ರಾಜ್ಯ ಮಟ್ಟದ ದ್ವಿತೀಯ ಬಹುಮಾನ
ಕೆಜಿಎಫ್: ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಕ್ರೀಡಾಕೂಟದಲ್ಲಿ ರಿವಲ್ವಾರ್ ಶೂಟಿಂಗ್ ಸ್ಪರ್ಧೆಯಲ್ಲಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಅವರು ರಾಜ್ಯ ಮಟ್ಟದ ದ್ವಿತೀಯ ಬಹುಮಾನ ಪಡೆದಿದ್ದಾರೆ. ಇತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಿಜಿಪಿ ಲಾಲ್ರೂಖೂಮಾಪಚಾವ್ ಸಮಕ್ಷಮ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಂದ ಎಸ್ಪಿ ಅವರು ಬಹುಮಾನ ಪಡೆದಿರುತ್ತಾರೆ.
'ದಾನ ಮಾಡುವ ಗುಣ ಬೆಳೆಸಿಕೊಳ್ಳಿ'
ಮಾಲೂರು: ದಾನ ಮಾಡುವಲ್ಲಿ ಸಿಗುವ ತೃಪ್ತಿ ಗಳಿಸುವಾಗ ಸಿಗುವುದಿಲ್ಲ ಎಂಬುಂದನ್ನು ಪ್ರತೂಬ್ಬರು ಅರಿಯಬೇಕು ಎಂದು ಓಂಕಾರ ದೇವಿಶ್ರೀ ಗುರೂಜಿ ಹೇಳಿದರು.
ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ 5 ನೇ ವಾರ್ಷಿಕೋತ್ಸವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಮಂಜುನಾಥ್ ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಆರ್.ಸಿ. ಅಪ್ಪಾಜಿಗೌಡ,ಪುರಸಭೆ ಸದಸ್ಯ ಪಚ್ಚಪ್ಪ, ರಾಮೇಗೌಡ ಇದ್ದರು. ಓಂಕಾರದೇವಿಗುರೂಜಿ ಸ್ವಾಮಿಗಳು ನರೆದಿದ್ದ ಮಹಿಳೆಯರ ಜತೆಯಲ್ಲಿ ಅವರ ಸಮಸ್ಯೆಗಳಿಗಾಗಿ ಸಂವಾದ ನಡೆಸಿದರು. ಮಾ.ಭಾ. ಅಮರ್ಸಿಂಗ್, ಬಾಬುರಾವ್ ಸಾಳುಂಕೆ, ಎಂ.ಪಿ. ನಾಗರಾಜ್, ಬಿ.ವಿ. ಪಾಪಣ್ಣ, ಪುರಸಭೆ ಸದಸ್ಯ ಎಚ್.ವಿ. ಲಿಂಗೇಶ್ ಇದ್ದರು.
ಅದ್ಧೂರಿ ವಾರ್ಷಿಕೋತ್ಸವ: ಇಲ್ಲಿನ ಅರಳೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದ 5 ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ ಕಾಕಡಾರತಿ, ವಿಷ್ಣು ಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಮಹಾಗಣಪತಿ ಹೋಮ, ಮೂಲಮಂತ್ರ ಜಪ, ಆದಿತ್ಯಾದಿ ನವಗ್ರಹ ಹೋಮ ನಡೆಯಿತು. ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ದೇವಿಗುರೂಜಿರವನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

