ವಕ್ಕಲೇರಿ ಮಾರ್ಕಂಡೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಕನ್ನಡಪ್ರಭ ವಾರ್ತೆ ಕೋಲಾರ ಫೆ.16
ತಾಲೂಕಿನ ಪುರಾಣ ಪ್ರಸಿದ್ಧ ವಕ್ಕಲೇರಿಯ ಪಾರ್ವತಿ ಸಮೇತ ಮಾರ್ಕಂಡೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ವೈಭವದಿಂದ ನಡೆಯಿತು. ತಹಸೀಲ್ದಾರ್ ನಾಗರಾಜ್, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ,ಮುಖಂಡ ರಾಮು ಮತ್ತಿತರರು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ಪ್ರಸಿದ್ಧ ದನಗಳ ಜಾತ್ರೆಯೂ ಇಲ್ಲಿ ಪ್ರತಿ ವರ್ಷ ಸೇರುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ರಾಸುಗಳು ಸಾವನ್ನಪ್ಪಿರುವ ಕಾರಣ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ರಾಸುಗಳ ಜಾತ್ರೆಗೆ ಡಿಸಿ ಅನುಮತಿ ಸಿಗದಿದ್ದರೂ ಕಡಿಮೆ ಸಂಖ್ಯೆಯಲ್ಲಿ ದನಗಳ ಜಾತ್ರೆ ಸೇರಿದ್ದು, ರಾಸುಗಳ ವ್ಯಾಪಾರ ನಡೆದಿತ್ತು.
ರಥೋತ್ಸವದ ಅಂಗವಾಗಿ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.ರಥೋತ್ಸವದ ಯಶಸ್ಸಿಗೆ ಗ್ರಾಮದ ಅನೇಕ ಮುಖಂಡರ ದುಡಿಮೆ ಸಾಕ್ಷಿಯಾಗಿದ್ದು, ಅವರಲ್ಲಿ ಮುಖಂಡರಾದ ವಕ್ಕಲೇರಿ ರಾಮು, ಜಿಪಂ ಸದಸ್ಯೆ ಚೌಡೇಶ್ವರಿ, ಮಾಜಿ ಜಿ.ಪಂ ಸದಸ್ಯೆ ಯಶೋಧಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಸಿ.ಎಂ.ವೆಂಕಟೇಶಪ್ಪ,ರಾಮಚಂದ್ರಪ್ಪ, ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಸಲ್ಮಾನ್ಖಾನ್, ಕನ್ವಿನರ್ ವೇಣುಗೋಪಾಲಗೌಡ, ಸಾರಿಗೆ ಸಂಸ್ಥೆಯ ಮಂಜುನಾಥ್, ವೆಂಕಟೇಶ್ ಸೇರಿದಂತೆ ಗ್ರಾಮದ ಹಿರಿಯರು ನೇತೃತ್ವ ವಹಿಸಿದ್ದರು.
ಫ್ಲೈಓವರ್ ನಿರ್ಮಿಸಲು ಸಚಿವರಿಗೆ ಒತ್ತಾಯ
ಕೋಲಾರ: ಬೆಂಗಳೂರು - ಚೆನೈ ರಾಷ್ಟ್ರೀಯ ಹೆದ್ದಾರಿ 75ರ ಕೋಲಾರ ತಾಲೂಕಿನ ನರಸಾಪುರ ಮತ್ತು ಮಾಲೂರು ಕ್ರಾಸ್ನಲ್ಲಿ ಫ್ಲೈಓವರ್ ನಿರ್ಮಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘವು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಿದರು.
ಈ ರಸ್ತೆಯಲ್ಲಿ ಚೆನ್ನೈ, ತಿರುಪತಿ, ವಿಜಯವಾಡ ಮತ್ತಿತರ ಮಹಾ ನಗರಗಳಿಗೆ ಪ್ರತಿದಿನ ಸಾವಿರಾರು ವಾಹನಗಳು ಅತಿವೇಗವಾಗಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ದಾಟುವ ಸಂದರ್ಭದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಐವತ್ತಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಭಾಗದಲ್ಲಿ ಆತಂಕ, ಭಯದ ನಡುವೆ ಬೇರೆ ದಾರಿ ಇಲ್ಲದೇ ಸಂಚರಿಸುತ್ತಿದ್ದಾರೆ.
ಸಮಸ್ಯೆಯ ಕುರಿತು ಈಗಾಗಲೇ ಹಲವು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಎರಡು ಬಾರಿ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರೂ ಇಲ್ಲಿಯ ತನಕ ಸಮಸ್ಯೆಯನ್ನು ಈಡೇರಿಸಿಲ್ಲ. ಕೂಡಲೇ ಸಮಸ್ಯೆ ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್, ಮುಖಂಡ ಆಂಜಿನಪ್ಪ, ಕೇಶವರೆಡ್ಡಿ ಕುಮಾರ್, ಮೊಟಪ್ಪ, ಸೊಣ್ಣಪ್ಪಯ್ಯ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

