ಕೋಲಾರ

ಡಿಸಿ ಪ್ರವಾಸ ಕಾರ್ಯಕ್ರಮ

Published On :

ಕೋಲಾರ: ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಇವರ 2014 ನೇ ಫೆಬ್ರವರಿ ಮಾಹೆಯ ಎರಡನೆಯ ಪಾಕ್ಷಿಕ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ನಿಗದಿಪಡಿಸಲಾಗಿದೆ.
ಫೆ.17 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಕಲ್ಲೂರು, ಜೆ.ತಿಮ್ಮಸಂದ್ರ ಕಂದಾಯ ವೃತ್ತಗಳಲ್ಲಿ ಮತ್ತು ಮಧ್ಯಾಹ್ನ 2 ಗಂಟೆಗೆ ನಂಬಿಹಳ್ಳಿ ಕಂದಾಯ ವೃತ್ತ, ಶ್ರೀನಿವಾಸಪುರ ಪಟ್ಟಣದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ.18 ರಂದು ಕೇಂದ್ರ ಸ್ಥಾನದಲ್ಲಿದ್ದು ಪ್ರಸ್ತುತ ಕೆಲಸ ನಿರ್ವಹಿಸುವರು.  ಬೆ-11ಗಂಟೆಗೆ ಎನ್.ಹೆಚ್.4 ಭೂ ಸ್ವಾಧೀನ, ಎಂ.ಎ.ಜಿ,ಎಲ್.ಆರ್.ಎಫ್,ಕೆ.ಐ.ಎ.ಡಿ.ಬಿ ಪ್ರಕರಣಗಳ ವಿಚಾರಣೆ ನಡೆಸುವರು.  ಮ.3 ಗಂಟೆಗೆ ಅಂತರ್ಜಲ ಪ್ರಾಧಿಕಾರದ ಸಭೆ ನಡೆಸುವರು.
ಫೆ-19 ರಂದು ಕೇಂದ್ರ ಸ್ಥಾನದಲ್ಲಿ ಕೆಲಸ . ಬೆ.11 ಗಂಟೆಗೆ ನೆಹರೂ ಯುವ ಕೇಂದ್ರದ ಸಲಹಾ ಸಮಿತಿ ಸಭೆ ನಡೆಸುವರು.  ಮ-3 ಗಂಟೆಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು.  
ಫೆ-20 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು. ಫೆ-21ರಂದು ಬೆ-10 ಗಂಟೆಗೆ ಶ್ರೀನಿವಾಸಪುರ ತಾಲೂಕು ಕಸಬಾ ಹೋಬಳಿ, ಚಲ್ದಿಗಾನಹಳ್ಳಿ, ಹೆಬ್ಬಟ ಗ್ರಾಮದಲ್ಲಿ ಮತ್ತು ಮ-2 ಗಂಟೆಗೆ ಪಾಳ್ಯ, ಕೊಡಿಚೆರವು ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ-22 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು.ಫೆ-23 ಶ್ರೀನಿವಾಸಪುರದಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳವರ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಫೆ-24 ರಂದು ಬೆ-10 ಗಂಟೆಗೆ ಶ್ರೀನಿವಾಸಪುರ ತಾಲೂಕು ಕಸಬಾ ಹೋಬಳಿಯ  ತೆರ್‌ನಹಳ್ಳಿ, ಗಾಂಡ್ಲಹಳ್ಳಿ ಗ್ರಾಮದಲ್ಲಿ ಮತ್ತು ಮ-2 ಗಂಟೆಗೆ ವೈ. ಹೊಸಕೋಟೆ, ದಳಸನೂರು ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ-25 ರಂದು ಕೇಂದ್ರ ಸ್ಥಾನದಲ್ಲಿರುತ್ತಾರೆ.  ಬೆ-11ಗಂಟೆಗೆ ಎನ್.ಹೆಚ್.4 ಭೂ ಸ್ವಾಧೀನ, ಎಂ.ಎ.ಜಿ,ಎಲ್.ಆರ್.ಎಫ್. ಪ್ರಕರಣಗಳ ವಿಚಾರಣೆ ನಡೆಸುವರು. 12 ಗಂಟೆಗೆ ರಾಷ್ಟ್ರೀಯ ಹೆದ್ದಾರಿ -4 ನಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸುವರು. ಮ.3 ಗಂಟೆಗೆ ಸಪಾಯಿ ಕರ್ಮಚಾರಿ ಪುನರ್ವಸತಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಸಭೆ ನಡೆಸುವರು.
ಫೆ.26 ರಂದು ಬೆ-11 ಗಂಟೆಗೆ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ರಂಗಮಂದಿರದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಸಂಬಂಧ ತರಬೇತಿ ಸಭೆ ನಡೆಸುವರು.  ಮ-3 ಗಂಟೆಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು. ಫೆ.28 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.