ಮಾಜಿ ಶಾಸಕ ಸುಧಾಕರ ಬಣ ಮೇಲುಗೈ
ಚಿಂತಾಮಣಿ: ಕತ್ತರಿಗುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ 2014-15ನೇ ಸಾಲಿನಿಂದ 2018ರ 5 ವರ್ಷದ ಅವಧಿಗೆ 11 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ ಬಣವೇ ಮೇಲುಗೈ ಸಾಧಿಸಿದೆ ಎಂದು ಚುನಾವಣಾಧಿಕಾರಿ ಸಿ.ಎ.ನಾರಾಯಣಸ್ವಾಮಿ ಘೋಷಿಸಿದ್ದಾರೆ.
ತಾಲೂಕಿನ ಕಚ್ತರಿಗುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ 11 ಸ್ಥಾನಗಳ ನಿರ್ದೇಶಕರ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ಗುಂಪುಗಳ ನಡುವೆ ತೀವ್ರ ಪೈಪೋಟಿ ಎದುರಾದರೂ ಅಂತಿಮವಾಗಿ ಎಲ್ಲಾ 11 ಸ್ಥಾನಗಳು ಮಾಜಿ ಶಾಸಕ ಸುಧಾಕರ್ ಬೆಂಬಲಿಗರ ಪಾಲಾಗಿವೆ.
ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ ಜಯಮ್ಮ 87, ಕೆ.ಎಂ.ನಾಗರಾಜು 97, ನರಸಪ್ಪ 99, ನರಸಿಂಹಯ್ಯ 94, ಎ.ನಾರಾಯಣಸ್ವಾಮಿ 93, ಕೆ.ವಿ.ವೆಂಕಟೇಶಪ್ಪ 100, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಎ.ಹನುಮಂತಪ್ಪ 88, ಹಿಂದುಳಿದ ವರ್ಗದ ನರಸಿಂಹಪ್ಪ. ಎಚ್.ಪಿ 97, ಇಮಾಮ್ ಖಾನ್ 93, ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಮ್ಮ 100, ಮುನಿನಾರಾಯಣಮ್ಮ 98 ಮತಗಳು ಪಡೆದು ಜಯಶಾಲಿಯಾಗಿದ್ದಾರೆ ಎಂದರು.
ಬೆಂಬಲಿಗರ ವಿಜಯೋತ್ಸವ: ವಿಜಯ ಸಾಧಿಸಿದ 11 ನಿರ್ದೇಶಕರಿಗೂ ಹೂಮಾಲೆ ಹಾಕಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಜಯೋತ್ಸವ ಆಚರಿಸಲಾಯಿತು. ನಂತರ ಗ್ರಾಮಸ್ಥರಿಗೆ ಹಾಗೂ ಹಾಲು ಉತ್ಪಾದಕರಿಗೆ ಗ್ರಾಮದ ಮುಖಂಡ ಪಾಲ್ ನಾರಾಯಣಸ್ವಾಮಿ ಸಿಹಿ ಹಂಚಿ ನಂತರ ಸಭೆ ಉದ್ದೇಶಿಸಿ ಮಾತನಾಡಿದರು.
ತಾಪಂ ಮಾಜಿ ಸದಸ್ಯ ಮುನಿ ಆಂಜಪ್ಪ, ಗ್ರಾಪಂ ಉಪಾಧ್ಯಕ್ಷ ಮುನಿಯಪ್ಪ, ಸದಸ್ಯ ಚಾಂದ್.ಬಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಿಪತಿರೆಡ್ಡಿ ಮತ್ತು ಕಾರ್ಯದರ್ಶಿ ಅಶ್ವಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

