ಯುವ ಕವಿಗಳಿಗೆ ಉತ್ತೇಜನಾತ್ಮಕ ಕಾರ್ಯಕ್ರಮ
ಕನ್ನಡಪ್ರಭವಾರ್ತೆ ಕೋಲಾರ ಫೆ.16
ಉದಯೋನ್ಮುಖ ಕವಿಗಳಿಗೆ ಉತ್ತಮ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಿರಿಗನ್ನಡ ವೇದಿಕೆಯು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ವೇದಿಕೆ ವತಿಯಿಂದ ಯುವ ಕವಿಗಳಿಗೆ ಯುವ ಕವಿಗಳಿಗೆ ಕಾರ್ಯಾಗಾರ, ಕಮ್ಮಟಗಳನ್ನು ಹಮ್ಮಿಕೊಂಡು ಸಾಹಿತ್ಯ ಕ್ಷೇತ್ರವನ್ನು ಬಲಪಡಿಸುತ್ತಿದೆ ಎಂದು ಸಿರಿಗನ್ನಡ ವೇದಿಕೆ ಅಧ್ಯಕ್ಷ ಕೆ.ಎಂ.ಜೆ.ಮೌನಿ ತಿಳಿಸಿದರು.
ಕೋಲಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಸಿರಿಗನ್ನಡ ವೇದಿಕೆ ವತಿಯಿಂದ ನಗರದ ರೋಟರಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್. ರಮೇಶ್ಬಾಬುರವರ ಸ್ನೇಹಮಯಿ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ತಾಲೂಕ ಕಸಾಪ ಅಧ್ಯಕ್ಷ ನಾರಾಯಣಪ್ಪ ಸ್ನೇಹಮಯಿ ಕವನ ಸಂಕಲನ ಸರಳವಾದ ಅತ್ಯುತ್ತಮವಾದ 35 ಕವನಗಳನ್ನು ಒಳಗೊಂಡಿದ್ದು ಸಹೋದ್ಯೋಗಿ ರಮೇಶ್ಬಾಬು ಕವನಗಳು ಬಹಳಷ್ಟು ವಿಭಿನ್ನವಾಗಿವೆ. ಇಂತಹ ಕವಿಗಳನ್ನು ಗುರುತಿಸುವುದು ಸಮಾಜದ ಹಾಗೂ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಇಂತಹ ಸಂಕಲನಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು ಸಹೃದಯ ಕವಿಗಳು ಆತ್ಮೀಯತೆಯಿಂದ ಒಬ್ಬರಿಗೊಬ್ಬರು ಸಹಕರಿಸಿ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದರು.
ಮುಖ್ಯ ಅತಿಥಿ ಸಂಶೋಧಕ ಶಿವಪ್ಪ ಮಾತನಾಡಿ ಸಮಾಜದ ತಳವರ್ಗದ ಜನಾಂಗವನ್ನು ಕುರಿತು ತಿಳಿಸುತ್ತಾ ನಮ್ಮಲ್ಲಿ ಜಾಗೃತಿ ಮತ್ತು ಸಮುದಾಯವನ್ನು ಪರಿವರ್ತಿಸುವ ಬರವಣಿಗೆ ಅವಶ್ಯಕತೆ ಇದೆ ಎಂದರು. ಪ್ರಸ್ತುತ ಅಕ್ಷರಸ್ತ ಜನತೆಯು ಕೂಡ ಜಾತೀಯತೆಯ ಅಂಧಾಕಾರದಲ್ಲಿ ಮುಳುಗಿದ್ದಾರೆ. ಇಂತಹ ಸಾಹಿತ್ಯ ಕಾರ್ಯಕ್ರಮಗಳ ಪ್ರೇರಣೆಯಿಂದ ಹೊರಬರಬೇಕಾಗಿದೆ ಎಂದರು.
ಕವಿಗೋಷ್ಠಿಯಲ್ಲಿ ಶರಣಪ್ಪ ಗಬ್ಬೂರು, ಟಿ.ಎಂ.ನಾಗರಾಜ್, ರವೀಂದ್ರಸಿಂಗ್, ಹಣಬೆ ಪಾಪೇಗೌಡ, ಮಹೇಶ್ ರಾವ್ ಕದಂ, ಡ್ಯಾನಿಡಾ ಕೃಷ್ಣಮೂರ್ತಿ, ಡಿ.ಟಿ.ಪ್ರಸನ್ನ, ಜಿ.ಟಿ.ರಾಮಚಂದ್ರಪ್ಪ, ವಿ.ಲಕ್ಷ್ಮಯ್ಯ, ಇ.ವೆಂಕಟಸ್ವಾಮಿ, ಎನ್.ಸಿ.ರಾಜೇಶ್ವರಿ, ಎಸ್.ಸಿ.ಭಾರತಿ, ಜಿ.ಎಸ್.ಕವಿತ, ಸುಬ್ರಮಣಿ, ಚಾಂಪಲ್ಲಿ ಚಂದ್ರಶೇಖರ್, ವೇಣುಗೋಪಾಲ ಕೃಷ್ಣನಾಯ್ಕ, ಅನೀಫ್ಸಾಬ್ ಅರಿನಾಗನಹಳ್ಳಿ ಅಮರನಾಥ್, ಯು.ವಿ.ನಾರಾಯಣಾಸಾರ್, ಸುಲೇಮಾನ್ ಖಾನ್, ರಾಧಾ ಡಾ.ಪ್ರಕಾಶ್, ಸುರೇಶ್ ಜಕಾತಿ, ಎಚ್.ಆರ್.ಸುರೇಶ್, ಶ್ರೀನಿವಾಸಗೌಡ, ಶ್ರೀನಿವಾಸ ಕವಿತೆಗಳನ್ನು ವಾಚಿಸಿದರು.
ವೇದಿಕೆಯಲ್ಲಿ ಮದನಹಳ್ಳಿ ಕ್ರಾಸ್ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಿ.ಶಂಕರೇಗೌಡ, ಮಾಲೂರಿನ ಕವಿ ಜ.ಮು.ಚಂದ್ರ, ಸಿಆರ್ಪಿ ರಾಜೇಶ್, ಉಪನ್ಯಾಸಕ ಜಯರಾಮ್, ಕೋಲಾರ ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮ್ಪ್ರಸಾದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

