ವಿಮಾ ಸೌಲಭ್ಯ ಸದುಪಯೋಗಕ್ಕೆ ಸಲಹೆ
ಕೋಲಾರ: ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ವತಿಯಿಂದ ಚಾಯೀಸ್ ಇನ್ಶೂರೆನ್ಸ್ ಕಂ, ಅಪೆಲೋ ಮ್ಯೂನಿಕಲ್ ಹೆಲ್ತ್ ಇನ್ಶೂರೆನ್ಸ್ , ಯುನೈಟೆಡ್ ಇಂಡಿಯಾ ಆಶ್ರಯದಲ್ಲಿ ತನ್ನ ಗ್ರಾಹಕರಿಗೆ ಜೀವಭದ್ರತೆಯ ಯೋಜನೆ ಪ್ರಾರಂಬಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಇದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಕೋರಿದರು.
ನಗರದ ಕೆನರಾ ಬ್ಯಾಂಕ್ ಆವರಣದಲ್ಲಿ ಶನಿವಾರ ನಡೆದ ಗ್ರಾಹಕರಿಗೆ ಇನ್ಶೂರನ್ಸ್ ಯೋಜನೆ ಜಾರಿ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೆನರಾಬ್ಯಾಂಕ್ ಸ್ಥಾಪನೆಯಾಗಿ 40 ವರ್ಷಗಳಾಗಿದ್ದು, ಈವರೆಗೆ 6 ಕೋಟಿ ಗ್ರಾಹಕರಿಗೆ ವಿವಿಧ ರೀತಿಯ ಸಾಲ ಕೊಟ್ಟು ಆಪಾರ ಸೇವೆ ನೀಡಿದೆ. ಈಗ ಗ್ರಾಹಕರ ಜೀವ ಭದ್ರತೆಗೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ ಎಂದರು.
ಕೋಲಾರದ ಕೆನರಾಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ದೇಶದಲ್ಲಿ ಶೇ.4 ರಷ್ಟು ಮಂದಿ ಮಾತ್ರ ಜೀವಭದ್ರತೆಯ ವಿಮೆ ಪಾಲಸಿ ಪಡೆದಿದ್ದಾರೆ. ತಮ್ಮ ಬ್ಯಾಂಕಿನ ಗ್ರಾಹಕರು ತಮ್ಮ ಜೀವನ ಭದ್ರತೆಗಾಗಿ ವಿಮೆ ಪಾಲಸಿಗಳನ್ನು ತೆಗೆದುಕೊಳ್ಳಲು ನೂತನ ಯೋಜನೆಗೆ ಚಾಲನೆ ನೀಡಿದೆ ಎಂದರು.
ಬೆಂಗಳೂರು ವಿಭಾಗೀಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಯಶೀಲನ್, ಕೋಲಾರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಅಧ್ಯಕ್ಷ ಎಸ್. ಮುನಿಯಪ್ಪ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಆಡಳಿತಾಧಿಕಾರಿ ಸಂಪಂಗಿ, ಜಗನ್ನಾಥ್, ಅಪೋಲೋ ಮ್ಯೂನಿಕಲ್ ಹೆಲ್ತ್ ಇನ್ಶೂರೆನ್ಸ್, ಲೋಕೇಶ್, ಜಾಯೀಸ್ ಇನ್ಶೂರೆನ್ ಕಂಪನಿ ವ್ಯವಸ್ಥಾಪಕ ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

