ಕೋಲಾರ

ಸರ್ಕಾರಗಳ ನೀತಿ ಬಗ್ಗೆ ಚರ್ಚೆಯಾಗಬೇಕಿದೆ

Published On :

ಚಿಕ್ಕಬಳ್ಳಾಪುರ: ದೇಶದ ಮುಂದಿನ ಪ್ರಧಾನಿ ಮೋದಿ ಆಗಬೇಕೆ ಅಥವಾ ರಾಹುಲ್ ಗಾಂಧಿ ಆಗಬೇಕೆ ಎಂಬುದರ ಅನಗತ್ಯ ಚರ್ಚೆ ಬದಲಿಗೆ ಸರ್ಕಾರಗಳ ನೀತಿ ನಿರೂಪಣೆಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ ಎಂದು ರಾಜ್ಯಸಭೆ ಸದಸ್ಯ ತಪನ್ ಸೇನ್ ಅಭಿಪ್ರಾಯಪಟ್ಟರು.
ಸಿಐಟಿಯು ಸಂಘಟನೆಯಿಂದ ನಗರದ ಹೊರವಲಯದ ಎಸ್‌ಎಲ್ವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ದುಡಿಯುವ ಜನತೆ ಹಾಗೂ ಚುನಾವಣೆಗಳು ವಿಷಯದ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ಕಾರ್ಮಿಕ ಸಂಘಟನೆಗಳಿಂದ ನಿರಂತರ 2 ದಿನಗಳ ಕಾಲ ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಷೇರು ಮಾರುಕಟ್ಟೆ ನಿಯಂತ್ರಣ, ಕನಿಷ್ಠ ವೇತನ 10 ಸಾವಿರಕ್ಕೆ ನಿಗದಿ. ಖಾಸಗೀಕರಣ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲಾಯಿತು. ಸರ್ಕಾರ ಯಾವುದಕ್ಕೂ ಸೂಕ್ತ ಸ್ಪಂದನೆ ನೀಡಲಿಲ್ಲ ಎಂದರು.
ಮಾಜಿ ಶಾಸಕ, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, ಇಂದು ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿವೆ. ಕಾರ್ಮಿಕ ಹಾಗೂ ನೌಕರ ವರ್ಗದ ಹಿತರಕ್ಷಣೆಯನ್ನು ಕಡೆಗಣಿಸುತ್ತಿವೆ. ಏನೇ ಕಷ್ಟ ಬಂದರೂ ಕೆಂಪು ಜಂಡಾ ಮಾತ್ರ ಜನಪರ ಧ್ವನಿ ಎತ್ತುತ್ತಿದೆ. ಆದ್ದರಿಂದ ಮತನೀಡುವಾಗ ಯೋಚಿಸಿ ಮತದಾನ ಮಾಡಬೇಕು ಎಂದರು.
ಜಿಲ್ಲೆ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಿಐಟಿಯು ರಾಜ್ಯಾಧ್ಯಕ್ಷ ಜಿ.ವಿ.ಕೆ. ನಾಯರ್, ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ವರಲಕ್ಷ್ಮೀ, ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಕಾರ್ಯದರ್ಶಿ ಜಿ.ಎಂ. ಲಕ್ಷ್ಮೀದೇವಿ, ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಲೀಲಾವತಿ, ಕೆಪಿಆರ್‌ಎಸ್‌ನ ಎಂ.ಪಿ. ಮುನಿವೆಂಕಟಪ್ಪ, ಮುನಿಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.