ಕೋಲಾರ

ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೊಂಗಲ್ ಹಬ್ಬ

Published On :

ಕೆಜಿಎಫ್: ಮಾಘ ಮಾಸದ ಅಂಗವಾಗಿ ಶ್ರೀ ಭಗವತಿ ಅಮ್ಮನವರಿಗೆ ನಗರದ ನೂರಾರು ಮಹಿಳಾ ಭಕ್ತಾಧಿಗಳು ವಿವೇಕನಗರದಲ್ಲಿರುವ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೊಂಗಲ್ ಇಡುವ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ದೇವಿ ಭಗವತಿ ಅಮ್ಮನ್‌ಗೆ ಪೊಂಗಲ್ ಇಡುವ ಮೂಲಕ ತಮ್ಮ ಕೋರಿಕೆ ಹಾಗೂ ಸಂಕಷ್ಟ ನಿವಾರಿಸಿಕೊಳ್ಳಲು ಭಕ್ತಾದಿಗಳು ಈ ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡು ದೇವಿಗೆ ಪೊಂಗಲ್ ಇಟ್ಟು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಕೇರಳ ರಾಜ್ಯದಲ್ಲಿ ಇದೇ ರೀತಿ ಸುಮಾರು 50 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡು ವಿವಿಧ ರೀತಿಯ ಪೂಜೆಗಳನ್ನು ಮಾಡುವುದು ವಿಶೇಷ. ಅದೇ ರೀತಿಯಲ್ಲಿ ಕೆಜಿಎಫ್‌ನಲ್ಲಿಯೂ ಸಹ ಕೇರಳ ಮಾದರಿಯಲ್ಲಿ ಇಂತಹ ಪೊಂಗಲ್ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಮಲೆಯಾಳಿ ಸಮುದಾಯದವರು ಸೇರಿದಂತೆ ಇತರೆ ಮಹಿಳೆಯರು ಯುವಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ದೇವಸ್ಥಾನದ ಮುಖ್ಯ ಗುರು ಪುಷ್ಪಕರ್ ಗುರು, ನಗರಸಭಾ ಸದಸ್ಯ ವಿಜಯಕುಮಾರ್, ಮುರುಗೇಶನ್,  ಶ್ರೀಕಾಂತ್, ಸುಬ್ರಮಣಿ, ಷಣ್ಮುಗಂ, ಕಾರ್ತಿಕ್ ಸೇರಿದಂತೆ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ಸದಸ್ಯರು ಹಾಜರಿದ್ದರು.

ಕಸಾಪಗೆ ಅನುದಾನ ಹೆಚ್ಚಳಕ್ಕೆ ಹರ್ಷ
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂಗಡ ಪತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಭವನಕ್ಕಾಗಿ 5 ಕೋಟಿ ರು. ಅನುದಾನ ಒದಗಿಸಿರುವುದಕ್ಕೆ ಜಿಲ್ಲಾ ಕಸಾಪ ಸಂತಸ ವ್ಯಕ್ತಪಡಿಸಿದೆ. ನಾಡಿನ ಕನ್ನಡಿಗರ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಮೇ ತಿಂಗಳಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷ ಪುಂಡಲಿಕ ಹಾಲಂಬಿ ಒತ್ತಾಯದ ಮೇರೆಗೆ ಅನುದಾನ ನೀಡಲು ಸಮ್ಮತಿಸಿರುವುದಕ್ಕಾಗಿ ಪರಿಷತ್ತಿನ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ, ಮಾಲೂರು ಅಶ್ವತ್‌ರೆಡ್ಡಿ  ಮಧುಸೂಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.