ತೊರಲಕ್ಕಿ ಹಾಲು ಸಹಕಾರ ಸಂಘಕ್ಕೆ ಸದಸ್ಯರ ಆಯ್ಕೆ
ಟೇಕಲ್: ತೊರಲಕ್ಕಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಿ.ಗೊಲ್ಲಹಳ್ಳಿ ಸರೋಜಮ್ಮ ಅವಿರೋಧ ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಆರ್.ಶೋಭ, ಎಸ್.ವೆಂಕಟಲಕ್ಷ್ಮಮ್ಮ, ಜಿ.ನಾರಾಯಣ್, ಮೆಹಬೂಬ್, ಎನ್.ನಾಗರಾಜ್, ಕೆ.ಯಲ್ಲಪ್ಪ, ವೆಂಕಟರಾಮಪ್ಪ, ನಾಗೇಶ್, ವೆಂಕಟಲಕ್ಷ್ಮಮ್ಮ, ವನಿತಮ್ಮ ಆಯ್ಕೆಯಾಗಿದ್ದು. ಚುನಾವಣಾಧಿಕಾರಿಯಾಗಿ ಪಿಡಿಒ ಪಿ. ಕೃಷ್ಣಪ್ಪ ಕಾರ್ಯನಿರ್ವಹಿಸಿದರು.
ಎಂಪಿಸಿಎಸ್ಗೆ ನಿರ್ದೇಶಕರ ಆಯ್ಕೆ
ಗುಡಿಬಂಡೆ: ಗುಡಿಬಂಡೆ ಎಂಪಿಸಿಎಸ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸುಬ್ಬರಾಯಪ್ಪ, ಉಪಾಧ್ಯಕ್ಷರಾಗಿ ಜಿ.ಗಂಗಾಧರಪ್ಪ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ: ತಾಲೂಕಿನ ಪೋಲಂಪಲ್ಲಿ ಎಂಪಿಸಿಎಸ್ ಅಧ್ಯಕ್ಷರಾಗಿ ಪಿ.ಸಿ.ಮಂಜುನಾಥ್, ಉಪಾಧ್ಯಕ್ಷರಾಗಿ ಪಿ.ಎಸ್.ಜಯಚಂದ್ರರೆಡ್ಡಿ, ಉಲ್ಲೋಡು ಎಂಪಿಸಿಎಸ್ ಅಧ್ಯಕ್ಷರಾಗಿ ಕೆ.ಎ.ನರಸಿಂಹರೆಡ್ಡಿ, ಉಪಾಧ್ಯಕ್ಷರಾಗಿ ನಾಗೇಶ, ಚಿಕ್ಕನಂಚರ್ಲು ಎಂಪಿಸಿಎಸ್ ಅಧ್ಯಕ್ಷರಾಗಿ ಸಿ.ವಿ.ಚೌಡರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: 9 ಬಂಧನ
ಶ್ರೀರಂಗಪಟ್ಟಣ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 9 ಮಂದಿಯನ್ನು ಬಂಧಿಸಿ 25 ಸಾವಿರ ನಗದು, 4 ಮೊಬೈಲ್ ಹಾಗೂ 6 ಬೈಕ್ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ತಾಲೂಕಿನ ಸಬ್ಬನಕುಪ್ಪೆ ಮತ್ತು ಗೌರಿಪುರ ಗ್ರಾಮಗಳಲ್ಲಿ ನಡೆದಿದೆ.
ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪಟ್ಟಣದ ಪೊಲೀಸರು ಗೌರಿಪುರದಲ್ಲಿ 5 ಜನ ಮತ್ತು ಸಬ್ಬನಕುಪ್ಪೆಯಲ್ಲಿ 4 ಜನರನ್ನು ಬಂಧಿಸಿದ್ದಾರೆ. ಎರಡು ಸ್ಥಳಗಳಿಂದ ಪಣಕ್ಕಿಟ್ಟಿದ್ದ ರು. 25,800 ನಗದು ಸೇರಿದಂತೆ ಸ್ಥಳದಲ್ಲಿದ್ದ 6 ಬೈಕ್ ಸೇರಿದಂತೆ ಬಂಧಿತರಿಂದ 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸಣ್ಣಮೊಗ , ರಘು, ವಿಜಯ್ಕುಮಾರ್, ಸುಭಾಷ್, ಸಬ್ಬನಕುಪ್ಪೆ ರಮೇಶ್ ಬಂಧಿತರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

