ಕೋಲಾರ

ಅದ್ಧೂರಿ ಕುಂಕುಮ ಲಕ್ಷಾರ್ಚನೆ

Published On :

ಮಾಲೂರು: ಇಲ್ಲಿನ ಗ್ರಾಮ ದೇವತೆ ಮಾರಿಕಾಂಬ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎರಡು ದಿನಗಳ ದೇವಿಯ ಕುಂಕುಮ ಲಕ್ಷಾರ್ಚನೆ ಮತ್ತು ಗಾಯಿತ್ರಿ ಹೋಮ ಅದ್ಧೂರಿಯಾಗಿ ನಡೆಯಿತು. ಸಂಜೆ ವೇದ-ಘೋಷಣೆಗಳೂಂದಿಗೆ ಯಾಗಶಾಲಾ ಪ್ರವೇಶಿಸಿದ ರಾಜಪುರೋಹಿತ ಮೋಹನ್ ಭಟ್ಟರ ಪ್ರಧಾನಾರ್ಚಕತ್ವದಲ್ಲಿ ಋತ್ವಿಗ್ವರುಣ, ಮೃತ್ಯಂಗ್ರಹಣ, ಅಂಕರಾರ್ಪಣೆ, ರಕ್ಷಾಬಂಧನ, ಕಲಶಸ್ಥಾಪನೆ ನಡೆಯಿತು. ನಂತರ ನಡೆದ ಅರಿಶಿನ ಕುಂಕುಮ ಮಂಗಳ ದ್ರವ್ಯ ಸಮೇತ ಸಮೂಹಿಕ ಲಕ್ಷಾರ್ಚನೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಲಕ್ಷಾರ್ಜನೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ದೇವಾಲಯ ಸಮಿತಿಯವರು ದೇವಿ ಪೋಟೋ ಉಚಿತವಾಗಿ ವಿತರಿಸಿದರು. ದೇವಾಲಯ ಸಮಿತಿಯ ಅಧ್ಯಕ್ಷ ಪಿ. ವೆಂಕಟೇಶ್, ತಬಲ ನಾರಾಯಣಸ್ವಾಮಿ ಇದ್ದರು.


'ಮೌಢ್ಯತೆ ದೂರ ಮಾಡಲು ಶಿಕ್ಷಣ ಅಗತ್ಯ'



ಗುಡಿಬಂಡೆ: ಸಮಾಜವನ್ನು ಪೀಡಿಸುತ್ತಿರುವ ಅನಿಷ್ಟ ಪದ್ಧತಿಗಳಾದ ಬಡತನ, ಭ್ರಷ್ಟಾಚಾರ, ಮೌಢ್ಯತೆ ದೂರ ಮಾಡುವಲ್ಲಿ ಶಿಕ್ಷಣದ ಪಾತ್ರ ಅಪಾರವಾದುದು ಎಂದು ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ್ ತಿಳಿಸಿದರು.
ಪಟ್ಟಣದಲ್ಲಿ ನ್ಯೂ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಹೇಳಿರುವಂತೆ ನೀವು ಯಾವುದೇ ಕೆಲಸವನ್ನು ಮಾಡುವಾಗ ನಿಮ್ಮ ಮನಸ್ಸು, ಹೃದಯ ನಿಮ್ಮ ಸರ್ವಸ್ವವನ್ನೂ ಆ ಕೆಲಸಕ್ಕೆ ಕೊಡಿ ಆಗ ನಿಮ್ಮ ಪರಿಶ್ರಮಕ್ಕೆ ಗೆಲುವು ಸಿಗುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಮರನಾರಾಯಣ ಮಾತನಾಡಿ, ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಮಾಜಿ ಸೈನಿಕ ಸಿರಾಜುದ್ದೀನ್ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ದೇಶಭಕ್ತಿ, ದೇಶಸೇವೆ, ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದರು. ಕೃಷ್ಣಪ್ಪ, ಪಾರ್ವತಿ, ಬಿ. ಅಮೀರ್ ಜಾನ್, ಮ.ಗ. ಹೆಗಡೆ, ಪರಿಮಳ, ಬಾಬಾಜಾನ್, ಗಂಗಾಧರ, ಗೋಪಾಲಕೃಷ್ಣ, ವೆಂಕಟೇಶ, ಅಶ್ವತ್ಥಪ್ಪ, ಚೈತ್ರ, ಮೊಹಸೀನಾ, ಅಶ್ವತ್ಥಮ್ಮ, ಪೂರ್ಣಿಮಾ, ಶಿಲ್ಪಾ, ಶ್ರೀನಿವಾಸ್, ನಸ್ರೀನ್ತಾಜ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.