ಕೋಲಾರ

ಸೇವಾ ಮನೋಭಾವನೆ ರೂಢಿಸಿಕೊಳ್ಳಲು ಸಲಹೆ

Published On :

ಕೋಲಾರ: ವಿದ್ಯಾರ್ಥಿಗಳಾಗಿದ್ದಾಗಲೇ ಸೇವಾ ಮನೋಭಾವ ಹಾಗೂ ದೇಶಭಕ್ತಿಯನ್ನು ರೂಡಿಸಿಕೊಳ್ಳುವ ಮೂಲಕ ಉತ್ತಮ ನಾಯಕತ್ವ ಬೆಳೆಸಿಕೊಳ್ಳಬೇಕೆಂದು ದೇವರಾಜು ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್. ನಾಗರಾಜ್ ಅವರು ತಿಳಿಸಿದರು.
ಕರ್ನಾಟಕ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೇವರಾಜ್ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಏಕೀಕರಣ ಶಿಬಿರ , ರಾಷ್ಟ್ರೀಯ ಯುವಜನ ನೀತಿ-2014 ಮತ್ತು ರಾಜೀವ್ ಗಾಂಧಿ ಕ್ರೀಡಾ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಮಟ್ಟದ ಎನ್‌ಎಸ್‌ಎಸ್ ಶಿಬಿರವನ್ನು ನಮ್ಮ ಸಂಸ್ಥೆಯ ಮೂಲಕ ನಡೆಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ.  ದೇಶದ ವಿವಿಧ ವಿವಿಗಳಿಂದ ಬಂದಿರುವ ಶಿಬಿರಾರ್ಥಿಗಳು ಇಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ, ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳನ್ನು ಪರಿಚಯಿಸಿಕೊಳ್ಳುವಂತಾಗಬೇಕು, ಈ ಮೂಲಕ ವಿವಿಧ ಕಡೆಯಿಂದ ಆಗಮಿಸಿರುವವರ ನಡುವೆ ಭಾಂದವ್ಯ ಹಾಗೂ ಸೌಹಾರ್ದತೆ ವೃದ್ಧಿಯಾಗಬೇಕೆಂದು ಆಶಿಸಿದರು.
ಶಿಬಿರದಲ್ಲಿ ಪರಿಸರ ಅನೈರ್ಮಲ್ಯ, ಅನಕ್ಷರತೆ, ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕು, ಅರಣ್ಯೀಕರಣಕ್ಕೆ ಒತ್ತು ನೀಡಲು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಹೆಚ್ಚಿನ ಒತ್ತು ನೀಡಬೇಕೆಂದರು. ಉಪಕುಲಪತಿ ಡಾ.ಪಿ.ಎಫ್. ಕೊಟ್ಟೂರ್ ಅವರು ಮಾತನಾಡಿ, ದೇಶ-ವಿದೇಶದ ಅನೇಕ ಮಹಾನ್ ವ್ಯಕ್ತಿಗಳು ಸಮಾಜ ಸೇವೆಯ ಮೂಲಕವೇ ಹೊರಹೊಮ್ಮಿದ್ದು ಅದರಂತೆ ನೀವು ಸಹ ಸಮಾಜ ಮುಖಿಗಳಾಗಲು ಇಂತಹ ಶಿಬಿರಗಳಿಂದ ಪ್ರೇರಣೆ ಪಡೆಯಬಹುದಾಗಿದೆ ಎಂದರು. ಎನ್.ಎಸ್.ಎಸ್.ಶಿಬಿರದ ಮೂಲಕ ಅರ್ಥಪೂರ್ಣ ಶ್ರಮದಾನ ನಡೆಸುವಂತಾಗಬೇಕು, ಸಾಂಸ್ಕೃತಿಕ ವಿನಿಮಯವಾಗಬೇಕು ಎಂದು ಸಲಹೆ ನೀಡಿದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಸಾಣಿಕೊಪ್ಪ, ಕಾರ್ಯಕ್ರಮ ಸಂಯೋಜಕ ಡಾ.ಬಿ.ಟಿ. ಪ್ರಸನ್ನ ಕಾಮತ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.