಸ್ತೆ ಅಭಿವೃದ್ಧಿ ಪಡಿಸಿ ರಾಷ್ಟ್ರೀಯ ಹೆದ್ದಾರಿಯಾಗಿಸಲು ಕೋರಿದರು.
ಶಾಸಕರಾದ ಕೊತ್ತೂರು ಜಿ. ಮಂಜುನಾಥ್, ಎಸ್.ಎನ್. ನಾರಾಯಣಸ್ವಾಮಿ, ವಿ.ಆರ್. ಸುದರ್ಶನ್, ಮಾಜಿ ಸಚಿವ ನಿಸಾರ್ ಅಹಮದ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಎನ್.ಬಿಸೇಗೌಡ ಮಾತನಾಡಿದರು. ಅನಿಲ್ಕುಮಾರ್, ಜಿ. ರಾಮಲಿಂಗಾರೆಡ್ಡಿ, ನೀಲಕಂಠೇಗೌಡ, ಸಿ.ಎಂ. ವೆಂಕಟರಾಮೇಗೌಡ ಇದ್ದರು.
ಗುಡಿಬಂಡೆ: ನಾಳೆ ಕಲಾ ಉತ್ಸವ
ಗುಡಿಬಂಡೆ: ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನೀಕೇತನ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಫೆ.17 ರಿಂದ ಫೆ.20ರ ತನಕ ಪ್ರತಿ ದಿನ ಸಂಜೆ 7 ಗಂಟೆಗೆ ಉನ್ನತಿ ನಾಟಕ ಮತ್ತು ಕಲಾ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಉನ್ನತಿ ವಿಶ್ವನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರು, ರಂಗಗೀತೆ ಗಾಯಕರು, ನೃತ್ಯಗಾರರು ಭಾಗವಹಿಸಲಿದ್ದಾರೆ. ಫೆ.17 ರಂದು ಮಂಗ ಮಾಣಿಕ್ಯ ಪ್ರಹಸನ, ಫೆ.18 ರಂದು ನಾಟಕ ಗಿರಿಜ ಕಲ್ಯಾಣ, ಫೆ.19 ರಂದು ಸನ್ಮಾನ ಸುಖ, ಫೆ.20 ರಂದು ಖ್ಯಾತ ನೃತ್ಯ ಕಲಾವಿದೆ ಸುಚಿತ್ರ ದಿವಾಕರ್ರಿಂದ ನೃತ್ಯ ಪ್ರದರ್ಶನವನ್ನು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಕಾರದೊಂದಿಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಹಿಸಲಿದ್ದು, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪಯ್ಯ ಉದ್ಘಾಟಿಸಿಲಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

