ಆರೋಗ್ಯ ಉಚಿತ ತಪಾಸಣಾ ಶಿಬಿರ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಫೆ.26 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಶಾಖೆ, ತಾಲೂಕು ಆರೋಗ್ಯ ಇಲಾಖೆ, ಬೀಚಗಾನಹಳ್ಳಿ ಗ್ರಾಪಂ ಹಾಗೂ ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ರೋಗಿಗಳಿಗೆ ಔಷಧಗಳನ್ನು ಉಚಿತವಾಗಿ ವಿತರಿಸಲಾಗುವುದು. ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.
ಜಾಂಬವಂತ ಪೂಜಾ ಕಾರ್ಯಕ್ರಮ
ಮುಳಬಾಗಲು: ಮಾದಿಗ ಸಮುದಾಯದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ಎಂ. ಶಂಕರಪ್ಪ ಹೇಳಿದರು. ತಾಲೂಕಿನ ಆವಣೆ ಗ್ರಾಮದ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವದ ಹಿನ್ನಲೆಯಲ್ಲಿ ಸೋಮವಾರ ಮೊದಲ ಪೂಜೆ ಪ್ರತಿ ವರ್ಷ ಅವಂತಿಕಾ ಬೆಟ್ಟದ ಪೂರ್ವ ಈಶಾನ್ಯ ಭಾಗದಲ್ಲಿ ನೆರವೇರಿಸಿ ಮಾತನಾಡಿ, ಭೂಮಿ ಹುಟ್ಟುವ ಮುಂಚೆ ಆದಿ ಜಾಂಬವಂತ ಹುಟ್ಟಿದ್ದು, ಮಹಾಭಾರತ ರಚನೆಗೆ ಕಾರಣಕರ್ತರಾಗಿದ್ದಾರೆ ಎಂದರು. ಹಲವಾರು ಯುಗಗಳಿಂದ ಅವಣೆ ಶ್ರೀರಾಮಲಿಂಗೇಶ್ವರ ಸ್ವಾಮಿ ಬೆಟ್ಟದ ಪೂರ್ವ ಈಶಾನ್ಯ ಭಾಗದಲ್ಲಿ ಶ್ರೀ ಆದಿ ಜಾಂಬವಂತರನ್ನು ರಥೋತ್ಸವಕ್ಕೂ ಮುಂಚೆ ಪೂಜಿಸಲಾಗುತ್ತಿದ್ದು, ಪ್ರದೇಶವನ್ನು ಸರಿಯಾಗಿ ಅಭಿವೃದ್ಧಿ ಪಡೆಸದಿರುವುದು ವಿಷಾದನೀಯವೆಂದರು.
'ಸವಲತ್ತು ಉಪಯೋಗವಾಗಲಿ'
ಕೆಜಿಎಫ್: ಕ್ಷೇತ್ರದಲ್ಲಿ ಹೆಚ್ಚು ಬಡ ಕುಟುಂಬಗಳು ವಾಸಿಸುತ್ತಿದ್ದು ಅಂತಹವರಿಗೆ ಸಾರ್ವಜನಿಕರ ಸೇವೆಗೆ ಮುಂದಾಗಿದ್ದು ಇದರ ಸದುಪಯೋಗ ಪಡೆಯಬೇಕು ಎಂದು ಸಾರ್ವಜನಿಕ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶಶಿಕುಮಾರ್ ಹೇಳಿದರು. ಸಾರ್ವಜನಿಕ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಸ್ವಾಮಿನಾಥಪುರಂ ಬಡಾವಣೆಯಲ್ಲಿ ಆಯೋಜಿಸಿದ್ದ ಮೂರನೇ ವಾರ್ಷಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಶಿಬಿರದಲ್ಲಿ ಸಂಬ್ರಮ್ ಡೆಂಟಲ್ ವೈದ್ಯರು ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಉರಿಗಾಂಪೇಟೆ, ಸ್ವಾಮಿನಾಥಪುರಂ, ಕೋರಮಂಡಲ್ ಸೇರಿದಂತೆ ಇತರೆ ಬಡಾವಣೆಯ ನೂರಾರು ನಾಗರೀಕರಿಗೆ ವಿವಿಧ ಖಾಯಿಲೆಗಳನ್ನು ಪರೀಕ್ಷೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು. ಇದೇ ವೇಳೆ ಸುಮಾರು 50 ಮಂದಿ ಯುವಕರು ಹಾಗೂ ಪುರುಷರು ರಕ್ತದಾನ ಮಾಡಿದರು. ವೇದಿಕೆಯ ಶ್ರೀನಿವಾಸನ್ ಇದ್ದರು.
ಪಿಎಸ್ಐಗಳ ವರ್ಗಾವಣೆ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯ ಪಿಎಸ್ಐಗಳನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಿ ಕೇಂದ್ರ ವಲಯ ಐಜಿಪಿ ಸಯ್ಯದ್ ಉಲ್ಪತ್ ಹುಸೇನ್ ಅದೇಶ ಹೊರಡಿಸಿದ್ದಾರೆ. ಚಾಂಪಿಯನ್ರೀಫ್ ಠಾಣೆ ಪಿಎಸ್ಐ ಜಿ.ಕೆ. ಮಧುಸೂದನ್ರನ್ನು ಬೆಳ್ಳಾವಿ ಠಾಣೆ ತುಮಕೂರು ಜಿಲ್ಲೆಗೆ, ಜಿಲ್ಲಾ ಪೊಲೀಸ್ ಕಚೇರಿ, ಕೆಜಿಎಫ್ ಡಿಸಿಆರ್ಬಿ ಪಿಎಸ್ಐ ಸಿ. ರಾಮಕೃಷ್ಣಯ್ಯರನ್ನು ಚಾಂಪಿಯನ್ರೀಫ್ ಠಾಣೆಗೆ, ಮಾರಿಕುಪ್ಪಂ ಠಾಣೆ(ಅಪರಾಧ) ಪಿಎಸ್ಐ ನಾರಾಯಣಸ್ವಾಮಿರನ್ನು ಕೋಲಾರ ಟ್ರಾಫಿಕ್-2 ಪೊಲೀಸ್ ಠಾಣೆಗೆ, ಕೋಲಾರ ಗ್ರಾಮಾಂತರ ಅಪರಾಧ ಪಿಎಸ್ಐ ರಾಯಣ್ಣರನ್ನು ಕೆಜಿಎಫ್ ಡಿಸಿಆರ್ಬಿಗೆ, ತುಮಕೂರು ಜಿಲ್ಲೆ ಹೊನ್ನಳ್ಳಿ ಠಾಣಾ ಪಿಎಸ್ಐ ರಾಘವೇಂದ್ರಪ್ರಕಾಶ್ರನ್ನು ಕೆಜಿಎಫ್ ಜಿಎಸ್ಎ ವಿಭಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಐಜಿಪಿ ಅವರು ಆದೇಶ ಹೊರಡಿಸಿದ್ದಾರೆ ಎಂದು ಕೆಜಿಎಫ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ಸೆಫಟ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

